Asianet Suvarna News Asianet Suvarna News

Namma clinic ಮೇ ತಿಂಗಳಿನಿಂದ ‘ನಮ್ಮ ಕ್ಲಿನಿಕ್‌’?

-ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ

- ನಗರದಲ್ಲಿ 243 ಸ್ಥಳ ಗುರುತು

- 1 ಕ್ಲಿನಿಕ್ ನಲ್ಲಿ 6 ಮಂದಿ ಸಿಬ್ಬಂದಿ

bengaluru news 243 Namma clinics will start by may month san
Author
Bengaluru, First Published Mar 13, 2022, 4:30 AM IST | Last Updated Mar 13, 2022, 4:30 AM IST

ಬೆಂಗಳೂರು (ಮಾ.13):  ರಾಜ್ಯ ಸರ್ಕಾರ (State Governament) ಪ್ರಸಕ್ತ ಬಜೆಟ್‌ನಲ್ಲಿ  (Budget) ಘೋಷಿಸಿದ ‘ನಮ್ಮ ಕ್ಲಿನಿಕ್‌’ (Namma clinics) ಸ್ಥಾಪನೆಗೆ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕಟ್ಟಡಗಳ ಗುರುತಿಸಲಾಗಿದ್ದು, ಮೇ ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ. ನಗರದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಸಣ್ಣ ಪ್ರಮಾಣದ ಚಿಕಿತ್ಸೆಗೆ ಅನುಕೂಲವಾಗಲು 243 ಕಡೆ ‘ನಮ್ಮ ಕ್ಲಿನಿಕ್‌’ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಬಜೆಟ್‌ನಲ್ಲಿ ಘೋಷಿಸಿದ ಬೆನ್ನಲ್ಲೇ ಬಿಬಿಎಂಪಿ ಆರೋಗ್ಯ ವಿಭಾಗ ನಗರದ ವಿವಿಧೆಡೆ 243 ಕಟ್ಟಡಗಳನ್ನು ಗುರುತಿಸಿದೆ.

ಈಗಾಗಲೇ ಪ್ರತಿ 50 ಸಾವಿರ ಜನಸಂಖ್ಯೆಗೆ 1ರಂತೆ 160 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ( Primary Helth Center ) ಕಾರ್ಯ ನಿರ್ವಹಿಸುತ್ತಿವೆ. ಇನ್ನಷ್ಟುಗುಣಮಟ್ಟದ ಆರೋಗ್ಯ ಸೇವೆ (Health Service ) ಒದಗಿಸುವ ದೃಷ್ಟಿಯಿಂದ ಪ್ರತಿ 10,000 ಜನರಿಗೆ ಒಂದರಂತೆ ‘ನಮ್ಮ ಕ್ಲಿನಿಕ್‌’ ತೆರೆಯಲಾಗುತ್ತಿದೆ. ಇವು ನಗರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ. ಮುಖ್ಯವಾಗಿ ಕೊಳೆಗೇರಿಗಳು, ಕಾರ್ಮಿಕ ಸ್ಥಳಗಳು, ವ್ಯಾಪಾರಿ ಸ್ಥಳ ಸೇರಿ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ಸ್ಥಾಪಿಸಲು ಸರ್ಕಾರ ನಿರ್ದೇಶಿಸಿದೆ.

1 ಕ್ಲಿನಿಕ್‌ಗೆ 6 ಸಿಬ್ಬಂದಿ: ‘ನಮ್ಮ ಕ್ಲಿನಿಕ್‌’ ಸ್ಥಾಪನೆಗೆ ಕನಿಷ್ಠ 3 ಕೋಣೆಗಳು ಮತ್ತು ಮುಂಭಾಗದಲ್ಲಿ ಆವರಣ ಇರಬೇಕು. ನೀರು, ವಿದ್ಯುತ್‌ ಸೇರಿ ಮೂಲ ಸೌಕರ್ಯ ಇರಬೇಕು. ಒಂದು ಕಟ್ಟಡಕ್ಕೆ ಮಾಸಿಕ .50 ಸಾವಿರವರೆಗೆ ಬಾಡಿಗೆ ಪಾವತಿಸಬಹುದು ಎಂದು ಸರ್ಕಾರ ತಿಳಿಸಿದೆ. ಸರ್ಕಾರದಿಂದ ಅನುದಾನ ಮತ್ತು ನಿಯಮಾವಳಿ ಬಂದ ತಕ್ಷಣವೇ ಪೀಠೋಪಕರಣಗಳು, ಹಾಸಿಗೆ ಮತ್ತು ಅಗತ್ಯ ಸೌಕರ್ಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕಿ, ಫಾರ್ಮಾಸಿಸ್ಟ್‌, ಲ್ಯಾಬ್‌ ಟೆಕ್ನಿಷಿಯನ್‌, ಕ್ಲರ್ಕ್ ಹಾಗೂ ಗ್ರೂಪ್‌ ‘ಡಿ’ ನೌಕರ ಸೇರಿ 6 ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ ಬಾಲಸುಂದರ್‌ ಮಾಹಿತಿ ನೀಡಿದ್ದಾರೆ.

