ಬೆಂಗಳೂರು Rameshwaram Cafe Blast, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ಸಾಮ್ಯತೆಯಿಲ್ಲ; ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ರಾಮೇಶ್ವರಂ ಕೆಫೆಗೂ ಹಾಗೂ ಈ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ಸಾಮ್ಯತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Bengaluru Rameswaram Cafe Blast Mangaluru Cooker Bomb Blast are no similarity CM Siddaramaiah sat

ಮೈಸೂರು (ಮಾ.02): ಬೆಂಗಳೂರಿನ ರಾಮೇಶ್ವರಂ ಕೆಫೆಗೂ ಹಾಗೂ ಈ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ಸಾಮ್ಯತೆಯಿಲ್ಲ. ಇದು ಒಬ್ಬ ವ್ಯಕ್ತಿಯ ಕೃತ್ಯವಾ? ಅಥವಾ ಸಂಘಟನೆಯ ಕೃತ್ಯವಾ ಎಂಬುದು ಗೊತ್ತಾಗಿಲ್ಲ. ಮುಖ್ಯವಾಗಿ ಇದು ಭಯೋತ್ಪಾದಕ ಕೃತ್ಯನಾ ಎಂಬುದು ಸ್ಪಷ್ಟವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ನಿನ್ನೆಯ ಬ್ಲಾಸ್ಟ್‌ಗೂ ಸಾಮ್ಯತೆ ಇಲ್ಲ. ಅದು ಕುಕ್ಕರನಲ್ಲಿ ಆದ ಬ್ಲಾಸ್ಟ್ ಆಗಿದೆ. ಇಲ್ಲಿ ಯಾವ ಕುಕ್ಕರ್‌ನಲ್ಲೂ ಬ್ಲಾಸ್ಟ್ ಆಗಿಲ್ಲ. ನಾನು ಕೂಡ ಇಂದು ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋಗುತ್ತೇನೆ. ಒಟ್ಟು 9 ಜನರು ಗಾಯಳುಗಾಳಾಗಿದ್ದಾರೆ. ಗಾಯಾಳುಗಳಾದ ಎಲ್ಲ 9 ಜನರು ಪ್ರಾಣಯಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣ, ಟವರ್ ಡಂಪ್ ಅಧರಿಸಿ ಓರ್ವ ಶಂಕಿತ ಬಂಧನ

ಇನ್ನು ಬಾಂಬ್ ಬ್ಲ್ಯಾಸ್ಟ್ ಮಾಡಿದ ವ್ಯಕ್ತಿ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಸ್ಪೋಟ ನಡೆಸಿದ್ದಾನೆ. ಹೋಟೆಲ್‌ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು, ಹೋಟೆಲ್ ನಲ್ಲಿ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್ಸಿನಿಂದ ಇಳಿಯುವುದು ಹೋಟೆಲ್ ಗೆ ಬರುವುದು ಎಲ್ಲಾ ದೃಶ್ಯಾವಳಿಗಳು ಸಿಕ್ಕಿವೆ. ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಒಬ್ಬ ವ್ಯಕ್ತಿಯ ಕೃತ್ಯವಾ? ಅಥವಾ ಸಂಘಟನೆಯ ಕೃತ್ಯವಾ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕ ಕೃತ್ಯನಾ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ತಿಳಿಸಿದರು. 

ಅಲ್ಪ ಸಂಖ್ಯಾತರ ಓಲೈಕೆಗಾಗಿ ಬಾಂಬ್ ಬ್ಲ್ಯಾಸ್ಟ್ ಕೃತ್ಯ ನಡೆದಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿ, ಬಿಜೆಪಿಯವರ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತಲ್ಲ ಅದೂ ಅಲ್ಪ ಸಂಖ್ಯಾತರ ಓಲೈಕೆ ಕಾರಣಕ್ಕೇ ಆಗಿತ್ತಾ? ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ಮಂಗಳೂರು ಬಾಂಬ್ ಬ್ಲಾಸ್ಟ್  ಹಾಗೂ ಬೆಂಗಳೂರು ಬ್ಲಾಸ್ಟ್ ಸಂಬಂಧವಿಲ್ಲ. ಬ್ಲಾಸ್ಟ್ ಮಾಡಿದ್ದನ್ನು ಖಂಡಿಸುತ್ತೇನೆ. ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದು ತಿಳಿಸಿದರು.

ರಾಮೇಶ್ವರಂ ಕೆಫೆ ಸ್ಫೋಟಿಸಿದವ ಕೇರಳ,‌ ಉಡುಪಿ-ಮಂಗಳೂರು ಭಾಗದವನು ಎಂಬ ಶಂಕೆ!

ಪಾಕಿಸ್ತಾನ ಪರ ಘೋಷಣೆಯ ಎಫ್‌ಎಸ್‌ಎಲ್‌ ವರದಿ ಇನ್ನೂ ಬಂದಿಲ್ಲ: 
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದ ಬಗ್ಗೆ ಮಾತನಾಡಿ, ಇನ್ನೂ ಎಫ್ಎಸ್ಎಲ್ ರಿಪೋರ್ಟ್ ಬಂದಿಲ್ಲ. ರಿಪೋರ್ಟ್ ಬಂದ ಮೇಲೆ ತಪ್ಪು ನಡೆದಿದ್ದು ಸಾಭೀತಾದರೇ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ. ಇದರಲ್ಲಿ ಯಾರನ್ನ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವರದಿಯೇ ಬಂದಿಲ್ಲಾ ಅಂದ ಮೇಲೆ ಬಿಜೆಪಿಯ ಆರೋಪಗಳಿಗೆ ಏನೂ ಉತ್ತರ ಕೊಡಲಿ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Latest Videos
Follow Us:
Download App:
  • android
  • ios