MLC ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
* MLC ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ
* ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಿಜೆಪಿ ಮುಖಂಡ ತೀರ್ಮಾನ
* ನನಗೆ ಬಿಜೆಪಿ ಪಕ್ಷವು ಟಿಕೆಟ್ ನೀಡದೆ ವಂಚನೆ ಮಾಡಿದೆ ಎಂದು ಅಸಮಾಧಾನ
ಮೈಸೂರು, (ಮಾ.12): ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದ ಬೆನ್ನಲ್ಲೇ ಅಸಮಾಧಾನ ಸ್ಫೋಟವಾಗಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎನ್.ಎಸ್.ವಿನಯ್ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ಎನ್.ಎಸ್.ವಿನಯ್ ಅವರು ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದ್ರೆ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ರಾಜಶೇಖರ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್, ಕುತೂಹಲ ಮೂಡಿಸಿದ ಹೊರಟ್ಟಿ ನಡೆ
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮಾಜಿ ಎಂಎಲ್ಸಿ ಗೋ. ಮಧುಸೂಧನ್ ಅವರಿಗೂ ಟಿಕೆಟ್ ಕೈತಪ್ಪಿದೆ. ಇದೀಗ ಎನ್.ಎಸ್.ವಿನಯ್ ಎದ್ದು ನಿಂತಿದ್ದು, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಎಸ್.ವಿನಯ್, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಗಲಿರುಳು ಪಕ್ಷ ಸಂಘಟನೆ ಮಾಡಿದ ನನಗೆ ಬಿಜೆಪಿ ಪಕ್ಷವು ಟಿಕೆಟ್ ನೀಡದೆ ವಂಚನೆ ಮಾಡಿ ಸೋಲುವ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿರುವ ಹಿನ್ನೆಲೆಯಲ್ಲಿ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು.
ಕಳೆದ ಎರಡು ವರ್ಷಗಳಿಂದ ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ಮಾಡಿ 48.884 ದವೀಧರರ ಮತದಾರರನ್ನು ನೊಂದಣಿ ಮಾಡಿಸಿರುವುದಲ್ಲದೆ, ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇನೆ. ಅಲ್ಲದೇ 1 ಲಕ್ಷ ವಿಮೆಯನ್ನು 28,000 ಮಂದಿಗೆ ನೀಡಿದ್ದೇನೆ. ದಕ್ಷಿಣ ಪದವಿದರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗುವ ಬಯಕೆ ಹೊಂದಿದ್ದೆ ಈ ವಿಷಯ ಪಕ್ಷದ ವರಿಷ್ಠರಿಗೂ ತಿಳಿದಿತ್ತು ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನನ್ನನ್ನು ಕಡೆಗಣಿಸಿ ಕಳೆದ ಬಾರಿ ಸೋಲು ಅನುಭವಿಸಿರುವ ಮೈ.ವಿ.ರವಿಶಂಕರ್ ರವರಿಗೆ ಮತ್ತೆ ಟಿಕೆಟ್ ನೀಡಿರುವುದರಿಂದ ನನಗೆ ಅನ್ಯಾಯವಾಗಿದೆ ಆದ್ದರಿಂದ ನಾನು ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ನಾನು ಈ ಹಿಂದೆ ಹಲವು ವರ್ಷಗಳಿಂದ ಸಚಿವ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. 4 ಜಿಲ್ಲೆಗಳಲ್ಲಿ ನನ್ನ ಈ ಕಾರ್ಯ ಚಟುವಟಿಕೆಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ಕೂಡ ತಂದಿದ್ದು ಇವರುಗಳು ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಆದರೆ ವಿಧಾನಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನನಗೆ ಟಿಕೆಟ್ ನೀಡದೇ ಕಳೆದ ಬಾರಿ ಸೋಲು ಅನುಭವಿಸಿದ ಮತ್ತು ಪದವಿದರರ ಸಂಪರ್ಕವೇ ಇಲ್ಲದ ಮೈ.ವಿ. ರವಿಶಂಕರ್ ಅವರಿಗೆ ಬಿಜೆಪಿ ಪಕ್ಷವು ಟಿಕೆಟ್ ನೀಡಿದ್ದು ನನ್ನಂತ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಮತ್ತು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ನನಗೆ 4 ಜಿಲ್ಲೆಯಲ್ಲಿ ಮತದಾರಿದ್ದಾರೆ ಇವರಗಳ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.