ನಾಳೆಯಿಂದಲೇ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕ ಜಾರಿ: ವಾಹನಗಳ ಶುಲ್ಕ ವಿವರ ನೋಡಿ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ (ರಾಷ್ಟ್ರೀಯ ಹೆದ್ದಾರಿ- 275) ಟೋಲ್‌ ಶುಲ್ಕವು ನಾಳೆ ಬೆಳಗ್ಗೆ 8 ಗಂಟೆಯಿಂದಲೇ ಜಾರಿ ಆಗಲಿದೆ. ವಾಹನಗಳ ಸವಾರರು ಪೆಟ್ರೋಲ್, ಡೀಸೆಲ್‌ ಹಣದ ಜೊತೆಗೆ ಟೋಲ್‌ ಶುಲ್ಕಕ್ಕೂ ಹಣ ಇಟ್ಟುಕೊಂಡು ಹೋಗಬೇಕು. 

Bengaluru Mysore Expressway Toll Fee Implementation From Tomorrow See Vehicle Fee Details sat

ಬೆಂಗಳೂರು (ಫೆ.26): ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ ಬರೋಬ್ಬರಿ 8,400 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ  ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಶುಲ್ಕ ನಾಳೆಯಿಂದಲೇ ಜಾರಿಯಾಗಲಿದೆ. ನಾಳೆಯಿಂದ ಸಂಚಾರ ಮಾಡುವ ಎಲ್ಲ ವಾಹನಗಳಿಗೆ ಈ ಕೆಳಗಿನಂತೆ ಟೋಲ್‌ ಶುಲ್ಕ ವಸೂಲಿ ಮಾಡಲಾಗುತ್ತದೆ.

ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ವೇಯಾಗಿರುವ ಬೆಂಗಳೂರು - ಮೈಸೂರು ಹೆದ್ದಾರಿಯು ಮಾ.11 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅಧಿಕೃತವಾಗಿ ಉದ್ಘಾಟನೆ ಅಗಲಿದೆ. ರಸ್ತೆ ಕಾಮಗಾರಿಯಲ್ಲಿ ಶೇ.90ಕ್ಕೂ ಅಧಿಕ ಕೆಲಸ ಪೂರ್ಣಗೊಂಡಿದ್ದು, ಅಧಿಕೃತವಾಗಿ ಉದ್ಘಾಟನೆ ಆಗುವ ಮುನ್ನವೇ ಟೋಲ್‌ ಶುಲ್ಕವನ್ನು ಸವೂಲಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇನ್ನು ಹೆದ್ದಾರಿ ಪ್ರಾಧಿಕಾರದಿಂದ ವಿವಿಧ ವಾಹನಗಳ ಅನ್ವಯ ಟೋಲ್‌ ದರವನ್ನು ನಗದಿ ಮಾಡಲಾಗಿದ್ದು, ಅದರ ಪೂರ್ಣ ವಿವರವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಮಾ.11ಕ್ಕೆ ಮೋದಿ ಉದ್ಘಾಟನೆ

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಶುಲ್ಕದ ವಿವರ
ವಾಹನಗಳು                       ಏಕಮುಖ ಸಂಚಾರ = ಅದೇ ದಿನ ವಾಪಸ್ = ಟೋಲ್‌ ಪ್ಲಾಜಾ ಜಿಲ್ಲೆಯ ವಾಹನ= ಒಂದು ತಿಂಗಳ 50 ಸಂಚಾರಕ್ಕೆ ಪಾಸ್
ಕಾರು/ಜೀಪು/ವ್ಯಾನ್           135 ರೂ.                        205 ರೂ.                    70 ರೂ.                                                4,525 ರೂ.
ಲಘು ಗೂಡ್ಸ್  ವಾಹನ/ ಮಿನಿ ಬಸ್  220 ರೂ.          330 ರೂ.                    110 ರೂ.                                              7,315 ರೂ.
ಬಸ್/ 2 ಆಕ್ಸಲ್‌ ಟ್ರಕ್‌                       460 ರೂ.         690 ರೂ.                     230 ರೂ.                                              15,325 ರೂ.
3 ಆಕ್ಸೆಲ್ ವಾಣಿಜ್ಯ ವಾಹನ             500 ರೂ.         750 ರೂ.                      250 ರೂ.                                              16,715 ರೂ.
ಭಾರೀ ನಿರ್ಮಾಣ ಯಂತ್ರ (4-6 ಆಕ್ಸಲ್) 720 ರೂ.  1080 ರೂ.                    360 ರೂ.                                               24,030 ರೂ.
ಅತಿಗಾತ್ರದ ವಾಹನ (7ಕ್ಕಿಂತ ಅಧಿಕ ಆಕ್ಸಲ್‌)  880 ರೂ.        1,315 ರೂ.    440 ರೂ.                                               29,255 ರೂ.

ನಾಳೆ ಬೆಳಗ್ಗೆ 8 ಗಂಟೆಯಿಂದ ಶುಲ್ಕ ವಸೂಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆದೇಶದ ಅನ್ವಯ ರಾಷ್ಟ್ರೀಯ ಹೆದ್ದಾರಿ- 275 (ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ) ಭಾಗದ 18 ಕಿ.ಮೀ ನಿಂದ 74 ಕಿ.ಮೀ.ವರೆಗೆ ಟೋಲ್‌ ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತದೆ. ಅಂದರೆ ಒಟ್ಟು 55.63 ಕಿ.ಮೀ.ಗೆ ಶುಲ್ಕ ಅನ್ವಯ ಆಗಲಿದೆ. ಇನ್ನು ಬೆಂಗಳೂರಿನಿಂದ ಪಂಚಮುಖಿ ಗಣೇಶ ದೇವಸ್ಥಾನದವರೆಗಿನ ರಸ್ತೆಗೆ ಟೋಲ್‌ ಅನ್ವಯ ಆಗುವುದಿಲ್ಲ. ಇನ್ನು ಪಂಚಮುಖಿ ಗಣೇಶ ದೇವಾಲಯದಿಂದ ಟೋಲ್‌ ಗೇಟ್‌ವರೆಗಿನ 570 ಮೀ. ಮಾರ್ಗವನ್ನು ಬಳಕೆದಾರರ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಕಣಿಮಿಣಿಕೆ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿಯಲ್ಲಿ ನಿರ್ಮಿಸಲಾದ ಟೋಲ್‌ನಲ್ಲಿ ವಾಹನಗಳ ಸವಾರರು ಶುಲ್ಕ ಪಾವತಿಸಬೇಕು. ಈ ಟೋಲ್‌ ದರವು ಬೆಂಗಳೂರು - ನಿಡಘಟ್ಟ ವಿಭಾಗದ 6-ಲೇನ್‌ ಬಳಕೆಗಾಗಿ ಶುಲ್ಕ ಪಾವತಿಸಿಕೊಳ್ಳಲಾಗುತ್ತದೆ. ಈ ಶುಲ್ಕವು ಫೆ.28ರ ಬೆಳಗ್ಗೆ 8 ಗಂಟೆಯಿಂದಲೇ ಜಾರಿ ಆಗಲಿದೆ. 

Assembly Election: ಬೆಂಗಳೂರು - ಮೈಸೂರು ಹೈವೇಯನ್ನು ಧರ್ಮಕ್ಕೆ ಕೊಟ್ಟಿಲ್ಲ : ಕುಮಾರಸ್ವಾಮಿ

ಬೆಂಗಳೂರಿಗೆ 90 ನಿಮಿಷ ಪ್ರಯಾಣ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ 118 ಕಿಲೋಮೀಟರ್ ಇದೆ.‌ ಇದರಲ್ಲಿ 61.104 ಕಿಲೋಮೀಟರ್ ಮಂಡ್ಯ ಜಿಲ್ಲೆಯಲ್ಲೇ ಹಾದು ಹೋಗಲಿದೆ. ಈ ಯೋಜನೆಗಾಗಿ 8,400 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಮಂಡ್ಯದಲ್ಲಿ 5 ಬೃಹತ್ ಸೇತುವೆ (Bridge), 27 ಸಣ್ಣ ಸೇತುವೆ, 15 ಅಂಡರ್ ಪಾಸ್ (Underpass) ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ಲಕ್ಷಾಂತರ ಜನರಿಗೆ ಅನುಕೂಲ ಆಗಿದ್ದು ಬೆಂಗಳೂರು-ಮೈಸೂರು ಕೇವಲ 75 ರಿಂದ 90 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಈ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಉಳಿಸಿಬಹುದು.

Bengaluru Mysore Expressway Toll Fee Implementation From Tomorrow See Vehicle Fee Details sat

Latest Videos
Follow Us:
Download App:
  • android
  • ios