ನ್ಯಾಯಮೂರ್ತಿಗಳ ಗೋರಿಪಾಳ್ಯ ಹೇಳಿಕೆ ವರದಿ ಕೇಳಿದ ಸುಪ್ರೀಂ: ಲೈವ್ ಸ್ಟ್ರೀಮಿಂಗ್ ಸ್ಥಗಿತಕ್ಕೆ ವಕೀಲರ ಆಗ್ರಹ:
ನ್ಯಾಯಮೂರ್ತಿಗಳೊಬ್ಬರ ವಿಡಿಯೋ ವೈರಲ್ ಆಗಿ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ ಎಂದು ಹೇಳಲಾಗುತ್ತಿದ್ದು, ಕೋರ್ಟ್ ಕಲಾಪಗಳ ಲೈವ್ ಸ್ಟ್ರೀಮಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಯು ಗೋರಿಪಾಳ್ಯವನ್ನು 'ಮಿನಿ ಪಾಕಿಸ್ತಾನ' ಎಂದು ಉಲ್ಲೇಖಿಸಿದ ನ್ಯಾಯಮೂರ್ತಿಗಳ ಹೇಳಿಕೆಯ ಹಿನ್ನೆಲೆಯಲ್ಲಿ ವರದಿ ಕೇಳಿದೆ.
ಬೆಂಗಳೂರು (ಸೆ.20): ನ್ಯಾಯಮೂರ್ತಿಗಳ ವಿಡಿಯೋ ವೈರಲ್ ಆಗಿ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ ಎಂಬ ಕಳವಳದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಸ್ಥಗಿತಗೊಳಿಸುವಂತೆ ವಕೀಲರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಜಾರಿಯಾ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ ವೇದವ್ಯಾಸ ಆಚಾರ್ ಅವರು ಕೋರ್ಟ್ ಕಲಾಪ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣ ಯೂಟೂನ್‌ನಲ್ಲಿ ಲೈವ್ಟ್ ಸ್ಟ್ರೀಮಿಂಗ್ ಮಾಡುವಾಗ ಅದನ್ನು ಕೆಲವರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಆದರೆ, ಅವರು ಗೋರಿಪಾಳ್ಯವನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದಕ್ಕೆ ನಟ್ಟಿಗರಿಂದ ತರಹೇವಾರಿ ಕಾಮೆಂಟ್‌ಗಳು ಬಂದಿವೆ.ಇದರಿಂದ ನ್ಯಾಯಾಲಯದ ಘನತೆಗ ಧಕ್ಕೆ ಬರುತ್ತದ್ದು, ಯೂಟೂಬ್ ಲೈವ್ ಸ್ಟ್ರೀಮಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ವಕೀಲರ ಸಂಘದಿಂದ ಮನವಿ ಮಾಡಲಾಗಿದೆ.
ಬೆಂಗ್ಳೂರಿನ ಏರಿಯಾವನ್ನು ಪಾಕಿಸ್ತಾನ ಎಂದ ಹೈಕೋರ್ಟ್ ಜಡ್ಜ್: ವಿವರಣೆ ಕೇಳಿದ ಸುಪ್ರೀಂ!
ಹೈಕೋರ್ಟ್ ನ್ಯಾಯಮೂರ್ತಿಗಳ ವಿಡಿಯೋ ವೈರಲ್ ಬೆನ್ನಲ್ಲೇ ಕೆಲ ದಿನಗಳ ಕಾಲ ನೇರ ಪ್ರಸಾರ ಬಂದ್ ಮಾಡುವಂತೆ ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಜಾರಿಯಾ ಅವರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯಮೂರ್ತಿ ಶ್ರೀಶಾನಂದ ಅವರು ಕೋರ್ಟ್ ಕಲಾಪ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನ್ಯಾಯಾಮೂರ್ತಿಗಳು ಮೌಖಿಕವಾಗಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡಿರುವುದು ರಾಷ್ಟ್ರ ಮಟ್ಟದಲ್ಲಿ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಹಿನ್ನಲೆಯಲ್ಲಿ ವಕೀಲರ ವೃಂದಕ್ಕೆ ಅಘಾತವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರ ಕಾರ್ಯದಕ್ಷತೆ ಹಾಗೂ ಬದ್ಧತೆ ಅತ್ಯುತ್ತಮವಾಗಿದೆ. ಆದರೆ, ವಿಡಿಯೋ ವೈರಲ್ ನಿಂದಾಗಿ ಕೋರ್ಟ್ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಯೂಟೂಬ್ ನೇರ ಪ್ರಸಾರವನ್ನು ಕೆಲ ದಿನಗಳವರೆಗೆ ಸ್ಥಗಿತ ಮಾಡುಂತೆ ಬೆಂಗಳೂರು ವಕೀಲರ ಸಂಘದಿಂದ ಮುಖ್ಯ ನ್ಯಾಯಾಮೂರ್ತಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ವೇದವ್ಯಾಸ ಆಚಾರ್ ಶ್ರೀಶಾನಂದ ಅವರು ಇತ್ತೀಚೆಗೆ ನ್ಯಾಯಾಲಯದ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯದ ಬಗ್ಗೆ ಮಾತನಾಡುತ್ತಾ ಮಿನಿ ಪಾಕಿಸ್ತಾನ ಎಂದು ಉಲ್ಲೇಖ ಮಾಡಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ವಸುಪ್ರೀಂ ಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಜಮೀನ್ದಾರ-ಬಾಡಿಗೆದಾರ ವಿವಾದದ ಬಗ್ಗೆ ಮಾತನಾಡುತ್ತಾ ನ್ಯಾಯಮೂರ್ತಿ ಶ್ರೀಶಾನಂದ ಅವರು ಜನಸಂದಣಿ ಪ್ರದೇಶವಾದ ಗೋರಿಪಾಳ್ಯವನ್ನು ಮಿನಿ ಪಾಕಿಸ್ತಾನ ಎಂದು ಉಲ್ಲೇಖಿಸಿದ್ದರು.
ಖದೀಮರಿಂದ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್ ಹ್ಯಾಕ್, ಅಸಂಬದ್ಧ ವಿಡಿಯೋ ಪೋಸ್ಟ್!