Rameshwaram Cafe Blast: 3 ತಿಂಗಳು ತಯಾರಿ ನಡೆಸಿದ್ದ ವೆಲ್ ಟ್ರೈನ್ಡ್ ಬಾಂಬರ್; ಬಿಎಂಟಿಸಿ ವಜ್ರ ಬಸ್ಸಲ್ಲಿ ಸಂಚಾರ!

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಬಾಂಬ್ ಬ್ಲಾಸ್ಟ್ ಆರೋಪಿ ವೆಲ್‌ ಟ್ರೈನ್ಡ್‌ ಬಾಂಬರ್ ಆಗಿದ್ದಾನೆ. ಈತ 3 ತಿಂಗಳಿಂದ ಬಾಂಬ್‌ ಬ್ಲ್ಯಾಸ್ಟ್‌ಗೆ ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ.

Bengaluru Rameswaram Cafe blast accused is well trained bomber he came in BMTC Vajra bus satBe

ಬೆಂಗಳೂರು (ಮಾ.02): ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಬಾಂಬ್ ಬ್ಲಾಸ್ಟ್ ಆರೋಪಿ ವೆಲ್‌ ಟ್ರೈನ್ಡ್‌ ಬಾಂಬರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಈ ಆರೋಪಿ ತನ್ನ ಸ್ಥಳದಿಂದ 'ಬಿಎಂಟಿಸಿ ವಜ್ರ 500ಡಿ' ಬಸ್‌ನಲ್ಲಿ ಬಂದು 400 ಮೀ. ದೂರದಲ್ಲಿ ಇಳಿದು ನಂತರ ಕೆಫೆಗೆ ಬಂದು ಬಾಂಬ್ ಇಟ್ಟು ಬ್ಲ್ಯಾಸ್ಟ್‌ ಮಾಡದ್ದಾನೆ. ಆದರೆ, ಈತ ಬಾಂಬ್‌ ಬ್ಲ್ಯಾಸ್ಟ್‌ಗೆ ಬರೋಬ್ಬರಿ 3 ತಿಂಗಳಿಂದ ತಯಾರಿ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.

ಹೌದು, ಬಂದಿದ್ದ ಶಂಕಿತ ಯಾರೆಂಬ ಮಾಹಿತಿ ಕಲೆ ಹಾಕುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದವನು ವೆಲ್ ಟ್ರೈನೈಡ್ ಬಾಂಬರ್ ಎಂಬ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಕೆಲವರ ಆಜ್ಞೆಯ ಮೇರೆಗೆ ಬಂದು ಸ್ಫೋಟ ಮಾಡಿದ್ದಾನೆ. ನಂತರ, ಕೆಲವರ ಆಜ್ಞೆಯ ನಂತರ ತನ್ನ ಕೆಲಸ ಮುಗಿಸಿ ವಾಪಸ್ ಆಗಿದ್ದಾನೆ. ಇನ್ನು ರಾಮೇಶ್ವರಂ ಕೆಫೆಗೆ ಬಾಂಬ್ ಇಡಲು ಮೂರು ತಿಂಗಳ ತಯಾರಿ ಕೂಡ ಮಾಡಿಕೊಂಡಿದ್ದಾನೆ.

ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ಸಾಮ್ಯತೆಯಿಲ್ಲ; ಸಿಎಂ ಸಿದ್ದರಾಮಯ್ಯ

