Asianet Suvarna News Asianet Suvarna News

Sagarmala ಯೋಜನೆಗೆ ವಿರೋಧ, ಶಾಸಕಿ ಹಾಗೂ ಮೀನುಗಾರರ ನಡುವೆ ವಾಕ್ಸಮರ!

ಸಾಗರಮಾಲಾ ಯೋಜನೆಗೆ ಪ್ರಬಲ ವಿರೋಧ

ಮೀನುಗಾರರಿಂದ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ

ಶಾಸಕಿ ರೂಪಾಲಿ ನಾಯ್ಕ್ ಜೊತೆ ಮೀನುಗಾರರ ಮಾತಿನ ಚಕಮಕಿ

karwar news traditional local fishermen oppose sagaramala project argue with karwar ankola bjp mla roopali naik san
Author
Bengaluru, First Published Mar 12, 2022, 10:18 PM IST

ಕಾರವಾರ (ಮಾ.12): ಕೇಂದ್ರ ಸರ್ಕಾರದ (Union government) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಸಾಗರಮಾಲಾ (Sagarmala Project) ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು (traditional local fishermen) ಹಾಗೂ ಶಾಸಕಿಯ (MLA) ನಡುವೆ ಮಾತಿನ ಚಕಮಕಿ ನಡೆದಿದೆ. ಕಾರವಾರ-ಅಂಕೋಲಾ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ (Karwar-Ankola BJP MLA Roopali Naik) ಹಾಗೂ ಸ್ಥಳೀಯ ಮೀನುಗಾರರ ನಡುವೆ ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆದಿದ್ದು, ಇದರ ನಡುವೆ ಹಾಗೇನಾದರೂ ಯೋಜನೆ ಜಾರಿಯಾದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದಾರೆ.

ಮೀನುಗಾರಿಕಾ ಸಚಿವ ಎಸ್.ಅಂಗಾರ (S Angara) ಉಪಸ್ಥಿತಿಯಲ್ಲಿ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಸ್ಥಳೀಯ ಮೀನುಗಾರರು ಹಾಗೂ ಶಾಸಕಿ ನಡುವೆ ಈ ಚಕಮಕಿ ನಡೆದಿದೆ. ಯಾವುದೇ ಕಾರಣಕ್ಕೂ ಸಾಗರಮಾಲಾ ಯೋಜನೆಗೆ ಕೈಗೂಡಲು ಅವಕಾಶ ನೀಡುವುದಿಲ್ಲ ಎಂದು ಮೀನುಗಾರರು ಹೇಳಿದ ಬೆನ್ನಲ್ಲಿಯೇ ಮಾತಿನ ಚಕಮಕಿ ನಡೆಯಿತು. ಸಚಿವ ಎಸ್. ಅಂಗಾರ ನಡುವೆಯೇ ಮೀನುಗಾರರು, ರೂಪಾಲಿ ನಾಯ್ಕ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಸಾಗರಮಾಲಾ ಯೋಜನೆ ಕುರಿತಾಗಿ ನಡೆದ ಚರ್ಚೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಮೀನುಗಾರರು ಭಾಗವಹಿಸಿದ್ದರು. ಈ ವೇಳೆ ಅವರ ಸಮಸ್ಯೆಗಳನ್ನು ಆಲಿಸುವ ಪ್ರಕ್ರಿಯೆ ಕೂಡ ನಡೆಯಿತು. ಈ ಹಂತದಲ್ಲಿ ಸರ್ಕಾರ ಅದೇನು ಮಾಡುತ್ತದೆಯೋ ಗೊತ್ತಿಲ್ಲ. ಸಾಗರಮಾಲಾ ಯೋಜನೆಯನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಸಾಮೂಹಿಕವಾಗಿ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ಹಾಕಿದ್ದಲ್ಲದೆ, ದೊಡ್ಡ ದನಿಯಲ್ಲಿ ಕೂಗಾಟ ಆರಂಭಿಸಿದರು.

ಮೀನುಗಾರರ ಎಚ್ಚರಿಕೆ ಹಾಗೂ ಬೆದರಿಕೆ ಮಾತುಗಳನ್ನು ಕೇಳಿದೆ ಎಂಎಲ್ ಸಿ ಹಾಗೂ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ (Ganapati Ulvekar) ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸಮಸ್ಯೆಗಳನ್ನು ಆಲಿಸೋಣ. ಆದರೆ, ನೀವು ಆಡುವ ಮಾತುಗಳು ಹಿಡಿತದಲ್ಲಿರಬೇಕು. ಸಚಿವರು, ಶಾಸಕರು ಇರುವ ಹೊತ್ತಿನಲ್ಲಿಯೇ ಹೀಗೇ ನೇರಾನೇರ ಆವಾಜ್ ಹಾಕೋದು ಅರಿಯಲ್ಲ ಎಂದು ಮೀನುಗಾರರ ವರ್ತನೆಯನ್ನು ಖಂಡಿಸಿದರು.

ಶಾಸಕರು ಹಾಗೂ ಸಚಿವರು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡೋಕೆ ಇದ್ದಾರೆ. ಅವರ ಮುಂದೆ ಸರಿಯಾಗಿ ಮಾತನಾಡಿ. ಸುಖಾಸುಮ್ಮನೆ ಮಾತನಾಡಬೇಡಿ ಎಂದು ಗಣಪತಿ ಉಳ್ವೇಕರ್ ಎಚ್ಚರಿಕೆ ನೀಡಿದರು. ಇಲ್ಲಿ ನೀವು ಯಾರಿಗೆ ಕೈ ತೋರಿಸಿ ಮಾತನಾಡ್ತೀರಿ..? ಕೈ ತೋರಿಸಿ ನನ್ನ ಮುಂದೆ ಜೋರಾಗಿ ಮಾತನಾಡುವ ವರ್ತನೆಗಳನ್ನ ಸಹಿಸೋದಿಲ್ಲ ಎಂದು ಹೇಳಿದರು.

Karwar: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಮೀನುಗಾರರ ವಿರೋಧ
ಈಗೇನೂ ಮಾಡೋಕೆ ಆಗೋದಿಲ್ಲ: ಸಾಗರಮಾಲಾ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದರಿಂದ ಇಲ್ಲಿನ ನಾಗರಿಕರಿಕೆ ಖಂಡಿತಾ ಸಹಾಯವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಯೋಜನೆಗೆ ಅನುದಾನವನ್ನೂ ಘೋಷಣೆ ಮಾಡಿದೆ. ಕೋರ್ಟ್ ಕೂಡ ಯೋಜನೆಗೆ ಯಾವುದೇ ಸಮಸ್ಯೆಗಳಿಲ್ಲ ಮುಂದುವರಿಯಬಹುದು ಎಂದು ಹೇಳಿದೆ. ಹಾಗಾಗಿ ಈ ಯೋಜನೆ ಜಾರಿಯ ಬಗ್ಗೆ ಈಗ ಏನೂ ಮಾಡುವ ಹಾಗಿಲ್ಲ ಎಂದು ಕಾರವಾರ-ಅಂಕೋಲ ಶಾಸಕಿ ರೂಪಾಲಿ ನಾಯ್ಕ್ ಮೀನುಗಾರರಿಗೆ ಹೇಳಿದರು. ಕೊನೆಗೆ ಈ ಕುರಿತಾಗಿ ಯಾವುದೇ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಸಭೆ ಮುಕ್ತಾಯಗೊಂಡಿತು. ಸಾಗರ ಮಾಲಾ ಅಡಿಯಲ್ಲಿನ ಎಲ್ಲಾ ಯೋಜನೆಗಳು ಮೀನುಗಾರರನ್ನು ಅವರು ತಮ್ಮ ಜೀವನವನ್ನು ನಿರ್ಮಿಸಿದ ಕರಾವಳಿಯಿಂದ ಸ್ಥಳಾಂತರಿಸಲು ಕಾರಣವಾಗುತ್ತವೆ ಎನ್ನುವುದು ಮೀನುಗಾರರ ಆತಂಕವಾಗಿದೆ.

ಸ್ಥಗಿತವಾಯ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
2020ರಲ್ಲಿ ಸಾಗರಮಾಲಾ ಯೋಜನೆಯಡಿ ಕಾಮಗಾರಿ ಪ್ರಾರಂಭಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಈ ವೇಳೆ ಸ್ಥಳೀಯ ಮೀನುಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ವಾರಗಳ ಕಾಲ ಧರಣಿ ನಡೆಸುವ ಮೂಲಕ ಕಡಲತೀರವನ್ನು, ಸಾಂಪ್ರದಾಯಿಕ ಮೀನುಗಾರಿಕೆಯನ್ನ ಉಳಿಸಿಕೊಡುವಂತೆ ಒತ್ತಾಯ ಮಾಡಿದ್ದರು. ಪರಿಣಾಮ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದಾಗಿ ಆ ಹಿಂದಿನ ಒಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆ ಬಳಿಕ ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಮೀನುಗಾರರೊಂದಿಗೆ ಚರ್ಚೆಗೆ ಮುಂದಾಗಿರಲಿಲ್ಲ. 

Follow Us:
Download App:
  • android
  • ios