ಕೇಂದ್ರದ ದುಬಾರಿ ಟೋಲ್‌ಗೆ ಬೆಚ್ಚಿಬಿದ್ದ ರಾಜ್ಯ ಸಾರಿಗೆ ಸಂಸ್ಥೆ: ಟೋಲ್‌ ಕಟ್ಟಲಾಗದೇ ವಾಪಸ್‌ ಬಂದ ಕೆಎಸ್‌ಆರ್‌ಟಿಸಿ ಬಸ್‌

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ದುಬಾರಿ ಟೋಲ್‌ ಶುಲ್ಕ ಪಾವತಿಸಲಾಗದೇ ಕೆಎಸ್‌ಆರ್‌ಟಿಸಿ ಬಸ್‌ ಒನ್‌ವೇ ನಲ್ಲಿಯೇ ವಾಪಸ್‌ ಬಂದಿದೆ.

Bengaluru Mysuru expressway expensive toll shock KSRTC bus return without paying toll sat

ರಾಮನಗರ (ಜು.19): ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ವೇ ಆಗಿರುವ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ದುಬಾರಿ ಟೋಲ್‌ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ ಹೋದ ದಾರಿಗೆ ಸುಂಕವಿಲ್ಲವೆಂಬಂತೆ ಒನ್‌ವೇ ನಲ್ಲಿಯೇ ವಾಪಸ್‌ ಬಂದಿದೆ.

ಹೌದು, ರಾಜ್ಯದ ಪ್ರಮುಖ ಮತ್ತು ಏಕೈಕ ಎಕ್ಸ್‌ಪ್ರೆಸ್‌ವೇ ಆಗಿರುವ ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣದ ಹಂತದಿಂದಲೂ ಉದ್ಘಾಟನೆ ಆಗಿ ಟೋಲ್‌ ಆರಂಭವಾಗುವವರೆಗೂ ಒಂದಿಲ್ಲಾ ಒಂದು ವಿವಾದವನ್ನು ಎದುರಿಸುತ್ತಲೇ ಇದೆ. ಇನ್ನು ಟೋಲ್‌ ಶುಲ್ಕ ವಸೂಲಿ ಆರಂಭವಾದ ದಿನದಿಂದಲೂ ದುಬಾರಿ ಶುಲ್ಕ ವಿಧಿಸಲಾಗುತ್ತದೆ ಎಂಬ ದೂರುಗಳು ಕೇಳಿಬಂದಿದೆ. ಇದರಿಂದ ಸಾರ್ವಜನಿಕರು ಟೋಲ್ ಶುಲ್ಕದ ವಿರುದ್ಧ ಪ್ರತಿಭಟನೆ ಮಾಡಿದ್ದೂ ಆಗಿದೆ. ಇದ್ಯಾವುದಕ್ಕೂ ಬಗ್ಗದ ಕೇಂದ್ರ ಸರ್ಕಾರ ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕವನ್ನು ಈಗಾಗಲೇ ಎರಡು ಬಾರಿ ಹೆಚ್ಚಳ ಮಾಡಿದೆ. ಆದ್ದರಿಂದ ಕೇಂದ್ರ ಸರ್ಕಾರದ ಎಕ್ಸ್‌ಪ್ರೆಸ್‌ ವೇ ದುಬಾರಿ ಟೋಲ್‌ ಶುಲ್ಕದಿಂದ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಬೆಚ್ಚಿ ಬಿದ್ದಿದೆ.