ರಾಮೇಶ್ವರಂ ಕೆಫೆಗೆ ಬರುವಾಗ ಬಿಎಂಟಿಸಿಯ 500D ವಜ್ರ ಬಸ್‌ನಲ್ಲಿ ಬಂದಿದ್ದಾನೆ. ನಂತರ, ಕೆಫೆಗೆ ಬಂದು ಬಾಂಬ್ ಇಟ್ಟು 400 ಮೀಟರ್ ದೂರ ನಡೆದುಕೊಂಡು ಹೋಗಿ, ಒಂದು ಸ್ಥಳದಲ್ಲಿ ನಿಂತು ಫೋನ್ ನಲ್ಲಿ ಮಾತನಾಡಿದ್ದಾನೆ. ನಂತರ ಎದುಗಡೆಯ ರಸ್ತೆಗೆ ತೆರಳಿ ಬಿಎಂಟಿಸಿ ಬಸ್ ಹಿಡಿದು ಪರಾರಿಯಾಗಿದ್ದಾನೆ. ಇನ್ನು ಆರೋಪಿ ವೈಟ್ ಫೀಲ್ಡ್ ಕಡೆ ತೆರಳಿರುವ ಮಾಹಿತಿ ಬಂದಿದೆ. ಸದ್ಯ ಸಿಸಿಬಿ ಪೊಲೀಸರು ವೈಟ್ ಫೀಲ್ಡ್‌ನಲ್ಲಿ ಸಿಸಿಟಿವಿ ಪರೀಶಿಲನೆ ನಡೆಸುತ್ತಿದ್ದಾರೆ. 

ಶಂಕಿತ ಬಾಂಬರ್ ರಾಮೇಶ್ವರಂ ಕೆಫೆಯ ಘಟನೆ ನಡೆದ ಸ್ಥಳದಿಂದ 400 ಮೀಟರ್ ದೂರದಲ್ಲಿ ನಿಂತು ಕರೆ ಮಾಡಿದ ಹಿನ್ನೆಲೆಯಲ್ಲಿ ಟವರ್ ಲೊಕೇಶನ್ ಡಂಪ್ ಮಾಡಲಾಗುತ್ತಿದೆ. ಸದ್ಯ ಫೋನ್ ಸಂಪರ್ಕದಲ್ಲಿದ್ದವನನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೋನಿನಲ್ಲಿ ಮಾತನಾಡಿರುವ ಸಿಸಿಟಿವಿ ಮಾಹಿತಿಯನ್ನೂ ಕಲೆ ಹಾಕಲಾಗಿದೆ. ಆದ್ದರಿಂದ ಮೂವರು ಶಂಕಿತರನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಶಂಕಿತರನ್ನು ಆಡುಗೋಡಿ ಟೆಕ್ನಿಕಲ್ ಸೆಂಟರ್ ನಲ್ಲಿಟ್ಟು ವಿಚಾರಣೆ ಮಾಡಲಾಗುತ್ತಿದೆ.

ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ, ಟವರ್ ಡಂಪ್ ಅಧರಿಸಿ ಓರ್ವ ಶಂಕಿತ ಬಂಧನ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಹೋಗುವಾಗ ಕಾಡುಗೋಡಿಗೆ ಹೊರಟಿದ್ದಾನೆ. ಈ ವೇಳೆ CMRIT ಕಾಲೇಜ್ ಬಸ್‌ಸ್ಟಾಪ್ ನಲ್ಲಿ ಇಳಿದು, ನಂತರ 300 ರಿಂದ 400ಮೀಟರ್ ನಡೆದುಕೊಂಡು ಹೋಗಿದ್ದಾನೆ. ಅಕ್ಕಪಕ್ಕದ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಬಸ್ ಸ್ಟಾಪ್ ನಲ್ಲಿ ಇಳಿದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಸುತ್ತಮುತ್ತಲ್ಲಿನ ಅಂಗಡಿ ಮಾಲೀಕರನ್ನು ಸಹ ಮಾಹಿತಿ ಪಡೆಯಲಾಗುತ್ತಿದೆ. ಕೇವಲ ಟ್ರಾಫಿಕ್ ಪೊಲೀಸರು ಹಾಕಿರೋ ಸಿಸಿಟಿವಿ ಮಾತ್ರ ಇವೆ. ಆ ಬಸ್ ಸ್ಟಾಪ್ ಸಿಸಿಟಿವಿ ತೆಗೆದುಕೊಂಡು ಅಧಿಕಾರಿಗಳು ಪರಿಶೀಲನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಸುತ್ತಮುತ್ತಲಿನ ಯಾವುದೇ ಅಂಗಡಿ ಮುಗ್ಗಟ್ಟುಗಳಲ್ಲಿ ಯಾವುದೇ ಕ್ಯಾಮಾರಗಳೇ ಇಲ್ಲ. ಇದನ್ನು ನೋಡಿಕೊಂಡೇ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios