Asianet Suvarna News Asianet Suvarna News

'ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ..' ಹೆದ್ದಾರಿ ಕ್ರೆಡಿಟ್‌ ವಾರ್‌ಗೆ ಅಭಿಮಾನಿಗಳ ಪೋಸ್ಟರ್‌ ವಾರ್‌!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಕ್ಕ ಸಿಕ್ಕ ಅಭಿವೃದ್ಧಿ ಯೋಜನೆಗಳನೆಲ್ಲಾ ತಾನು ಮಾಡಿದ್ದು, ತಾನು ಮಾಡಿದ್ದು ಎಂದು ಹೇಳಿಕೊಳ್ಳುವ ಜಾಯಮಾನ ಜೋರಾಗಿದೆ. ಇದಕ್ಕೆ ಈಗ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಕೂಡ ಹೊರತಾಗಿಲ್ಲ. ಬಿಜೆಪಿ-ಜೆಡಿಎಸ್‌-ಕಾಂಗ್ರೆಸ್‌ ಈ ಯೋಜನೆಯ ಕ್ರೆಡಿಟ್‌ ತಮಗೂ ಸಲ್ಲಬೇಕು ಎಂದು ಹೇಳಿದೆ.

Bengaluru Mysuru expressway credit war BJP Congress JDS Pratap Simha Siddaramaiah san
Author
First Published Mar 10, 2023, 11:23 AM IST

ಬೆಂಗಳೂರು (ಮಾ.): ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆಗೆ ಅಣಿಯಾಗಿರುವಂತೆ ಅದಕ್ಕೆ ಕ್ರೆಡಿಟ್‌ ವಾರ್‌ ಕೂಡ ಜೊರಾಗಿ ನಡೆಯತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯದ ಎರಡು ಮಹತ್ವದ ನಗರಗಳನ್ನು ಒಂದು ಮಾಡಲಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ತಾವೇ ನಿರ್ಮಿಸಿದ್ದು ಎಂದು ಎದೆತಟ್ಟಿ ಹೇಳಿಕೊಳ್ಳಲು ಮೂರೂ ಪಕ್ಷಗಳು ಅವಿರತ ಹೋರಾಟ ನಡೆಸುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ವೇಗ ಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈಸೂರು ಸಂಸದ ಪ್ರತಾಪ್‌ ಸಿಂಹ ಹೆಜ್ಜೆ ಹೆಜ್ಜೆಗೂ ಎದುರಾಳಿಗಳಿಂದ ಟೀಕೆಯನ್ನೇ ತಿಂದುಕೊಂಡು ಹೆದ್ದಾರಿ ಕಾಮಗಾರಿಯನ್ನು ಯಶಸ್ವಿಯಾಗಿ ಮುಗಿಸಿದ ಸಮಾಧಾನದಲ್ಲಿದ್ದಾರೆ. ಈ ನಡುವೆಸ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಹೆದ್ದಾರಿ ನಿರ್ಮಿಸಿದ ಕ್ರೆಡಿಟ್‌ ತಮ್ಮ ಪಕ್ಷಕ್ಕೆ ಸೇರಿದ್ದು ಎಂದು ಮಾತನಾಡುತ್ತಿವೆ. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆಗೊಳ್ಳುವ ಮೂಲಕ ಅದರ ವೀಕ್ಷಣೆ ನಡೆಸಿದ್ದಲ್ಲದೆ, ತಮ್ಮ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಈ ಎಕ್ಸ್‌ಪ್ರೆಸ್‌ ವೇಗೆ ಅನುಮೋದನೆ ನೀಡಲಾಗಿತ್ತು ಎಂದಿದ್ದಾರೆ. ಈ ನಡುವೆ ಮೂರೂ ಪಕ್ಷಗಳಿಂದ ಕ್ರೆಡಿಟ್‌ ಕುರಿತಾಗಿ ಪೋಸ್ಟರ್‌ ವಾರ್‌ ಕೂಡ ನಡೆದಿದೆ.



ಗುರುವಾರ ಫೇಸ್‌ಬುಕ್‌ನಲ್ಲಿ ಈ ಕುರಿತಾದ ಒಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. 'ಬೆಂಗಳೂರು ಮೈಸೂರು ಹೈವೇ ಕ್ರೆಡಿಟ್‌ ಯಾರಿಗೆ ಸಲ್ಲಬೇಕು ಎಂಬ ಪ್ರಶ್ನೆಗೇ ಜನರೇ ಕೊಟ್ಟ ಉತ್ತರ. 'ಸಿಂಹಕ್ಕೆ ಸಲ್ಲಬೇಕೇ ಹೊರತು ನರಿಗಲ್ಲ..' ಎಪ್ಪತ್ತು ವರ್ಷದ ಹಿಂದೆ ಕಲ್ಲು ನೆಟ್ಟ ಯಾವುದೇ ಯೋಜನೆಗಳು ನೆಟ್ಟ ಕಲ್ಲಿನ ಜೊತೆಯೇ ಮಲಗಿತ್ತು. ಮುಕ್ತಿಯನ್ನು ಕಾಣಿಸಿದ ವ್ಯಕ್ತಿಗೆ ಸರ್ಕಾರಕ್ಕೆ ಕ್ರೆಡಿಟ್‌ ಸಲ್ಲಬೇಕು' ಅದಕ್ಕೆ ಕಾರಣ ಮೋದೀಜೀ ಗಡ್ಕರಿ ಮತ್ತು ಪ್ರತಾಪ್‌ ಸಿಂಹ' ಎನ್ನುವಂಥ ಪೋಸ್ಟರ್‌ ಹರಿದಾಡುತ್ತಿದೆ. ಜನರೇ ಕೊಟ್ಟ ಉತ್ತರವನ್ನು ನೀವು ಒಪ್ಪುವುದಾದರೆ ಈ ಪೋಸ್ಟ್‌ಅನ್ನು ಹೆಚ್ಚಿನ ಜನಕ್ಕೆ ತಲುಪಿಸಿ ಎನ್ನುವಂಥ ವಿಜ್ಞಾಪನೆ ಇರುವ ಪೋಸ್ಟ್‌ ವೈರಲ್‌ ಆಗಿತ್ತಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ ರದ್ದು ಮಾಡಿ: ಚಲುವರಾಯಸ್ವಾಮಿ

ಸ್ವತಃ ಈ ಪೋಸ್ಟ್‌ಅನ್ನು ಹಂಚಿಕೊಂಡಿರುವ ಪ್ರತಾಪ್‌ ಸಿಂಹ ಅದಕ್ಕೆ ಸ್ಪಷ್ಟನೆಯನ್ನೂ ಕೂಡ ನೀಡಿದ್ದಾರೆ. 'ಒಬ್ಬರೇ ಒಬ್ಬರಿಗೆ ಇದರ ಶ್ರೇಯ ಸಲ್ಲಬೇಕು. ಅದು ಮೋದೀಜೀಗೆ. ಅವರಿಲ್ಲದಿದ್ದರೆ ನಾನು ಸಂಸದ ಆಗುತ್ತಿರಲಿಲ್ಲ. ಗಡ್ಕರಿ ಸರ್‌ ಮಂತ್ರಿ ಕೂಡ ಆಗ್ತಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ.

