Asianet Suvarna News Asianet Suvarna News

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತುಮಕೂರು ಬಳಿ ನಿರ್ಮಾಣ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಟ್ರಾಫಿಕ್ ಹೊರೆ ತಗ್ಗಿಸಲು ತುಮಕೂರು ರಸ್ತೆಯಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. 

Bengaluru second airport may come up near Tumkur and Chitradurga stretch sat
Author
First Published Nov 30, 2023, 4:38 PM IST

ಬೆಂಗಳೂರು (ನ.30): ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿಯ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾಗುತ್ತಿರುವ ಸ್ಥಳಾವಕಾಶದ ಕೊರತೆ ಹಾಗೂ ಹೊರೆಯನ್ನು ತನ್ನಿಸುವ ನಿಟ್ಟಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬೆಂಗಳೂರಿನ ಸುತ್ತಲಿನ ಪ್ರದೇಶದಲ್ಲಿ ಭೂಮಿಯನ್ನು ಹುಡುಕಾಡುತ್ತಿದ್ದು, ಈಗ ತುಮಕೂರು- ಚಿತ್ರದುರ್ಗ ನಡುವಿನ ಮಾರ್ಗದಲ್ಲಿ ಸ್ಥಳ ಸೂಕ್ತವಾಗಿದೆ ಎಂಬ ಮಾತು ಕೇಳಿಬಂದಿದೆ.

ಬೆಂಗಳೂರಿನ ಅಗತ್ಯತೆಗಳನ್ನು ಪೂರೈಸಲು ಮತ್ತು ವಿಮಾನ ಪ್ರಯಾಣ ಮೂಲ ಸೌಕರ್ಯವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು 2ನೇ ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾಗಿದೆ. ಆದ್ದರಿಂದ ಈಗಾಘಲೇ ಹಲವು ಸ್ಥಳಗಳನ್ನು ಗುರುತಿಸಲಾಗಿದ್ದರೂ ವಿವಿಧ ಕಾರಣಗಳಿಂದಾಗಿ ಯಾವುದೇ ಸ್ಥಳವನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿಲ್ಲ. ಆದರೆ, ಈಗ ತಜ್ಞರು ಹೇಳುವ ಮಾಹಿತಿಯಂತೆ ತುಮಕೂರು-ಚಿತ್ರದುರ್ಗ ಮಾರ್ಗದಲ್ಲಿಯೇ ಬೆಂಗಳೂರಿನ ವಿಸ್ತರಣೆಯ 2ನೇ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತವೆಂದು ಸಲಹೆ ನೀಡಿದ್ದಾರೆ. ಜೊತೆಗೆ, ಐಟಿ-ಬಿಟಿ ಸಿಟಿ ಬೆಂಗಳೂರಿಗೆ ಹತ್ತಿರವಿರುವ ಸ್ಥಳಗಳಲ್ಲಿ ತುಮಕುರು ಕೂಡ ಒಂದಾಗಿದೆ. 2ನೇ ವಿಮಾನ ನಿಲ್ದಾಣ ನಿರ್ಮಾಣದ ನಂತರವೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೇ ಪ್ರಥಮ ಆದ್ಯತೆಯು ನಿಲ್ದಾಣವಾಗಿ ಮುಂದುವರಿಯಲಿದೆ.

ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಸಚಿವ ಕೃಷ್ಣ ಭೈರೇಗೌಡ

ಇನ್ನು ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಆರಂಭಿಕ ಹಂತದಲ್ಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ತುಮಕೂರು- ಚಿತ್ರದುರ್ಗ ಮಾರ್ಗದಲ್ಲಿ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ. ಆರಂಭದಲ್ಲಿ HAL ನಲ್ಲಿ ಹಳೆಯ ವಿಮಾನ ನಿಲ್ದಾಣದ ಪುನರಾರಂಭವನ್ನು ಪರಿಗಣಿಸಿ, ಬೆಳವಣಿಗೆಗೆ ಸೀಮಿತ ಸ್ಥಳಾವಕಾಶದ ಬಗ್ಗೆ ಕಾಳಜಿಯು ಪರ್ಯಾಯ ಆಯ್ಕೆಗಳನ್ನು ಹುಡುಕಲು ಸರ್ಕಾರ  ತೀರ್ಮಾನ ಕೈಗೊಂಡಿತ್ತು. ಜೊತೆಗೆ, ಈಗ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಗಳು, ಸಂಭಾವ್ಯ ವಿಸ್ತರಣೆಗಳು ಅಥವಾ ಟ್ರಾಫಿಕ್ ಪರಿಗಣನೆಗಳ ಕಾರಣದಿಂದಾಗಿ ಗುರುತಿಸಲಾದ ಸ್ಥಳಗಳಲ್ಲಿ ವಿಮಾನ ನಿಲ್ದಾಣ ಕಾರ್ಯಸಾಧ್ಯವಲ್ಲವೆಂದು ಹೇಳಲಾಗುತ್ತಿದೆ.

