ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಸರ್ಕಾರ 3ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ (ಮನೆ ಒಡತಿಗೆ ಮಾಸಿಕ 2000 ರೂ. ಹಣ) ಯೋಜನೆ ಜಾರಿಗೊಳಿಸಲಿದೆ. ಇದಕ್ಕೆ ಅರ್ಜಿ ಸಲ್ಲಿಸಲಿ ಈಗಲೇ ಕೆಳಗಿನ ದಾಖಲೆಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
ಬೆಂಗಳೂರು (ಜು.18): ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ 3ನೇ ಗ್ಯಾರಂಟಿಯಾಗಿ ಗೃಹಲಕ್ಷ್ಮಿ (ಮನೆ ಒಡತಿಗೆ ಮಾಸಿಕ 2000 ರೂ. ಹಣ) ಯೋಜನೆಗೆ ಕೆಲವೇ ಕ್ಷಣಗಳಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಅರ್ಜಿ ಸಲ್ಲಿಕೆಗೆ ಕೆಲವು ಅಗತ್ಯ ದಾಖಲೆಗಳು ಬೇಕಿದ್ದು, ಕೂಡಲೇ ಇವುಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ ನೀವು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳಬಹುದು.
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ. ಮಧ್ಯಾಹ್ನದೊಳಗೆ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆ ಸಿಗಲಿದೆ. ಇದಕ್ಕಾಗಿ ವಿಧಾನಸೌಧದ ಬ್ಯಾಕ್ವೆಟ್ ಹಾಲ್ ಸಿದ್ಧವಾಗಿದ್ದು, ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ, ಅರ್ಜಿ ಸಲ್ಲಿಕೆ ಮಾಡಿದ ಎಲ್ಲ ಫಲಾನುಭವಿಗಳಿಗೆ ಆಗಸ್ಟ್ 16ರಿಂದ ಆಗಸ್ಟ್ 20ರೊಳಗೆ ತಲಾ 2000 ರೂ. ಹಣ ವರ್ಗಾವಣೆ ಆಗಲಿದೆ.
ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಂಡಿದೆ. ಚಾಲನೆ ಬಳಿಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ ಮನೆ ಒಡತಿಯ ಅಕೌಂಟ್ ಮುಂದಿನ ತಿಂಗಳಿಂದ 2 ಸಾವಿರ ಹಣ ಹಾಕಲಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಆಗಸ್ಟ್ 16 ರಂದು 2 ಸಾವಿರ ರೂ. ಹಣವನ್ನು ಸರ್ಕಾರದಿಂದ ಹಾಕಲಾಗುತ್ತದೆ. ಈ ಮೂಲಕ ಕಾಂಗ್ರೆಸ್ ಚುನಾವಣೆ ವೇಳೆ ನೀಡಿದ 5 ಗ್ಯಾರಂಟಿಗಳಲ್ಲಿ 3ನೇ ಗ್ಯಾರಂಟಿಯನ್ನು ಈಡೇರಿಸುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ 10 ನಕಲಿ ಆ್ಯಪ್‌ಗಳ ಹಾವಳಿ: ಡೌನ್ಲೋಡ್ ಮಾಡಿದ್ರೆ ಹಣ ಖೋತಾ
ಗೃಹಲಕ್ಷ್ಮಿ ಯೋಜನೆಗೆ ಯಾವ ದಾಖಲೆಗಳು ಬೇಕು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
1. ಜುಲೈ 20 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಅಹ್ವಾನ
2. ಗ್ರಾಮ ಓನ್ , ಬೆಂಗಳೂರು ಓನ್, ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ
3. ಪಡಿತರ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆಯಾಗಿರುವ ಮಹಿಳೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
4. ರಾಜ್ಯದಲ್ಲಿ 1,53,070,32 ಜನ ಪರಿತರ ಚೀಟಿ ಹೊಂದಿದ್ದಾರೆ
5. ಪಡಿತರ ಚೀಟಿ ಹೊಂದಿದವರ ಪೈಕಿ 1 ಕೋಟಿ 22 ಲಕ್ಷ ಕಾರ್ಡ್ ಗಳಲ್ಲಿ ಮಹಿಳೆಯರೇ ಮನೆಯ ಮುಖ್ಯಸ್ಥೆಯಾಗಿದ್ದಾರೆ
6 . 31 ಲಕ್ಷ ಪಡಿತರ ಕಾರ್ಡ್ ನಲ್ಲಿ ಪುರುಷರೇ ಮನೆಯ ಮುಖ್ಯಸ್ಥರಾಗಿದ್ದಾರೆ.
