ಬೆಂಗಳೂರಿನಲ್ಲಿ ಮಧ್ಯರಾತ್ರಿ ಸುರಿದ ಭರ್ಜರಿ ಮಳೆಯ ನಡುವೆ ಭಾರೀ ಸ್ಫೋಟದ ಸದ್ದೊಂದು ಕೇಳಿಬಂದು ಜನರು ಬೆಚ್ಚಿಬಿದ್ದಿದ್ದಾರೆ. ಜಯನಗರ ಸೇರಿದಂತೆ ಹಲವೆಡೆ ಕಿಟಕಿಗಳು ನಡುಗಿದ ಅನುಭವವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ನಿಗೂಢ ಸದ್ದಿನ ಬಗ್ಗೆ ಚರ್ಚೆಯಾಗಿದೆ. ಯಾವ ಸದ್ದು? ಹೇಗೆ ಸ್ಫೋಟಗೊಂಡಿದ್ದು?

ಬೆಂಗಳೂರು (ಅ.6): ಸಿಲಿಕಾನ್ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭರ್ಜರಿ ಮಳೆಯ ನಡುವೆ ಮಧ್ಯರಾತ್ರಿ ಕೇಳಿಬಂದ ಭಾರೀ ಸ್ಫೋಟದ ಸದ್ದಿಗೆ ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ.

ರಾತ್ರಿಯ ಭಾರೀ ಸ್ಫೋಟ ಯಾವುದು?

ರಾತ್ರಿ ಸರಿಯಾಗಿ 12:03ರ ಸುಮಾರಿಗೆ ಕೇಳಿಬಂದ ಸದ್ದು ಎಷ್ಟು ಜೋರಾಗಿತ್ತೆಂದರೆ ಸುತ್ತಮುತ್ತಲಿನ ಮನೆಗಳ ಕಿಟಕಿಗಳೇ ನಡುಗಿದ ಅನುಭವವಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದ್ದಕ್ಕಿದ್ದಂತೆ ಕೇಳಿಬಂದ ಭಾರೀ ಶಬ್ದಕ್ಕೆ ಕೆಲವರು ಮನೆಯಿಂದ ಹೊರಗೆ ಬಂದು ಏನಾಯಿತೆಂದು ಗಾಬರಿ ಬಿದ್ದಿದ್ದಾರೆ. ಜಯನಗರ ಸೇರಿದಂತೆ ಬಹುತೇಕ ಕಡೆ ಸ್ಫೋಟದ ಸದ್ದು ಕೇಳಿಬಂದ ಹಿನ್ನೆಲೆ ಈ ನಿಗೂಢ ಸದ್ದಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರಿಯೇ ಕೆಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವರು ತಮಗೂ ಇಂಥ ಸದ್ದು ಕೇಳಿದ್ದಾಗಿ ಹೇಳಿದ್ದಾರೆ. ಅಷ್ಟಕ್ಕೂ ಈ ದೊಡ್ಡ ಸ್ಫೋಟದ ಸದ್ದಿಗೆ ಕಾರಣವೇನು ಎಂಬ ಆತಂಕ, ಕುತೂಹಲವೂ ಹೆಚ್ಚಾಗಿತ್ತು.

ಸ್ಫೋಟದ ಸದ್ದು ಎಲ್ಲಿಯದು?

ಇನ್ನು ಈ ಭಾರೀ ಸ್ಫೋಟದ ಸದ್ದಿನ ಹಿಂದಿನ ಕಾರಣದ ಬಗ್ಗೆ ಹವಾಮಾನ ವರದಿಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ. ಜಯನಗರದಲ್ಲಿ ರಾತ್ರಿ ವೇಳೆ ಸುಮಾರು 95%ನಷ್ಟು ಆರ್ದ್ರತೆ ಇದ್ದಿದ್ದು ವಾತಾವರಣದ ಪರಿಸ್ಥಿತಿಯಿಂದಾಗಿ ಸದ್ದು ಮತ್ತಷ್ಟು ತೀವ್ರವಾಗಿ ಕೇಳಿಸಿರಬಹುದು ಎಂದು ಅದರಲ್ಲಿ ಹೇಳಲಾಗಿದೆ.

ಹಾಗಾದರೆ ಮಧ್ಯರಾತ್ರಿ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿದ ಆ ಸದ್ದು ಯಾವುದು? ಅದು ಯಾವುದೇ ಸ್ಫೋಟವಾಗಿರಲಿಲ್ಲ. ದಟ್ಟ ಮೋಡಗಳಿಂದ ಸಂಭವಿಸಿದ ಬಲಿಷ್ಠ ಸಿಡಿಲಿನ ಸದ್ದು ಎಂಬುದು ಗೊತ್ತಾಗಿ ನಿಟ್ಟುಸಿರುವ ಬಿಟ್ಟಿದ್ದಾರೆ. ರಾತ್ರಿ ಪ್ರಶಾಂತ ವಾತಾವರಣದಲ್ಲಿ ಸ್ಫೋಟದ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿಧ್ವನಿಸಿ ಆಘಾತ ಶಬ್ದದಂತೆ ಕೇಳಿಸಿತ್ತು. ನಿಮಗೂ ಇದರ ಅನುಭವ ಆಗಿದೆಯೇ ಕಾಮೆಂಟ್‌ನಲ್ಲಿ ತಿಳಿಸಿ.

View post on Instagram