ಬೆಂಗಳೂರು(ಏ.28): ‘ಕೊರೋನಾ ಯೋಧರ’ ರಕ್ಷಣೆಗಾಗಿ ದೇಶದಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ಒಂದು ಲಕ್ಷ ಸ್ವಯಂ ಸಂರಕ್ಷಕ ಕವಚ (ಪಿಪಿಇ) ಕಿಟ್‌ಗಳ ಪೈಕಿ ಶೇ.50ರಷ್ಟುಕಿಟ್‌ಗಳು ಬೆಂಗಳೂರಿನಲ್ಲಿ ಸಿದ್ಧಗೊಳ್ಳುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

1 ಸಾವಿರ ಪಿಪಿಇ ಕಿಟ್ ದಾನ ಮಾಡಿದ ಪುಲ್ವಾಮಾ ಹುತಾತ್ಮನ ಪತ್ನಿ!

ದೇಶದಲ್ಲಿ ಕೋವಿಡ್‌ -19 ಪ್ರಕರಣಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 1 ಲಕ್ಷಕ್ಕೂ ಅಧಿಕ ಹೆಚ್ಚಿಸಲಾಗಿದೆ. ದೇಶದ ಉತ್ಪಾದನೆಯ ಸುಮಾರು ಶೇ.50 ರಷ್ಟುಭಾಗ ಬೆಂಗಳೂರಿನಲ್ಲಿ ಆಗುತ್ತಿದೆ. ಹೀಗಾಗಿ ದೇಶದಲ್ಲೇ ಬೆಂಗಳೂರು ಪಿಪಿಇ ಕಿಟ್‌ಗಳ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೋನಾ ಶಂಕಿತರನ್ನು ಕರೆತಂದು PPE ಕಿಟ್‌ ಬೇಕಾಬಿಟ್ಟಿ ಬಿಸಾಡಿದ ಆ್ಯಂಬುಲೆನ್ಸ್‌ ಚಾಲಕ

ಪಿಪಿಇ ಕಿಟ್‌ ಆರೋಗ್ಯ ವೃತ್ತಿಪರರಿಗೆ ಹೆಚ್ಚಿನ ಮಟ್ಟದ ರಕ್ಷಣೆಗಾಗಿರುವ ವಿಶೇಷವಾದ ರಕ್ಷಣಾತ್ಮಕ ಸೂಚ್‌ ಆಗಿರುವುದರಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೂಚಿಸಿದಂತೆ ಇದು ಕಠಿಣ ತಾಂತ್ರಿಕ ಅವಶ್ಯಕತೆಗಳನ್ನು ಹೊಂದಿದೆ. ಲೈಫ್‌ ಕೇರ್‌ ಏಜೆನ್ಸಿ ಮೂಲಕ ಕೇಂದ್ರ ಸರ್ಕಾರ ಪಿಪಿಇ ಕಿಟ್‌ಗಳನ್ನು ಖರೀದಿಸಿ ಅಗತ್ಯವಿರುವ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಪೂರೈಸುತ್ತಿದೆ ಎಂದಿದೆ.