11:23 PM (IST) Aug 11

Karnataka News Live ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು

ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

Read Full Story
11:04 PM (IST) Aug 11

Karnataka News Live ಪೋಸ್ಟ್ ಆಫೀಸ್‌ನ ಈ ಪ್ಲಾನ್‌ನಲ್ಲಿದೆ ಬಂಪರ್ ಲಾಭ! ತಿಂಗಳಿಗೆ ಸಣ್ಣ ಉಳಿತಾಯ ಮಾಡಿ, ₹10 ಲಕ್ಷದೊಂದಿಗೆ 7 ತೊಲ ಚಿನ್ನ ನಿಮ್ಮದಾಗಿಸಿ!

ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆಯು ಸಣ್ಣ ಮಾಸಿಕ ಹೂಡಿಕೆಯ ಮೂಲಕ ದೊಡ್ಡ ಮೊತ್ತವನ್ನು ಗಳಿಸಲು ಉತ್ತಮ ಅವಕಾಶ ನೀಡುತ್ತದೆ. ದಿನಕ್ಕೆ ₹100 ಉಳಿಸುವ ಮೂಲಕ 5 ವರ್ಷಗಳಲ್ಲಿ ₹2 ಲಕ್ಷಕ್ಕೂ ಹೆಚ್ಚು ಗಳಿಸಬಹುದು, ಮತ್ತು ದಿನಕ್ಕೆ ₹500 ಉಳಿಸಿದರೆ ₹10 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಬಹುದು.

Read Full Story
10:58 PM (IST) Aug 11

Karnataka News Live ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..

ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ

Read Full Story
10:37 PM (IST) Aug 11

Karnataka News Live ಯಶ್ ‘ಟಾಕ್ಸಿಕ್’ ಸಿನಿಮಾ ರಿಜೆಕ್ಟ್ ಮಾಡಿದ ಆ ಸ್ಟಾರ್ ಹೀರೋ ಯಾರು? ಗೋಲ್ಡನ್ ಚಾನ್ಸ್ ಮಿಸ್ ಮಾಡ್ಕೊಂಡ್ರಾ..?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವನ್ನು ಮೊದಲು ಕಾಲಿವುಡ್ ನಟ ಸೂರ್ಯ ಅವರು ರಿಜೆಕ್ಟ್ ಮಾಡಿದ್ದರು ಎಂಬ ಸುದ್ದಿ ವೈರಲ್ ಆಗಿದೆ. ಸೂರ್ಯ ಅವರು ಚಿತ್ರವನ್ನು ನಿರಾಕರಿಸಲು ಬಲವಾದ ಕಾರಣ ಕೂಡ ಇದೆ.

Read Full Story
10:32 PM (IST) Aug 11

Karnataka News Live ಬಿಗ್‌ಬಾಸ್‌ ಎಂಟ್ರಿಗಾಗಿ ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ, ನಿಮಗೆ ಅರ್ಹತೆಯೇ ಇಲ್ಲ ಎಂದ ಸಂಗೀತಾ ಶೃಂಗೇರಿ!

ಕನ್ನಡ ಬಿಗ್‌ಬಾಸ್‌ ಪ್ರವೇಶಕ್ಕಾಗಿ ನಡೆಯುತ್ತಿರುವ 'ಅಗ್ನಿಪರೀಕ್ಷೆ' ಶೋನಲ್ಲಿ ನಾಟಕೀಯ ಘಟನೆಗಳು ನಡೆದಿವೆ. ಸೋಶಿಯಲ್ ಮೀಡಿಯಾ ಸ್ಟಾರ್ ಗಂಗಾ ಅವರ ವರ್ತನೆಯನ್ನು 'ಕ್ರಿಂಜ್' ಎಂದು ಕರೆದು ಸಂಗೀತಾ ಶೃಂಗೇರಿ ತಿರಸ್ಕರಿಸಿದರೆ, ಇನ್ನೊಬ್ಬ ಸ್ಪರ್ಧಿ ವಿನಯ್ ಗೌಡರ ಅರ್ಹತೆಯನ್ನೇ ಪ್ರಶ್ನಿಸಿದ್ದಾರೆ.
Read Full Story
10:03 PM (IST) Aug 11

Karnataka News Live ಜೂನಿಯರ್ NTRಗೆ ಮೇಜರ್ ಸರ್ಜರಿ.. ಸ್ಟಾರ್ ನಟನ ಆರೋಗ್ಯದಲ್ಲಿ ಹಠಾತ್ ಏನಾಯ್ತು..?

ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಜೂನಿಯರ್ ಎನ್‌ಟಿಆರ್, ವೈದ್ಯರ ಸಲಹೆಯಂತೆ ಹೈದರಾಬಾದ್‌ನಲ್ಲಿ ಮೇಜರ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Read Full Story
09:55 PM (IST) Aug 11

Karnataka News Live ಆಪ್ತ ಸ್ನೇಹಿತರ ಜೊತೆ ವಿಶೇಷವಾಗಿ ʻಬ್ರೈಡ್‌ ಟು ಬಿʼ ಪಾರ್ಟಿ ಆಚರಿಸಿಕೊಂಡ ಚಿಕ್ಕಣ್ಣ ಭಾವಿ ಪತ್ನಿ ಪಾವನಾ!

ಹಾಸ್ಯ ನಟ ಚಿಕ್ಕಣ್ಣ ಅವರು ಆಗಸ್ಟ್ 29 ಮತ್ತು 30 ರಂದು ಮೈಸೂರಿನಲ್ಲಿ ಪಾವನಾ ಗೌಡ ಅವರನ್ನು ವಿವಾಹವಾಗಲಿದ್ದಾರೆ. ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭಾವಿ ಪತ್ನಿ ಪಾವನಾ ಗೌಡ ಅವರ 'ಬ್ರೈಡ್ ಟು ಬಿ' ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Read Full Story
09:40 PM (IST) Aug 11

Karnataka News Live Viral - ಇದು ಸಾಮನ್ಯ ಅಲ್ಲ! ಭಯಾನಕ ಅಘೋರಿಯನ್ನೇ ಮಂಡಿಯೂರಿ ಕೂರುವಂತೆ ಮಾಡಿದ ಮಗು; ದಂಗಾದ ಜನ! ಅಷ್ಟಕ್ಕೂ ಆಗಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಅಘೋರಿ ಸಾಧುವೊಬ್ಬರು ಪುಟ್ಟ ಹುಡುಗಿಯ ಮುಂದೆ ತಲೆಬಾಗಿ ನಮಸ್ಕರಿಸಿದ್ದಾರೆ. ವಯಸ್ಸು ಅಥವಾ ಸ್ಥಾನಮಾನಕ್ಕಿಂತ ಮುಗ್ಧತೆ ಮತ್ತು ಪರಿಶುದ್ಧತೆ ಶ್ರೇಷ್ಠ ಎಂಬುದನ್ನು ಈ ಹೃದಯಸ್ಪರ್ಶಿ ಘಟನೆ ಸಾರುತ್ತದೆ. ಈ ಮೌನ ದೃಶ್ಯವು ಮಾನವೀಯತೆಯ ಪಾಠವನ್ನು ಹೇಳುತ್ತಾ ನೆಟ್ಟಿಗರ ಮನಗೆದ್ದಿದೆ.
Read Full Story
08:20 PM (IST) Aug 11

Karnataka News Live App ki adalat - ಮೋದಿ, ಶಾರುಖ್‌, ವಾಜಪೇಯಿ ಕೂತ ಹಾಟ್‌ಸೀಟ್‌ನಲ್ಲಿ ಯಶ್; ಈ ಶೋನಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ!

ಕೆಜಿಎಫ್ ಖ್ಯಾತಿಯ ನಟ ಯಶ್, 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ, ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸ್ಯಾಂಡಲ್‌ವುಡ್‌ಗೆ ಹೆಮ್ಮೆ ತಂದಿದ್ದಾರೆ.
Read Full Story
07:54 PM (IST) Aug 11

Karnataka News Live BGC Hospitals Kannada YouTube ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್‌; ಜೀರ್ಣಾಂಗ ಆರೋಗ್ಯ ಶಿಕ್ಷಣದಲ್ಲಿ ಐತಿಹಾಸಿಕ ಸಾಧನೆ

ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ನ ಕನ್ನಡ ಯೂಟ್ಯೂಬ್ ಚಾನೆಲ್ 1 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ತಲುಪಿದೆ. ಈ ಚಾನೆಲ್ ಹೊಟ್ಟೆ, ಯಕೃತ್ತು, ಮತ್ತು ಇತರ ಜೀರ್ಣಾಂಗ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.

Read Full Story
07:01 PM (IST) Aug 11

Karnataka News Live ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅವಳಿಗಳ ದರ್ಬಾರ್.. ದಕ್ಷಿಣ ಆಫ್ರಿಕಾದಲ್ಲಿ ಸಹೋದರರ ಸವಾಲ್..!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಳಿ ಸೋದರರ ಹವಾ ಮತ್ತೊಮ್ಮೆ ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ವಾ - ಮಾರ್ಕ್ ವಾ, ನ್ಯೂಜಿಲೆಂಡ್‌ನ ಹ್ಯಾಮಿಶ್ ಮಾರ್ಷಲ್ - ಜೇಮ್ಸ್ ಮಾರ್ಷಲ್ ನಂತರ ಈಗ ದಕ್ಷಿಣ ಆಫ್ರಿಕಾದ ಜಾನ್ಸೆನ್ ಸೋದರರು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.