ಈಗಾಗಲೇ ನಮ್ಮ ದೇಶದಲ್ಲಿ ಮುಂಬೈ ಮತ್ತು ಗೋವಾದಂತಹ ನಗರಗಳಲ್ಲಿ ಒಂದೇ ನಗರದಲ್ಲಿ ಅನೇಕ ವಿಮಾನ ನಿಲ್ದಾಣಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಪ್ರೇರಣೆ ಪಡೆದ ಕರ್ನಾಟಕ ಸರ್ಕಾರವು ಕೂಡ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಳಗಳನ್ನು ಗುರುತಿಸುವ ಆರಂಭಿಕ ಹಂತದಲ್ಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ 150 ಕಿ.ಮೀ. ವೈಮಾನಿಕ ಅಂತರದಲ್ಲಿ ಸಾಮಾನ್ಯವಾಗಿ ಯಾವುದೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸಬಾರದು ಎಂದು ಷರತ್ತು ಇದೆ. ಅದೇ ನಗರದಲ್ಲಿ ಅಥವಾ ಸಮೀಪದಲ್ಲಿ 2ನೇ ವಿಮಾನ ನಿಲ್ದಾಣವನ್ನು ಅನುಮತಿಸುವ ಸಂದರ್ಭಗಳಲ್ಲಿ, ಎರಡು ವಿಮಾನ ನಿಲ್ದಾಣಗಳ ನಡುವಿನ ಸಂಚಾರ ವಿತರಣೆಗೆ ಸ್ಪಷ್ಟ ನಿಯತಾಂಕಗಳನ್ನು ವ್ಯಾಖ್ಯಾನಿಸಬೇಕು ಎಂದು ಹೇಳಲಾಗುತ್ತಿದೆ. ಆದ್ದರಿಂದ ಈಗ 2ನೇ ವಿಮಾನ ನಿಲ್ದಾಣದ ತೀರ್ಮಾನವನ್ನು ತುಮಕೂರು ನಗರವನ್ನು ದಾಟಿ ಚಿತ್ರದುರ್ಗಕ್ಕೆ ಸಮೀಪ ಆಗುವಂತೆ ನಿರ್ಮಾಣ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.

ನೀವು ಟ್ರಾಕ್ಟರ್ ಮಾಲೀಕರು, ನನ್ನ ಬಳಿ ಸೈಕಲ್ ಕೂಡ ಇಲ್ಲ; ಮೋದಿ ಮಾತಿಗೆ ನಕ್ಕು ನೀರಾದ ಗ್ರಾ.ಪಂ ಅಧ್ಯಕ್ಷೆ!

ಬೆಂಗಳೂರಿನ ಉದ್ದೇಶಿತ 2ನೇ ವಿಮಾನ ನಿಲ್ದಾಣದ ಸುತ್ತಲಿನ ವಿಮಾನ ನಿಲ್ದಾಣಗಳ ವಾಯು ಸಂಚಾರ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಬೇಕಿದೆ. ಜೊತೆಗೆ, ವಿಮಾನ ನಿಲ್ದಾಣಕ್ಕೆ ಸಾಕಷ್ಟು ಭೂಮಿಯನ್ನು ಒದಗಿಸುವ ಮತ್ತು ಭವಿಷ್ಯದ ವಿಸ್ತರಣೆಗೆ ಅನುವು ಮಾಡಿಕೊಡುವ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಕಳೆದ 60 ವರ್ಷಗಳ ಗುತ್ತಿಗೆ ವಿಸ್ತರಣೆಯ ಚರ್ಚೆಯ ಸಂದರ್ಭದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ ಲಿಮಿಟೆಡ್ (BIAL) ಗೆ ಈ ನಿರ್ಧಾರವನ್ನು ತಿಳಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜವಾಬ್ದಾರಿಯುತ ಬಿಐಎಎಲ್ (ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋಟ್್ರ ಲಿಮಿಟೆಡ್) ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ.

Follow Us:
Download App:
  • android
  • ios