ಬಡ​ವ​ರಿಗೆ ಅಕ್ಕಿ ಕೊಡೋದಕ್ಕೆ ಹೋದ್ವಿ, ಅದಕ್ಕೂ ಕಲ್ಲು ಹಾಕಿದ್ರಿ. ಈಗ ಅಕ್ಕಿ ಬದ​ಲು ಹಣ ಕೊಡುತ್ತಿದ್ದೇವೆ. ಇದ​ರಲ್ಲೂ ರಾಜ​ಕೀಯ ಮಾಡಿ ಜನರ ಮನಸ್ಸು ಕೆಡಿಸುತ್ತಿದ್ದೀರಿ? ಎಂದು ಗದಗ ಜಿಲ್ಲಾ ಉಸ್ತು​ವಾರಿ ಸಚಿವ ಎಚ್‌.​ಕೆ.​ಪಾ​ಟೀಲ್ ಅವರು ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು. 

ಗದಗ (ಜೂ.30): ಬಡ​ವ​ರಿಗೆ ಅಕ್ಕಿ ಕೊಡೋದಕ್ಕೆ ಹೋದ್ವಿ, ಅದಕ್ಕೂ ಕಲ್ಲು ಹಾಕಿದ್ರಿ. ಈಗ ಅಕ್ಕಿ ಬದ​ಲು ಹಣ ಕೊಡುತ್ತಿದ್ದೇವೆ. ಇದ​ರಲ್ಲೂ ರಾಜ​ಕೀಯ ಮಾಡಿ ಜನರ ಮನಸ್ಸು ಕೆಡಿಸುತ್ತಿದ್ದೀರಿ? ಎಂದು ಗದಗ ಜಿಲ್ಲಾ ಉಸ್ತು​ವಾರಿ ಸಚಿವ ಎಚ್‌.​ಕೆ.​ಪಾ​ಟೀಲ್ ಅವರು ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು. ನಗರದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವ​ರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ತುತ್ತಿನಲ್ಲೇ ಕಲ್ಲು ಹೇಳಿಕೆಗೆ ಗರಂ ಆದ ಸಚಿವರು, ಅಕ್ಕಿಗೆ ಮಾರ್ಕೆಟ್‌ನಲ್ಲಿ 60 ರುಪಾಯಿ ರೇಟ್‌ ಇದೆಯಾ? 

ನೀವು ಮಾಜಿ ಮುಖ್ಯಮಂತ್ರಿಗಳು, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು. ನಿಮಗೆ ಅಕ್ಕಿ ದರ ಯಾರು ಹೇಳಿದರು? ಎಂದು ಪ್ರಶ್ನಿಸಿದರು. ಮಾರುಕಟ್ಟೆಯಲ್ಲಿ ಏನು ರೇಟ್‌ ಇದೆ, ಖಾಸಗಿ ಅವರಿಗೆ ಯಾವ ರೇಟ್‌ ಕೊಡುತ್ತೀ​ರಿ? ಖಾಸಗಿಯವರಿಗೆ ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಯಾವ ರೇಟ್‌ ಕೊಡುತ್ತಿದೆ? ಇದು ಮಾರುಕಟ್ಟೆ ರೇಟ್‌ ಅಲ್ವಾ? ಮಾರುಕಟ್ಟೆ ರೇಟ್‌ 60 ರುಪಾಯಿ ಇದ್ದರೆ ಖಾಸಗಿಯವರಿಗೆ ಯಾಕೆ 34 ರುಪಾಯಿಗೆ ಕೊಡುತ್ತೀರಿ? ಎಂದು ಕಿಡಿಕಾರಿದರು.

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ನಮ್ಮ ಹಕ್ಕಿನ ಅಕ್ಕಿ: ಜನ ನಿಮ್ಮನ್ನು ಬಹಳ ಗಂಭೀ​ರ​ವಾಗಿ ಗಮ​ನಿ​ಸು​ತ್ತಿ​ದ್ದಾರೆ. ನೀವು ಅಧಿಕಾರ ಮಾಡುವಲ್ಲಿ ವಿಫಲರಾಗಿದ್ದೀರಿ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿ​ಲ್ಲ. ‘ರೈಟ್‌ ಟು ಫುಡ್‌ ಆ್ಯಕ್ಟ್’ ಅನ್ವಯ ನಮ್ಮ ಹಕ್ಕಿನ ಅಕ್ಕಿ ಅದು ಎಂದು ಸಚಿವ ಪಾಟೀಲ್‌ ಪ್ರತಿಪಾದಿಸಿದರು. ರಾಜ್ಯದ ಬಿಜೆ​ಪಿ​ಯ​ವರು ಕರ್ನಾಟಕದ ಜನರಿಗೆ ಅಕ್ಕಿ ಕೊಡಿ ಎಂದು ಕೇಂದ್ರ​ಕ್ಕೆ ಒಂದು ಮಾತು ಹೇಳಲಿಲ್ಲ. ದುಡ್ಡು ಕೊಡುತ್ತಾ​ರೆ ಅಕ್ಕಿ ಕೊಡಿ ಎಂದು ಹೇಳುವ ದೊಡ್ಡತನ ನಿಮಗೆ ಬರಲಿಲ್ಲ. ಬಡ ಜನರಿಗೆ ಅಕ್ಕಿ ಕೊಡಿ ಎಂದು ಹೇಳುವ ಕರ್ತವ್ಯ ಪ್ರಜ್ಞೆ ಬಿಜೆಪಿಗಿಲ್ಲ. ಬಡವರ ಕಲ್ಯಾಣ ಕಾರ್ಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಟುವಾಗಿ ಆರೋಪಿಸಿದ​ರು.

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಭ್ರಷ್ಟಾಚಾರ ನಡೆದಿಲ್ಲ: ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವ​ರು, ಕುಮಾರಸ್ವಾಮಿ ಅವರ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆಯುತ್ತೇನೆ. ಭ್ರಷ್ಟಾಚಾರ ತಲೆ ಎತ್ತದಂತೆ ಮಾಡಲು ಮುಖ​ಮಂತ್ರಿ ಸಿದ್ದರಾಮಯ್ಯನವ​ರು ಪ್ರಯತ್ನ ನಡೆಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ. ಕೇಂದ್ರದ ತಪ್ಪು ನಿರ್ಣಯದಿಂದ ಬೆಲೆ ಹೆಚ್ಚಳವಾಗುತ್ತಿದೆ. ಇದ​ರಿಂದ ಜನರ ಬದುಕು ಆರ್ಥಿಕವಾಗಿ ದುಸ್ತರವಾಗುತ್ತಿದೆ. ಜನರ ಅಡಚಣೆ ನೀಗಿಸಲು ಗೃಹ ಲಕ್ಷ್ಮೀ ಯೋಜನೆ ತರುತ್ತಿದ್ದೇವೆ. ಜುಲೈ ತಿಂಗಳಿಂದ ಗೃಹ ಲಕ್ಷ್ಮೇ ಯೋಜನೆ ನೋಂದಣಿ ಆರಂಭವಾಗಲಿದೆ ಎಂದು ಹೇಳಿದರು.