ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ: ಸಚಿವ ಕೃಷ್ಣ ಭೈರೇಗೌಡ

ಬರ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಸಮಸ್ಯೆ ಬಂದ 24 ಗಂಟೆಯೊಳಗೆ ಕುಡಿಯುವ ನೀರು ಪೂರೈಸಲು ಸನ್ನದ್ಧವಾಗಿರುವಂತೆ ಅಧಿಕಾರಿಗಳಿಗೆ ಕಂದಾಯ ಖಾತೆ ಸಚಿವ ಕೃಷ್ಣ ಭೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು. 
 

No negligence in drought management Says Minister Krishna Byre gowda gvd

ವಿಜಯಪುರ (ನ.29): ಬರ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಸಮಸ್ಯೆ ಬಂದ 24 ಗಂಟೆಯೊಳಗೆ ಕುಡಿಯುವ ನೀರು ಪೂರೈಸಲು ಸನ್ನದ್ಧವಾಗಿರುವಂತೆ ಅಧಿಕಾರಿಗಳಿಗೆ ಕಂದಾಯ ಖಾತೆ ಸಚಿವ ಕೃಷ್ಣ ಭೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುಡಿವ ನೀರು ಮೇವಿಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹46 ಕೋಟಿ ಹಾಗೂ ತಹಸೀಲ್ದಾರ್‌ ಖಾತೆಯಲ್ಲಿ ₹4.5 ಕೋಟಿ ಒದಗಿಸಲಾಗಿದೆ. ಜಿಲ್ಲೆಯ 6 ಕಡೆ ಟ್ಯಾಂಕರ್ ಮತ್ತು ಬಾಡಿಗೆ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.

ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಆದೇಶ: ಸರ್ಕಾರ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಆದೇಶ ನೀಡಿದ್ದು, ಪಂಚಾಯತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಾಧಿಕಾರಿ ಹಾಗೂ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರನ್ನೊಳಗೊಂಡ ಅಧಿಕಾರಿಗಳು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಮಾಹಿತಿ ಕಲೆ ಹಾಕಿ, ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗದುಕೊಂಡು ಸಮಸ್ಯೆ ಬಗೆಹರಿಸಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಮನವೊಲಿಸಿ ಎಂದರು.

ಟೇಕಲ್ ರೈಲ್ವೆ ಬ್ರಿಡ್ಜ್ 2024ರ ಮಾರ್ಚ್‌ಗೆ ಲೋಕಾರ್ಪಣೆ: ಎಸ್.ಮುನಿಸ್ವಾಮಿ

15 ದಿನಗಳಲ್ಲಿ ಬಿಲ್‌ ಸಲ್ಲಿಸಿ: ಕುಡಿಯುವ ನೀರಿಗೆ ಸಂಬಂಧಿಸಿದ ಯಾವುದೇ ಬಿಲ್‌ಗಳನ್ನು ಬಾಕಿ ಉಳಿಸಿಕೊಳ್ಳದೇ 15 ದಿನಗಳಲ್ಲಿ ಸಲ್ಲಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಾಯಕ ಅಭಿಯಂತರರು ಕುಡಿವ ನೀರಿನ ಬಿಲ್‌ಗಳನ್ನು ತಹಸೀಲ್ದಾರರಿಗೆ ಸಲ್ಲಿಸಬೇಕು. ತಸೀಲ್ದಾರರು ಪರಿಶೀಲನೆ ನಡೆಸಿ ತಮ್ಮ ಹಂತದಲ್ಲಿಯೇ ಬಿಲ್ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಆಟೋಮಿಷನ್ ವ್ಯವಸ್ಥೆ ಜಾರಿ: ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಿ ಸುಗಮವಾಗಿ ಕಂದಾಯ ಇಲಾಖೆ ದಾಖಲೆಗಳನ್ನು ಒದಗಿಸಿ ಪಾರದರ್ಶಕ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿ. ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ರಾಜ್ಯದ ಎಲ್ಲೆಡೆ ಕಚೇರಿಗಳನ್ನು ಪೂರ್ಣ ಪ್ರಮಾಣದಲ್ಲಿ ಆಟೋಮಿಷನ್‌ ವ್ಯವಸ್ಥೆ ಮಾಡಲಾಗುವುದು. ಪಾವತಿ ಖಾತೆ ಹಾಗೂ ಹಕ್ಕು ಬದಲಾವಣೆ ಹೊರತುಪಡಿಸಿ ಉಳಿದ ಎಲ್ಲ ದಾಖಲೆಗಳ ಕುರಿತಂತೆ ಪಾರದರ್ಶಕತೆ ಒದಗಿಸಲು ರಾಜ್ಯದ ಎಲ್ಲ ತಹಸೀಲ್ದಾರ್‌ ಕಚೇರಿಗಳಲ್ಲಿನ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಪೂರ್ಣ ಪ್ರಮಾಣದಲ್ಲಿ ಆಟೋಮಿಷನ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಗ್ರಾಮ ಲೆಕ್ಕಿಗರು ಪೂರ್ಣ ತಂತ್ರಜ್ಞಾನದ ಅಳವಡಿಸಿಕೊಂಡು ತ್ವರಿತಗತಿಯಲ್ಲಿ ಸೇವೆ ಒದಗಿಸಬೇಕು. ಡಿಜಿಟಲೀಕರಣದಿಂದ ಕಂದಾಯ ಇಲಾಖೆ ಒತ್ತಡವು ಸಹ ಕಡಿಮೆಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಚಿವರು ರೈತರಲ್ಲಿ ಮನವಿ ಮಾಡಿ, ಮುಂದಿನ ವಾರದೊಳಗಾಗಿ ಎಲ್ಲ ರೈತರು ಕೃಷಿ, ತೋಟಗಾರಿಕೆ ಸೇರಿದಂತೆ ಯಾವುದೇ ಇಲಾಖೆಗೆ ಬಂದು ತಮ್ಮ ಜಮೀನಿನ ಮಾಹಿತಿ ದಾಖಲೀಕರಣ ಮಾಡಿಕೊಳ್ಳಬೇಕು. ರೈತರು ತಮ್ಮ ದಾಖಲೆಗಳನ್ನು ಒದಗಿಸಿ ಫ್ರೂಟ್ ಐಡಿಯಲ್ಲಿ ಅಪಡೇಟ್‌ ಮಾಡಿಕೊಳ್ಳುವಂತೆ ಹೇಳಿದರು.

ಕೊನೆ ಉಸಿರು ಇರುವವರೆಗೂ ಕೆಆರ್‌ಪಿಪಿಯಲ್ಲಿರುವೆ: ಶಾಸಕ ಜನಾರ್ದನ ರೆಡ್ಡಿ

ಸಭೆಯಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ ಅಶೋಕ ಮನಗೂಳಿ, ಕಂದಾಯ ಇಲಾಖೆ ಆಯುಕ್ತ ಪಿ.ಸುನೀಲುಮಾರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios