ಬೆಂಗಳೂರು Rameshwaram Cafe Blast ಪ್ರಕರಣ, ಟವರ್ ಡಂಪ್ ಅಧರಿಸಿ ಓರ್ವ ಶಂಕಿತ ಬಂಧನ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟವರ್ ಡಂಪ್ ಅಧರಿಸಿ ಆರೋಪಿ ಪತ್ತೆ ಮಾಡಲು ಮುಂದಾದ ಪೊಲೀಸರು ಐವರನ್ನು ವಿಚಾರಣೆ ನಡೆಸಿದ್ದು, ಇದರಲ್ಲಿ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಂಗಳೂರು (ಮಾ.2): ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟವರ್ ಡಂಪ್ ಅಧರಿಸಿ ಆರೋಪಿ ಪತ್ತೆ ಮಾಡಲು ಮುಂದಾದ ಪೊಲೀಸರು ಈಗ ಓರ್ವ ಶಂಕಿತನನ್ನು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪೊಲೀಸರು ಮುಂಜಾನೆಯಿಂದ 5 ಮಂದಿಯನ್ನು ವಿಚಾರಣೆ ನಡೆಸಿದ್ದು. ಇದರಲ್ಲಿ ಶಂಕಿತ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?
ಸಿಸಿಟಿವಿಯಲ್ಲಿ ದಾಖಲಾಗದಂತೆ ತೆರಳಿರುವ ಬಾಂಬರ್: ರಾಮೇಶ್ವರ ಕೆಫೆಗೆ ಬಾಂಬ್ ಇಟ್ಟು ಹೋದ ವ್ಯಕ್ತಿ ಕೆಫೆಯ ಸಿಸಿಟಿವಿ ಹೊರತು ಪಡಿಸಿ ಬೇರೆ ಎಲ್ಲಿಯೂ ಸಿಕ್ಕಿ ಬಿದ್ದಿಲ್ಲ. ರಸ್ತೆ ಬದಿಯ ಫುಟ್ ಪಾತ್ ಮೇಲೆ ನಡೆದಿದ್ದರೆ ಸಿಸಿಟಿವಿಯಲ್ಲಿ ಸೆರೆಯಾಗ್ತಿದ್ದ. ಆದ್ರೆ ಬಾಂಬ್ ಇಟ್ಟವನು ನೇರ ರಸ್ತೆ ಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಕೆಫೆ ನಂತ್ರ ನೂರು ಮೀಟರ್ ಹೋಗಿರುವ ಬಗ್ಗೆಯೂ ಸಿಸಿಟಿವಿಯಲ್ಲಿ ಸೆರೆ ಆಗಿಲ್ಲ ಇಲ್ಲ. ನಂತ್ರ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
'ರಾಮೇಶ್ವರ ಕೆಫೆಯಲ್ಲಿ ಈ ಹಿಂದೆ 2 ಅನಾಥ ಬ್ಯಾಗ್ ಸಿಕ್ಕಿತ್ತು..: ಕೆಫೆ ಒಡತಿ ದಿವ್ಯಾ ರಾವ್ ಹೇಳಿದ್ದೇನು?
ಇಷ್ಟು ಮಾತ್ರವಲ್ಲ ಕೆಫೆಗೆ ಇದಕ್ಕೂ ಮೊದಲೇ ಬಂದು ಸ್ಥಳ ಪರಿಶೀಲನೆ ಮಾಡಿಕೊಂಡಿರುವ ಶಂಕಿತ ಉಗ್ರರು ಕ್ಯಾಶ್ ಪಡೆದೇ ರವೆ ಇಡ್ಲಿ ಖರೀದಿ ಮಾಡಿದ್ದಾನೆ. ಕೃತ್ಯದ ಸಮಯದಲ್ಲಿ ಅನುಮಾನ ರೀತಿಯಲ್ಲಿ ಪೋನ್ ಕರೆಗಳು ಬಂದಿತ್ತು. ನಿನ್ನೆ ಕೃತ್ಯದ ಸಮಯದಲ್ಲಿ ಸ್ಪಾಟ್ ನಲ್ಲಿ ಇದ್ದ ಪೋನ್ ನಂಬರ್ ಗಳು ಈಗ ಸ್ವಿಚ್ ಆಫ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಕೂಡ ತನಿಖೆ ಆರಂಭವಾಗಿದೆ. ಸದ್ಯ ಇದುವರೆಗೆ ಕೃತ್ಯದ ಹೊಣೆಗಾರಿಕೆಯನ್ನು ಯಾವ ಟೆರರಿಸ್ಟ್ ಆರ್ಗನೈಸೇಶನ್ ತೆಗೆದುಕೊಂಡಿಲ್ಲ.