7. ಯಾರ ಕಾರ್ಡ್ ಗಳಲ್ಲಿ ಮಹಿಳೆಯನ್ನ ಮನೆಯ ಮುಖ್ಯಸ್ಥೆ ಎಂದು ಮಾಡಿಲ್ವೋ ಅಂತಹವರಿಗಿಲ್ಲ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಅವಕಾಶ
6. ಪಡಿತರ ಕಾರ್ಡ್ ನಲ್ಲಿ ಮನೆ ಒಡತಿ ಎಂದು ನಮೂದಿಸಿದ ನಂತರ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಲು ಸೂಚನೆ
7. ಆಹಾರ ಇಲಾಖೆಗೆ ಮನವಿ ಸಲ್ಲಿಸಿ ಮಹಿಳೆಯನ್ನ ಮನೆಯ ಮುಖ್ಯಸ್ಥೆಯನ್ನಾಗಿ ಕಾರ್ಡ್ನಲ್ಲಿ ನಮೂದಿಸಬೇಕು. ನಂತರ ಗೃಹಲಕ್ಷ್ಮಿ ಯೋಜನೆಗೆ ಅಂತಹ ಮಹಿಳೆಯರು ಅರ್ಜಿ ಸಲ್ಲಿಸಬಹುದು
8. ಮಹಿಳೆ ಅಥವಾ ಆಕೆಯ ಗಂಡ GST ನಂಬರ್ ಹೊಂದಿದ್ದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಸಿಗುವುದಿಲ್ಲ.
ಎಲ್ಲೆಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು:
ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರ, ತಾಲೂಕು ಕಚೇರಿಗಳು ಹಾಗೂ ನಾಡ ಕಚೇರಿಯಲ್ಲೂ ಕೂಡ ಅರ್ಜಿ ಅಲ್ಲಿಸ ಬಹುದಾಗಿದೆ. ಆನ್ ಲೈನ್ ಮತ್ತು ಆಫ್ಲೈನ್ ಮೂಲಕವು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಅರ್ಜಿ ಸಲ್ಲಿಕೆಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಕಡ್ಡಾಯವಾಗಿ ನೀಡಬೇಕು. ಅಲ್ಲದೇ ಬ್ಯಾಂಕ್ ಖಾತೆಗೆ ಲಿಂಕ್ ಆದ ಮೊಬೈಲ್ ನಂಬರನ್ನೇ ಅರ್ಜಿ ಹಾಕುವ ವೇಳೆ ನಮೋದಿಸಬೇಕು. ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ರೂ ಅಂತವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಕಿಸಾನ್ ಸಮ್ಮಾನ್ ಯೋಜನೆಗೆ ಎಳ್ಳುನೀರು? : 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ!
ಸರ್ಕಾರದಿಂದಲೇ ಅರ್ಜಿ ಸಲ್ಲಿಸಲು ಸಮಯ, ದಿನಾಂಕ ನಿಗದಿ:
ಸರ್ಕಾರಿ ಸೇವಾ ಕೇಂದ್ರಗಳಿಗೆ ಯಾವ ದಿನ, ಯಾವ ಸಮಯಕ್ಕೆ ಹೋಗಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಾವಣೆ ಮಾಡಿಸಿಕೊಳ್ಳಬೇಕು ಎಂಬ ಸಂದೇಶ ಬರಲಿದೆ. ಆ ಮೆಸೇಜ್ ಜೊತೆ ಅರ್ಜಿ ಸಲ್ಲಿಸಬೇಕು. ಆದ್ರೆ, ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ನ್ನು ಸರ್ಕಾರ ನೀಡಿಲ್ಲ. ಅರ್ಜಿ ಸಲ್ಲಿಕೆ ಬಗ್ಗೆ ಗೊಂದಲ ಇದ್ರೆ 8147500500 ಹಾಗೂ 1902 ಸಂಖ್ಯೆಗೆ ಕರೆ ಮಾಡಬಹುದಾಗಿದೆ.