Breaking: ಕರ್ನಾಟಕ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರು ಅಮಾನತು

ಟೋಲ್‌ ಕಟ್ಟಲಾಗದೇ ವಾಪಸ್‌ ಬಂದ ಬಸ್‌:  ಇನ್ನು ಬುಧವಾರ ಬೆಳಗ್ಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ದುಬಾರಿ ಟೋಲ್ ಕಟ್ಟಲಾಗದೇ ಕೆಎಸ್‌ಆರ್‌ಟಿಸಿ ಬಸ್‌ ಓನ್ ವೇ ನಲ್ಲೇ ವಾಪಸ್‌ ಬಂದಿದೆ. ದಶಪಥ ಹೆದ್ದಾರಿ ಎಂಬುದನ್ನೂ ನೋಡದೇ ಅತ್ತಲಿಂದ ವಾಹನಗಳು ವೇಗವಾಗಿ ಬರುತ್ತಿರುವುದನ್ನೂ ಕೂಡ ಲೆಕ್ಕಿಸದೇ ಒನ್‌ವೇನಲ್ಲಿ ಅತಿ ವೇಗದ ಸಂಚಾರವನ್ನು ಮಾಡಿಕೊಂಡು ಹೋಗಲಾಗಿದೆ. ಈ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿಯ ಶೇಷಗಿರಿಹಳ್ಳಿ ಟೋಲ್ ನಿಂದ ಹನುಮಂತನಗರದ ವರೆಗೆ ಒನ್ ವೇ ಸಂಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಸ್‌ ಒನ್‌ವೇನಲ್ಲಿ ಸಂಚಾರ ಮಾಡಿರುವ ವೀಡಿಯೋ ಕೂಡ ಲಭ್ಯವಾಗಿದೆ.

ಫಾಸ್ಟ್‌ಟ್ಯಾಗ್‌ ಇಲ್ಲದೆ ಹೆದ್ದಾರಿಯಲ್ಲಿ ಬಸ್‌ ಸಂಚಾರ: ಸಾಮಾನ್ಯವಾಗಿ ಲಾರಿ, ಟ್ರಕ್‌, ಗೂಡ್ಸ್‌ ವಾಹನಗಳು, ಕಾರುಗಳು ಹಾಗೂ ಬಸ್‌ಗಳು ಸೇರಿದಂತೆ ಎಲ್ಲ ಖಾಸಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಮಾಡಿಸಿಕೊಳ್ಳುವಂತೆ ಸರ್ಕಾರವೇ ಸೂಚಿಸಿದೆ. ಇದರಿಂದ ಟೋಲ್‌ನಲ್ಲಿ ಸುಲಭವಾಗಿ ಸಂಚಾರ ಮಾಡುವ ಜೊತೆಗೆ, ರಿಯಾಯಿತಿ ಕೂಡ ನೀಡಲಾಗಿದೆ. ಇನ್ನು ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಟೋಲ್‌ನಲ್ಲಿ ದುಬಾರಿ ಹಣವನ್ನು ಪಾವತಿಸಿಕೊಳ್ಳಲಾಗುತ್ತದೆ. ಆದರೆ, ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಗಳೂರಿನತ್ತು ಬರುತ್ತಿದ್ದ ಕೆಎಸ್‌ಆರ್‌ಟಿಸ ಬಸ್‌ಗೆ ಫಾಸ್ಟ್‌ಟ್ಯಾಗ್‌ ಇರಲಿಲ್ಲ. ಆದ್ದರಿಂದ, ದುಪ್ಪಟ್ಟು ಹಣ ಪಾವತಿ ಮಾಡಲಾಗದೇ ಒನ್‌ ವೇನಲ್ಲಿಯೇ ವೇಗವಾಗಿ ವಾಪಸ್‌ ಹೋಗಿರುವ ಘಟನೆ ನಡೆದಿದೆ.

ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು: ಇನ್ನು ಬಿಡದಿಯ ಶೇಷಗಿರಿಹಳ್ಳಿಯಿಂದ ಹನುಮಂತನಗರವರೆಗೆ ಸುಮಾರು 2ಕೀ.ಮೀ ಕೆಎಸ್‌ಆರ್‌ಟಿಸಿ ಬಸ್‌ ಓನ್ ವೇ ನಲ್ಲೇ ಸಂಚರಿಸಿದೆ. ಬಳಿಕ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದೆ. ಚಾಲಕನ ಹಾಗೂ ನಿರ್ವಾಹಕನ ನಡೆಗೆ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒನ್ ವೇನಲ್ಲೇ ವೇಗದ ಚಾಲನೆ ಮಾಡ್ತಿರುವ ವೀಡಿಯೋ ಇತರೆ ವಾಹನಸವಾರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

Latest Videos
Follow Us:
Download App:
  • android
  • ios