Read Full Story
06:45 PM (IST) Aug 11

Karnataka News Live 'ಅನ್ನ ವಿಷ ಮಾಡಿದರೆ ಅವರ ವಂಶವೇ ಸರ್ವನಾಶ..' ಹೋಟೆಲ್ ಮಾಫಿಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್‌

ಬೆಂಗಳೂರಿನ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ, ಫಂಗಸ್‌ಯುಕ್ತ ಆಹಾರ ಪತ್ತೆಯಾದ ಪ್ರಕರಣಕ್ಕೆ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ರೋಗಗ್ರಸ್ತ ಊಟದಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ.

Read Full Story
06:22 PM (IST) Aug 11

Karnataka News Live ನೀಟ್‌ ವಿದ್ಯಾರ್ಥಿನಿಯಾಗಿದ್ದ ತಂಗಿ ಸಾವು, ದುಬೈನಲ್ಲಿ ಇಂಜಿನಿಯರ್‌ ಆಗಿದ್ದ ಅಣ್ಣ ಮಂಗಳೂರಿಗೆ ಬಂದು ಜೀವ ಮುಗಿಸಿದ!

ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ಜೂನ್‌ನಲ್ಲಿ ಸಾವು ಕಂಡ ಕೇರಳದ ಯುವತಿಯ ಅಣ್ಣ, ತಂಗಿಯ ಅಗಲಿಕೆಯ ನೋವಿನಿಂದ ಮಂಗಳೂರಿನ ಹೋಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. 24 ವರ್ಷದ ಅರ್ಜುನ್, ತೀವ್ರ ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.

Read Full Story
05:53 PM (IST) Aug 11

Karnataka News Live Viral News - ಹಣದಿಂದ ಸೌಕರ್ಯ ಕೊಳ್ಳಬಹುದು, ನೆನಪುಗಳನ್ನಲ್ಲ! 12 ರೂ., ಬಸ್ ಪಯಣದಲ್ಲಿ ದೊರೆತ, ಬೆಲೆ ಕಟ್ಟಲಾಗದ ಆ ದಿನಗಳು!

ಬೆಂಗಳೂರಿನಲ್ಲಿ ರ್ಯಾಪಿಡೋ ಬುಕ್ ಮಾಡಲು ವಿಫಲರಾದ ವ್ಯಕ್ತಿಯೊಬ್ಬರು, ಅನಿವಾರ್ಯವಾಗಿ ಬಿಎಂಟಿಸಿ ಬಸ್ ಹತ್ತುತ್ತಾರೆ. ಕೇವಲ 12 ರೂಪಾಯಿಯ ಈ ಪ್ರಯಾಣವು ಅವರನ್ನು ತಮ್ಮ ಶಾಲಾ-ಕಾಲೇಜು ದಿನಗಳ ನೆನಪಿನ ಲೋಕಕ್ಕೆ ಕರೆದೊಯ್ದ ಟ್ರಾವೆಲ್!

Read Full Story
05:32 PM (IST) Aug 11

Karnataka News Live Kalaburagi - ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ - ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..

ಹೆಂಡತಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ, ಜಿಲೆಟಿನ್ ಕಡ್ಡಿಗಳನ್ನು ಇಡೀ ಮೈಗೆ ಕಟ್ಟಿಕೊಂಡು ಮನೆಗೆ ನುಗ್ಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಭೀಕರ ದುರಂತದಲ್ಲಿ ಆತ ಹಾಗೂ ಆತನ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ, ಮಗ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯವೇ ಬೆಚ್ಚಿ ಬೀಳಿಸುವ ಈ ಭಯಾನಕ ಘಟನೆಯ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read Full Story
05:14 PM (IST) Aug 11

Karnataka News Live ಹಸುಗಳಿಂದ ಬೆಂಗಳೂರಲ್ಲಿ ಭಾರೀ ಟ್ರಾಫಿಕ್ ಜಾಮ್ ಆರೋಪ - ಗೋವುಗಳ ಮಾಲೀನ ವಿರುದ್ಧ ಎಫ್‌ಐಆರ್..!

