ಬೆಂಗಳೂರಿನಲ್ಲಿ ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಸರ್ಕಾರವು ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ಈ ಅವಕಾಶ ಜೂ.21 ರಿಂದ ಜು.10 ರವರೆಗೆ ಲಭ್ಯವಿದ್ದು, ನಗರದ 12 ಕಡೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ ಹಾಗೂ ವಿವಿಧ ಆ್ಯಪ್‌ಗಳ ಮೂಲಕವೂ ದಂಡ ಪಾವತಿಸಬಹುದು.

ಬೆಂಗಳೂರು (ಜೂ.19): ಹಳೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಗೆ ನಗರದ 12 ಕಡೆ ಸಂಚಾರ ಪೊಲೀಸರು ವಿಶೇಷ ಕೌಂಟರ್‌ಗಳನ್ನು ತೆರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಂಡ ಪಾವತಿ ಸುಲಭ

ದಂಡ ಪಾವತಿಗೆ ವಿವರಗಳನ್ನು ರಾಜ್ಯ ಪೊಲೀಸ್ ಆ್ಯಪ್ (KSP App) ಪಡೆಯಬಹುದು. ಕೆಎಸ್‌ಪಿ ಆ್ಯಪ್ ಮಾತ್ರವಲ್ಲದೆ ಸಂಚಾರ ವಿಭಾಗದ ಬಿಟಿಪಿ ಅಸ್ತ್ರಂ ಆ್ಯಪ್‌, ಬೆಂಗಳೂರು ವನ್‌ ಹಾಗೂ ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡ ಪಾವತಿಸಬಹುದು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ50% ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡಿದೆ. ಈ ಅವಕಾಶ ಜೂ.21 ರಿಂದ ಜು.10 ರವರೆಗೆ ಇರಲಿದೆ.

ವಿಶೇಷ ಕೌಂಟರ್‌ಗಳ ವಿವರ:

1.ಹೆಣ್ಣೂರು ಜಂಕ್ಷನ್, ರಿಂಗ್ ರಸ್ತೆ2.ದೇವಸಂದ್ರ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ,3.ಕುಂದಲಹಳ್ಳಿ ಜಂಕ್ಷನ್, ಓಲ್ಡ್ ಏರ್‌ಪೋರ್ಟ್ ರಸ್ತೆ4.ಮೈಸೂರು ಬ್ಯಾಂಕ್ ಜಂಕ್ಷನ್, ಕೆ.ಜಿ. ರಸ್ತೆ.5.ಸುಮ್ಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ.6.ಮೆಟ್ರೋ (ಬಿ.ಹೆಚ್.ಇ.ಎಲ್.), ಮೈಸೂರು ರಸ್ತೆ.7.ಆ‌ರ್‌ಟಿಒ ಕಚೇರಿ ಹತ್ತಿರ, 12ನೇ ಮುಖ್ಯ ರಸ್ತೆ.8.ಜಾಲಹಳ್ಳಿ ಕ್ರಾಸ್ ಜಂಕ್ಷನ್, ತುಮಕೂರು ರಸ್ತೆ.9.ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ.10.ಸಾಗರ ಜಂಕ್ಷನ್, ಕೆ.ಜಿ.ರಸ್ತೆ.11.ಹೊಸೂರು ರಸ್ತೆ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ರಸ್ತೆ12.ಗೊಟ್ಟಿಗೆರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