Sagarmala ಯೋಜನೆಗೆ ವಿರೋಧ, ಶಾಸಕಿ ಹಾಗೂ ಮೀನುಗಾರರ ನಡುವೆ ವಾಕ್ಸಮರ!
ನಮ್ಮ ಕ್ಲಿನಿಕ್‌ನ ಸೇವೆಗಳು: ಸಾಮಾನ್ಯ ಜ್ವರ, ನೆಗಡಿ, ಶೀತ ಸಂಬಂಧಿ ಸೇರಿ ಅಸಾಂಕ್ರಾಮಿಕ ಸಮಸ್ಯೆಯುಳ್ಳ ಹೊರರೋಗಿಗಳಿಗೆ ಸೇವೆ ದೊರೆಯಲಿವೆ. ರಕ್ತ, ಮೂತ್ರ ಪರೀಕ್ಷೆ ಸೇರಿ ಸಾಮಾನ್ಯ ಪ್ರಯೋಗಾಲಯ ಸೇವೆ, ಉಚಿತ ಔಷಧ ವಿತರಣೆ, ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ತಪಾಸಣೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ರೋಗಿಗಳನ್ನು ಮೇಲ್ಮಟ್ಟದ ಸಂಸ್ಥೆಗಳಿಗೆ ಶಿಫಾರಸು ಮಾಡುವುದು. ಆರೋಗ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಜಾಗೃತಿ ಚಟುವಟಿಕೆಗಳು ಒಳಗೊಂಡಿರುತ್ತವೆ. "ಬಿಬಿಎಂಪಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆ, ರೆಫರಲ್‌ ಆಸ್ಪತ್ರೆ ಮೂಲಕ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು, ನಮ್ಮ ಕ್ಲಿನಿಕ್‌ ಮೂಲಕ ಸೇವೆಯನ್ನು ಇನ್ನಷ್ಟುವಿಸ್ತರಣೆಯಾಗಲಿದೆ" ಎಂದು  ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ ಕೆ.ವಿ. ತ್ರಿಲೋಕ್‌ ಚಂದ್ರ ಹೇಳಿದ್ದಾರೆ.

MLC ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
ಪ್ರಾಥಮಿಕ ಆರೋಗ್ಯ ಸೌಕರ್ಯ ನೀಡುವ ಕ್ಲಿನಿಕ್‌ನಿಂದ ಹಿಡಿದು ಅತ್ಯಾಧುನಿಕ ಚಿಕಿತ್ಸೆಯ ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು, ಆರೋಗ್ಯ ಮೂಲಸೌಕರ್ಯದ ವಿಸ್ತರಣೆಗೆ ಬಜೆಟ್ ನಲ್ಲಿ ಸರ್ಕಾರ ಆದ್ಯತೆ ನೀಡಿತ್ತು. ಅದರಂತೆ ದೆಹಲಿಯಲ್ಲಿ ಆಮ್‌ ಆದ್ಮಿ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿರುವ ‘ಮೊಹಲ್ಲಾ ಕ್ಲಿನಿಕ್‌’ ಮಾದರಿಯಲ್ಲಿ ಬೆಂಗಳೂರಿನ ಎಲ್ಲ ವಾರ್ಡ್‌ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ 438 ‘ನಮ್ಮ ಕ್ಲಿನಿಕ್‌’ಗಳ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು.

Latest Videos
Follow Us:
Download App:
  • android
  • ios