ದಶಪಥ ಹೆದ್ದಾರಿಗೆ ಕಾಂಗ್ರೆಸ್‌ ಕೊಡುಗೆ ಇಲ್ಲ: ಸಚಿವ ಕೆ.ಗೋಪಾಲಯ್ಯ

ಪ್ರತಾಪ್‌ ಸಿಂಹ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.'ನಿಮ್ಮಂಥ ಎಂಪಿ ಪ್ರತಿ ಜಿಲ್ಲೆಗೂ ಇರಬೇಕು. ನೀವು ಹಿಡಿದ ಕೆಲಸ ಮುಗಿಯುವರೆಗೀ ಬಿಡೋದಿಲ್ಲ.ನಮ್ಮ ಕಡೆನೂ ಇದಾರೆ ಬರೀ ದುಡ್ಡು ಮಾಡೋಕೆ ಅಷ್ಟೇ' ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ. 'ಕೆಲವರು ಕಮೆಂಟ್ ಮಾಡುವಾಗ ಜನರ ತೆರಿಗೆ ಹಣದಿಂದ ನಿರ್ಮಿಸಿದ್ದು ಎಂದು ಹೇಳಿದ್ದಾರೆ ಸ್ವಾಮಿ ಹಣವೊಂದಿದ್ದರೆ ಸಾಲದು ಅದನ್ನು ಜನೋಪಯೋಗಿಯಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದು ಅತಿ ಮುಖ್ಯವಲ್ಲವೇ ಮಾನ್ಯ ಸಂಸದರಾದ ಪ್ರತಾಪ ಸಿಂಹ ರವರ ದೂರದೃಷ್ಟಿ ಯ ಫಲವೇ ಈ ಬೆಂಗಳೂರು -ಮೈಸೂರು ಹೆದ್ದಾರಿ ಇವರ ಈ ಕನಸಿನ ಕೂಸನ್ನು ನಿತಿನ್ ಗಡ್ಕರಿ ಜೀ ನನಸಾಗಿ ಮಾಡಿದ್ದಾರೆ' ಎಂದು ರಘುಪತಿ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.
'ನಮ್ಮ ಜಿಲ್ಲೆಗೆ ನಿಮ್ಮ ಕೂಡುಗೆ ತಿಳಿಸಿ ಮೈಸೂರು ಬೆಂಗಳೂರು ಹೆದ್ದಾರಿಯ ವ್ಯಾಪ್ತಿ ಕೇವಲ ಮೂರು ಕಿಲೋಮೀಟರ್ ನಿವ್ಯಾಕೆ ಏಲ್ಲಾ ಜಿಲ್ಲೆಗಳಿಗೆ ತೆರಳಿ ಮೂಗು ತೂರಿಸುತ್ತಿರಾ ಏಲ್ಲಿ ಹೊಯ್ತು ಮೈಸೂರಿನ ಸ್ಮಾರ್ಟ್ ಸಿಟಿ.

ನಿಮ್ಮ ಕೆಲಸ ಸಿದ್ದರಾಮಯ್ಯ ನವರನ್ನು ಟೀಕಿಸುವುದು ಇದೇ ರೀತಿ ಸಿದ್ದರಾಮಯ್ಯ ನವರ ಸರ್ಕಾರ ದಲ್ಲಿ ನೀವೇ ಆಶೀರ್ವಾದ ಪಡೆದು ಹೊಗಳಿ ಹಾಡಿ ಇಂದು ಚುನಾವಣೆ ಹಿತದೃಷ್ಟಿಯಿಂದ ಅವರನ್ನು ತೆಗಳುವುದು ಎಷ್ಟು ಸರಿ.?' ಎಂದು ಪ್ರತಾಪ್‌ ಸಿಂಹ ಅವರನ್ನು ತೆಗಳಿದ್ದಾರೆ. 'ಏನ್ ಕಾಲ ಗುರು ಇದು ಸಿಂಹ, ಹುಲಿ, ನರಿಗಳು.. ನಮ್ಮನ್ನ ಆಳುವ ಕಾಲ ಬಂದೈತೆ. ಕ್ರೆಡಿಟ್ ಯಾರಿಗೂ ಬೇಕಾಗಿಲ್ಲ ಸಾರ್ವಜನಿಕರ ತೆರಿಗೆಯಿಂದ ನಿರ್ಮಾಣ ಮಾಡಿರುವುದು. ಒಂದು ವೇಳೆ ಯಾರಿಗಾದರೂ ಕ್ರೆಡಿಟ್ ಬೇಕೆಂದರೆ ರಸ್ತೆ ಶುಲ್ಕದಿಂದ ವಿಮುಕ್ತಗೊಳಿಸಿ' ಎಂದು ಇನ್ನೊಬ್ಬರು ಬರೆದಿದ್ದಾರೆ.
 

Follow Us:
Download App:
  • android
  • ios