ಬೆಂಗ್ಳೂರಿನ ಏರಿಯಾವನ್ನು ಪಾಕಿಸ್ತಾನ ಎಂದ ಹೈಕೋರ್ಟ್‌ ಜಡ್ಜ್: ವಿವರಣೆ ಕೇಳಿದ ಸುಪ್ರೀಂ!

ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಶ್ರೀಶಾನಂದ ಅವರು ಮುಸ್ಲಿಂ ಬಾಹುಳ್ಯದ ಪ್ರದೇಶವನ್ನು 'ಮಿನಿ ಪಾಕಿಸ್ತಾನ' ಎಂದು ಕರೆದಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದು ಘಟನೆ ಕುರಿತಂತೆ ವಿವರಣೆ ಕೇಳಿದೆ.

supreme court initiates suo motu case justice v srishananda controversial comments rav

ದೆಹಲಿ (ಸೆ.20): ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಶ್ರೀಶಾನಂದ ಅವರು ಮುಸ್ಲಿಂ ಬಾಹುಳ್ಯದ ಪ್ರದೇಶವನ್ನು 'ಮಿನಿ ಪಾಕಿಸ್ತಾನ' ಎಂದು ಕರೆದಿದ್ದ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದು ಘಟನೆ ಕುರಿತಂತೆ ವಿವರಣೆ ಕೇಳಿದೆ.

ಕಳೆದ ಆಗಸ್ಟ್‌ 28ರಂದು ಬಾಡಿಗೆ ನಿಯಂತ್ರಣ ಕಾಯಿದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ ಶ್ರೀಶಾನಂದ ವಿಚಾರಣೆ ನಡೆಸುತ್ತಿದ್ದ ವೇಳೆ ಹೇಳಿಕೆ ನೀಡಿದ್ದರು.

ಮುಸ್ಲಿಂ ಬಾಹುಳ್ಯದ ಗೋರಿ ಪಾಳ್ಯ ಪ್ರದೇಶದಲ್ಲಿ ಆಟೋವೊಂದರಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಕುಳಿತಿದ್ದಾಗ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು. 'ಮೈಸೂರು ರಸ್ತೆಯ ಫ್ಲೈಓವರ್ ಕಡೆಗೆ ಹೋಗಿ, ಪ್ರತಿ ಆಟೋರಿಕ್ಷಾದಲ್ಲಿ 10 ಜನರಿರುತ್ತಾರೆ. ಮೈಸೂರು ರಸ್ತೆಯ ಫ್ಲೈಓವರ್ ಮಾರುಕಟ್ಟೆಯಿಂದ ಗೋರಿಪಾಳ್ಯ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ... ನೀವು ಎಷ್ಟೇ ಕಟ್ಟುನಿಟ್ಟಿನ ಅಧಿಕಾರಿಯನ್ನು ಕಳುಹಿಸಿದರೂ ಅವರನ್ನು ಹೊಡೆಯಲಾಗುತ್ತದೆ' ಎಂಬ ಹೇಳಿಕೆ ನೀಡಿದ್ದರು. 

ವಿಚ್ಛೇದನ ಕೋರಿದ್ದ ದಂಪತಿಯನ್ನು ಗವಿಮಠಕ್ಕೆ ಕಳುಹಿಸಿದ ಹೈಕೋರ್ಟ್: ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥ

ಘಟನೆ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಪ್ರಕರಣ ಸಂಬಂಧ ಉತ್ತರಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ವರದಿ ಕೇಳಿರುವ ಸುಪ್ರೀಂ ಕೋರ್ಟ್, ಈ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios