ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಮಾ.11ಕ್ಕೆ ಮೋದಿ ಉದ್ಘಾಟನೆ

ದಶ​ಪಥ ರಸ್ತೆ ಉದ್ಘಾ​ಟ​ನೆ​ಗೆಂದೇ ಮದ್ದೂರು ತಾಲೂ​ಕಿನ ಗೆಜ್ಜ​ಲ​ಗೆ​ರೆ ಬಳಿ 120 ಎಕ್ರೆ ವಿಶಾಲ ಮೈದಾ​ನ​ದಲ್ಲಿ ಬೃಹತ್‌ ಸಮಾ​ವೇಶ ನಡೆ​ಯ​ಲಿ​ದ್ದು, ಸುಮಾರು 2 ಲಕ್ಷ ಮಂದಿ ಪಾಲ್ಗೊ​ಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಮದ್ದೂ​ರಿ​ನಲ್ಲಿ ಮೋದಿ ಮೆಗಾ ರೋಡ್‌ ಶೋ ನಡೆ​ಸಲೂ ಉದ್ದೇ​ಶಿ​ಸ​ಲಾ​ಗಿದ್ದು, ಈ ಕುರಿತು ಪ್ರಧಾನಿ ಕಾರ್ಯಾ​ಲ​ಯ​ದಿಂದ ಅನು​ಮತಿ ನಿರೀ​ಕ್ಷಿ​ಸ​ಲಾ​ಗು​ತ್ತಿ​ದೆ.

PM Narendra Modi Will Be Inauguration Bengaluru Mysuru Express Highway on March 11th grg

ಮಂಡ್ಯ/ಬೆಂಗ​ಳೂ​ರು(ಫೆ.25): ಸುಮಾರು 8 ಸಾವಿರ ಕೋಟಿಗೂ ಅಧಿಕ ವೆಚ್ಚ​ದ ಬೆಂಗ​ಳೂ​ರು-ಮೈಸೂರು ದಶ​ಪಥ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾ.11ರಂದು ಮಂಡ್ಯ ಜಿಲ್ಲೆಯ ಮದ್ದೂ​ರಿ​ನಲ್ಲಿ ಲೋಕಾ​ರ್ಪಣೆ ಮಾಡ​ಲಿ​ದ್ದಾ​ರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿದೆ.

ದಶ​ಪಥ ರಸ್ತೆ ಉದ್ಘಾ​ಟ​ನೆ​ಗೆಂದೇ ಮದ್ದೂರು ತಾಲೂ​ಕಿನ ಗೆಜ್ಜ​ಲ​ಗೆ​ರೆ ಬಳಿ 120 ಎಕ್ರೆ ವಿಶಾಲ ಮೈದಾ​ನ​ದಲ್ಲಿ ಬೃಹತ್‌ ಸಮಾ​ವೇಶ ನಡೆ​ಯ​ಲಿ​ದ್ದು, ಸುಮಾರು 2 ಲಕ್ಷ ಮಂದಿ ಪಾಲ್ಗೊ​ಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಮದ್ದೂ​ರಿ​ನಲ್ಲಿ ಮೋದಿ ಮೆಗಾ ರೋಡ್‌ ಶೋ ನಡೆ​ಸಲೂ ಉದ್ದೇ​ಶಿ​ಸ​ಲಾ​ಗಿದ್ದು, ಈ ಕುರಿತು ಪ್ರಧಾನಿ ಕಾರ್ಯಾ​ಲ​ಯ​ದಿಂದ ಅನು​ಮತಿ ನಿರೀ​ಕ್ಷಿ​ಸ​ಲಾ​ಗು​ತ್ತಿ​ದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಗೆ ಬಾಲಗಂಗಾಧರ ಶ್ರೀ ಹೆಸರಿಡಿ

ಮಂಡ್ಯ​ಕ್ಕಿದು ಮೊದಲ ಭೇಟಿ:

ವಿಧಾ​ನ​ಸಭಾ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಪದೇ ಪದೆ ಕರ್ನಾ​ಟ​ಕಕ್ಕೆ ಭೇಟಿ ನೀಡು​ತ್ತಿ​ರುವ ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಆಗ​ಮಿ​ಸು​ತ್ತಿ​ರು​ವುದು ಇದೇ ಮೊದಲು. ಜೆಡಿ​ಎಸ್‌ ಭದ್ರ​ಕೋ​ಟೆ​ಯಾದ ಮಂಡ್ಯಕ್ಕೆ ಕಳೆದ ವರ್ಷ ಡಿ.30ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೊದಲ ಬಾರಿ ಭೇಟಿ ನೀಡಿ​ದ್ದರು. ಇದೀಗ ಮೋದಿ ಆಗಮನದೊಂದಿಗೆ ಜಿಲ್ಲೆ​ಯಲ್ಲಿ ಕಮಲ ಅರ​ಳಿ​ಸಲು ಬಿಜೆಪಿ ಯತ್ನ ಆರಂಭಿಸಿದೆ. ಮೋದಿ ಅವರ ವರ್ಚಸ್ಸು ಮುಂದಿ​ಟ್ಟು​ಕೊಂಡು ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಅಭ್ಯ​ರ್ಥಿ​ಗ​ಳನ್ನು ಗೆಲ್ಲಿ​ಸಲು ಅಗತ್ಯ ರಣ​ತಂತ್ರ​ವ​ನ್ನು ಬಿಜೆಪಿ ಸಿದ್ಧ​ಪ​ಡಿ​ಸು​ತ್ತಿ​ದೆ.

ಕಳೆದ ವರ್ಷದ ಡಿಸೆಂಬ​ರ್‌​ನಲ್ಲಿ ಅಮಿತ್‌ ಶಾ ಅವ​ರು ಮಂಡ್ಯಕ್ಕೆ ಭೇಟಿ ನೀಡಿದ್ದು, ಆ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿಯನ್ನು ಸೇರಿಸಿದ್ದ ಬಿಜೆಪಿ ಮುಖಂಡ​ರು, ಮೋದಿ ಕಾರ್ಯಕ್ರಮಕ್ಕೆ ಇದರ ಮೂರು ಪಟ್ಟು ಜನ​ರನ್ನು ಕರೆ​ತಂದು ಶಕ್ತಿ ಪ್ರದ​ರ್ಶ​ನಕ್ಕೆ ಯೋಜನೆ ರೂಪಿ​ಸಿ​ದ್ದಾ​ರೆ.

Bengaluru Mysuru Highway: ಬೆಂಗ್ಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 800 ಕೋಟಿ ಲೂಟಿ: ಮಂಜುನಾಥ್‌

ಐಐಟಿ ಕ್ಯಾಂಪಸ್‌ ಉದ್ಘಾ​ಟ​ನೆ:

ಬೆಂಗ​ಳೂ​ರು-ಮೈಸೂರು ದಶ​ಪಥ ಹೆದ್ದಾರಿ ಉದ್ಘಾ​ಟ​ನೆಗೂ ಮುನ್ನ ಪ್ರಧಾನಿ ಮೋದಿ ಅವರು ಧಾರ​ವಾ​ಡಕ್ಕೆ ಭೇಟಿ ನೀಡ​ಲಿ​ದ್ದಾರೆ. ಅಲ್ಲಿ ಐಐಟಿ ಧಾರ​ವಾಡ ಕ್ಯಾಂಪಸ್‌ ಅನ್ನು ಉದ್ಘಾ​ಟಿ​ಸ​ಲಿ​ದ್ದಾರೆ.

ಮೋದಿ ಸಮ್ಮುಖ ಸುಮಲತಾ ಬಿಜೆಪಿಗೆ?

ಮಂಡ್ಯದ ಮದ್ದೂ​ರಿ​ನಲ್ಲಿ ನಡೆ​ಯ​ಲಿ​ರುವ ಬೃಹತ್‌ ಸಾರ್ವಜನಿಕ ಸಮಾರಂಭದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸುಮಲತಾ ಅಂಬರೀಶ್‌ ಬಿಜೆಪಿ ಸೇರುವ ಪ್ರಕ್ರಿಯೆ ಅಂತಿಮ ಘಟ್ಟತಲುಪಿದೆ. ಮೋದಿ ಸಮ್ಮುಖದಲ್ಲೇ ಪಕ್ಷ ಸೇರಬೇಕು ಎನ್ನುವುದು ಸುಮಲತಾ ಅವರ ಆಸೆ. ಅದರಂತೆ ಅಂದೇ ಮೋದಿ ನೇತೃತ್ವದಲ್ಲಿ ಕೇಸರಿ ಪಾಳಯ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳ​ಲಾ​ಗಿ​ದೆ.
 

Latest Videos
Follow Us:
Download App:
  • android
  • ios