ಬೆಂಗಳೂರಲ್ಲಿ ಒಂದು ಅಪರೂಪದ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಜಾಮ್ ಮಾಡಿದ ಹಸುಗಳ ಮಾಲೀಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

Read Full Story
05:03 PM (IST) Aug 11

Karnataka News Live Tamilnadu Politics - ಡಿಎಂಕೆ-ಬಿಜೆಪಿ ನಡುವೆ ಮೈತ್ರಿ? ದ್ರಾವಿಡ ಪಕ್ಷಕ್ಕೆ ನೇರ ಆಹ್ವಾನ ನೀಡಿತಾ ಕೇಸರಿ ಪಡೆ! ವೈರಲ್‌ ಆ ಒಂದು ಮಾತು!

ಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕುರಿತಾದ ಚರ್ಚೆ ತೀವ್ರಗೊಂಡಿವೆ. ರಾಜಕೀಯದಲ್ಲಿ ಶಾಶ್ವತ ಶತ್ರು-ಮಿತ್ರರಿಲ್ಲ ಎಂಬ ಡಿಎಂಕೆ ನಾಯಕಿ ಕನಿಮೊಳಿ ಸೋಮು ಮತ್ತು ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರ ಒಂದೇ ರೀತಿಯ ಹೇಳಿಕೆಗಳು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

Read Full Story
04:09 PM (IST) Aug 11

Karnataka News Live Viral - 40ನೇ ವಯಸ್ಸಿನಲ್ಲಿ ಕೆಲಸ ಹೋಯ್ತು, ಆದ್ರೆ ವ್ಯಕ್ತಿ ಹೇಳಿದ್ದೇನು ಗೊತ್ತಾ? ಆ ಮಾತು ಈಗ ಫುಲ್ ವೈರಲ್!

40ನೇ ವಯಸ್ಸಿನಲ್ಲಿ 18 ವರ್ಷಗಳ ಕಾರ್ಪೊರೇಟ್ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು, ಇದನ್ನು ಜೀವನದ 'ರೀಸೆಟ್ ಬಟನ್' ಎಂದು ಪರಿಗಣಿಸಿದ್ದಾರೆ. ಈ ಅನಿರೀಕ್ಷಿತ ಲೇಆಫ್ ಅವರಿಗೆ ನಿಜವಾದ ಸ್ನೇಹ, ಹಣದ ಮೌಲ್ಯ ಮತ್ತು ಕಾರ್ಪೊರೇಟ್ ಭ್ರಮೆಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಎಂದಿದ್ದಾರೆ. ಅಲ್ಲದೇ ಅವರ ಅನುಭವದ ಮಾತಿನ ವಿಡಿಯೋ ಈಗ ವೈರಲ್ ಆಗುತ್ತಿದೆ.

Read Full Story
03:13 PM (IST) Aug 11

Karnataka News Live ‘ದಾನ ನಾಶ ಮಾಡಿದರೆ ಅಪಾರ ಪಾಪ’ ಕ್ರಿ.ಶ 800 ರ ಅಪರೂಪದ ಶಾಸನ ಪತ್ತೆ - ಕರಾವಳಿ ಇತಿಹಾಸಕ್ಕೆ ಸಿಕ್ಕಿತು ಹೊಸ ಬೆಳಕು!

ಹೊನ್ನಾವರದ ಕಡಗೇರಿ ಗ್ರಾಮದಲ್ಲಿ ಪತ್ತೆಯಾದ ಕ್ರಿ.ಶ 800ರ ಶಾಸನವು ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ, ಹಳೆಗನ್ನಡ ಭಾಷೆ, ಮತ್ತು ದೇವಾಲಯದ ಆಡಳಿತದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ದಾನ ವ್ಯವಸ್ಥೆ, ಕೃಷಿ ಆದಾಯ ಮತ್ತು ಅಂದಿನ ಸಾಮಾಜಿಕ ನಿಯಮಗಳನ್ನು ತಿಳಿಸುವ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Read Full Story
03:03 PM (IST) Aug 11

Karnataka News Live Inspiring Story - ಸೋಲೊಪ್ಪದ ಟೆಕ್ಕಿ - 36 ಇಂಟರ್ವ್ಯೂಗಳಲ್ಲಿ ರಿಜೆಕ್ಷನ್ ಅನುಭವಿಸಿದ ಬೆಂಗಳೂರಿನ ಯುವಕನಿಗೆ ಈಗ ₹30 ಲಕ್ಷದ ಪ್ಯಾಕೇಜ್!

ನನಗೆ ದೊಡ್ಡ ಸಂಬಳ ಸಿಕ್ಕಿಲ್ಲ, ಆದರೆ ಇಷ್ಟು ತಿಂಗಳುಗಳ ನಂತರ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಸಿಲು ಇದರಿಂದ ನನಗೆ ಸಾಧ್ಯವಾಗಿದೆ ಎಂದು ಯುವಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

Read Full Story