ನೀವು ಟ್ರಾಕ್ಟರ್ ಮಾಲೀಕರು, ನನ್ನ ಬಳಿ ಸೈಕಲ್ ಕೂಡ ಇಲ್ಲ; ಮೋದಿ ಮಾತಿಗೆ ನಕ್ಕು ನೀರಾದ ಗ್ರಾ.ಪಂ ಅಧ್ಯಕ್ಷೆ!
ಕುರ್ಚಿ ತಳ್ಳುತ್ತಿದ್ದಾರೆ ಅಂದರೆ ಅವರೇ ಗ್ರಾಮಪಂಚಾಯಿತಿ ಅಧ್ಯಕ್ಷರಾಗುತ್ತಾರೆ ಎಂದು ಫಲಾನುಭವಿಗಳ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಇಷ್ಟೇ ಅಲ್ಲ ನಿಮ್ಮ ಬಳಿ ಟ್ರಾಕ್ಟರ್ ಇದೆ. ಆದರೆ ನನ್ನ ಬಳಿ ಸೈಕಲ್ ಕೂಡ ಇಲ್ಲ ಎಂದಿದ್ದಾರೆ. ಮೋದಿ ಹಾಗೂ ಫಲಾನುಭವಿಗಳ ಜೊತೆಗಿನ ಹಾಸ್ಯ ಸಂವಾದದ ವಿಡಿಯೋ ಇಲ್ಲಿದೆ.
ನವದೆಹಲಿ(ನ.30) ವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ವರ್ಚುವಲ್ ಸಂವಾದ ನಡೆಸಿದ್ದಾರೆ. ಈ ವೇಳೆ ಕೆಲ ಹಾಸ್ಯ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಗ್ರಾಮಪಂಚಾಯಿತ್ ಅಧ್ಯಕ್ಷೆ ಸೇರಿದಂತೆ ಫಲಾನುಭವಿಗಳು ನಕ್ಕು ನೀರಾಗಿದ್ದಾರೆ. ಅಧ್ಯಕ್ಷೆ ಕುಳಿತಿದ್ದ ಕುರ್ಚಿಯನ್ನು ಪಕ್ಕದಲ್ಲಿದ್ದವರು ತಳ್ಳಿದ್ದಾರೆ. ಎಚ್ಚರವಾಗಿರಿ, ನಿಮ್ಮ ಕುರ್ಚಿಯನ್ನೇ ತಳ್ಳುತ್ತಿದ್ದಾರೆ. ಮುಂದೆ ಅವರೇ ಗ್ರಾಮಪಂಚಾಯಿತ್ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದು ಮೋದಿ ಹಾಸ್ಯಚಟಾಕಿ ಹಾರಿಸಿದ್ದಾರೆ. ಗಂಭೀರ ವಿಚಾರದ ಸಂವಾದದ ನಡುವೆ ಮೋದಿ ಹಾಸ್ಯ ಚಟಾಕಿಗೆ ಫಲಾನುಭವಿಗಳಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ.ಮಾತು ಮುಂದುವರಿಸಿದ ಮೋದಿ, ನಿಮ್ಮ ಬಳಿ ಟ್ರಾಕ್ಟರ್ ಇದೆ, ನನ್ನ ಬಳಿ ಸೈಕಲ್ ಕೂಡ ಇಲ್ಲ ಎಂದು ಮೋದಿ ಮತ್ತೊಂದು ಹಾಸ್ಯ ಮಾತು ಫಲಾನುಭವಿಗಳಲ್ಲಿ ಮತ್ತೆ ನಗು ತರಿಸಿತ್ತು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡಿಸಿದ ಮೋದಿ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಾತರಿಪಡಿಸುವ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ.
ರಾಹುಲ್ ಗಾಂಧಿಯ 'ಪನೌತಿ ಮೋದಿ' ಟೀಕೆಗೆ ತಿರುಗೇಟು ನೀಡಿದ ಮೊಹಮದ್ ಶಮಿ!
ಈ ಸಂವಾದದಲ್ಲಿ ಜಮ್ಮುವಿನ ರಂಗಪುರ ಗ್ರಾಮದ ಅಧ್ಯಕ್ಷೆ ಹಾಗೂ ಅರ್ನಿಯಾತ ರೈತ ಮಹಿಳೆ ಬಲ್ವೀರ್ ಕೌರ್, ಕೇಂದ್ರದ ಯೋಜನೆಗಳ ಮೂಲಕ ಹಲವು ಸೌಲಭ್ಯ ಪಡೆದಿರುವ ಮಾಹಿತಿಯನ್ನು ಮೋದಿಗೆ ತಿಳಿಸಿದ್ದಾರೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಮಿಶಿನರಿ ಬ್ಯಾಂಕ್ ಯೋನೆ, ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಇತರ ಕೇಂದ್ರದ ಯೋಜನೆಗಳ ಪ್ರಯೋಜನ ಪಡೆದಿರುವುದಾಗಿ ಬಲ್ವೀರ್ ಕೌರ್, ಮೋದಿಗೆ ವಿವರಿಸಿದ್ದಾರೆ.
ಮೋದಿ ಜೊತೆಗಿನ ಸಂವಾದದ ವೇಳೆ ಅಧ್ಯಕ್ಷ ಕುಳಿತಿದ್ದ ಆಸನದ ಸಾಲಿನಲ್ಲಿ ಪಕ್ಕದಲ್ಲಿ ಕುಳಿತವರು ತಳ್ಳಿದ್ದಾರೆ. ಇದನ್ನು ಗಮನಿಸಿದ ಮೋದಿ, ನಿಮ್ಮ ಕುರ್ಚಿಯನ್ನು ಗುರಿಯಾಗಿಸಿ ಈಗಲೇ ತಳ್ಳಾಟ ನಡೆಯುತ್ತಿದೆ. ಕುರ್ಚಿಯ ಬಗ್ಗೆ ಗಮನವಿಡಿ, ಮುಂದೆ ಅವರೇ ಅಧ್ಯಕ್ಷರಾಗುವ ಲಕ್ಷಣಗಳು ಗೋಚರಿಸುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಸೋಲಿಲ್ಲದ ಸರದಾರ: 'ಅಪಶಕುನ' ಎಂದವರಿಗೆ ಕಂಗನಾ ತಿರುಗೇಟು
ಬಲ್ವೀರ್ ಕೌರ್, ತಮ್ಮ ಗ್ರಾಮ ಗಡಿಯ ಸಮೀಪದಲ್ಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಟ್ರಾಕ್ಟರ್ ಖರೀದಿಸಿ ವ್ಯವಸಾಯ ಮಾಡುತ್ತಿದ್ದೇನೆ. ಸುಲಭವಾಗಿ ಯೋಜನೆ ಮೂಲಕ ಟ್ರಾಕ್ಟರ್ ಖರೀದಿ ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿಯನ್ನು ಬಲ್ವೀರ್ ಕೌರ್ ಅಭಿನಂದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ನಿಮ್ಮ ಬಳಿ ಟ್ರಾಕ್ಟರ್ ಇದೆ. ನನ್ನ ಬಳಿ ಸೈಕಲ್ ಕೂಡ ಇಲ್ಲ ಎಂದಿದ್ದಾರೆ.