ಕೋಣ ಮಾಲೀಕನ ಪತ್ತೆ ಹಚ್ಚಲು ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ, ಬಳ್ಳಾರಿಯಲ್ಲಿ ವಿಚಿತ್ರ ಬಡಿದಾಟ!
ಈ ಕೋಣ ನಮ್ದು, ಇದು ನಮ್ಮ ಗ್ರಾಮದ ಕೋಣ, ಎರಡೂ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಗ್ರಾಮಸ್ಥರು ಈ ಕೋಣ ಮಾಲೀಕ ಯಾರು ಅನ್ನೋದು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಇಷ್ಟೇ ಅಲ್ಲ ಇದೇ ಕೋಣ ಇದೀಗ ಕರ್ನಾಟಕ, ಆಂಧ್ರ ಪ್ರದೇಶ ನಡುವೆ ಮಾರಾಮಾರಿಗೂ ಕಾರಣವಾಗಿದೆ.
ಬಳ್ಳಾರಿ(ಜ.02) ಗಡಿ ವಿಚಾರದಲ್ಲಿ ಕರ್ನಾಟಕ ಕೆಲ ರಾಜ್ಯಗಳ ಜೊತೆ ತಿಕ್ಕಾಟ ನಡೆಸುತ್ತಿದೆ. ಮತ್ತೆ ಕೆಲ ರಾಜ್ಯಗಳ ಜೊತೆ ನದಿ ಸೇರಿದಂತೆ ಇತರ ಹೋರಾಟಗಳು ಇವೆ. ಈ ಬಡಿದಾಡ, ಹೋರಾಟದ ಸಾಲಿಗೆ ಇದೀಗ ಕೋಣ ಕೂಡ ಸೇರಿಕೊಂಡಿದೆ. ಇದೀಗ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ನಡುವೆ ಕೋಣ ಬಡಿದಾಟ ಜೋರಾಗುತ್ತಿದೆ. ಎರಡೂ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರೂ ತಮ್ಮ ತಮ್ಮ ದೂರು ನೀಡಿದ್ದಾರೆ. ಎರಡು ಎಫ್ಐಆರ್ ದಾಖಲಾಗಿದೆ. ಇಷ್ಟೇ ಅಲ್ಲ ಇದೀಗ ಗ್ರಾಮಸ್ಥರು ಈ ಕೋಣಯ ಮಾಲೀಕ ಯಾರು? ಪತ್ತೆ ಹಚ್ಚಲು ಡಿಎನ್‌ಎ ಟೆಸ್ಟ್‌ಗೆ ಮುಂದಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳದಲ್ಲಿ ನಡೆದಿದೆ.
ಬೊಮ್ಮನಹಾಳ ಗ್ರಾಮ ಹಾಗೂ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮೆದೆಹಾಳ ಗ್ರಾಮದ ನಡುವೆ ಕೋಣ ವಿಚಾರವಾಗಿ ಮಾರಾಮಾರಿಯಾಗಿದೆ. ಕೋಣ ಸದ್ಯ ಮೆದೆಹಾಳ ಗ್ರಾಮದಲ್ಲಿದೆ. ಎರಡೂ ಗ್ರಾಮಸ್ಥರು ಇದು ತಮ್ಮ ಕೋಣ ಎಂದು ವಾದಿಸುತ್ತಿದ್ದಾರೆ. ಗ್ರಾಮಸ್ಥರ ನಡುವೆ ಶುರುವಾದ ಜಗಳದಲ್ಲಿ ಹಲವರು ಗಾಯಗೊಂಡಿದ್ದಾರೆ.
ಪ್ರಾಣಿ ಮೇಳದಲ್ಲಿ ಎಲ್ಲರ ಗಮನಸೆಳೆದ 23 ಕೋಟಿ ಮೌಲ್ಯದ ಕೋಣ
ಕೋಣಯಿಂದ ಜಗಳ ಶುರುವಾಗಿದ್ದು ಹೇಗೆ?
ಬಳ್ಳಾರಿಯ ಬೊಮ್ಮನಹಾಳ ಗ್ರಾಮಸ್ಥರು 5 ವರ್ಷದ ಕೋಣಯನ್ನು ಸಾಕಮ್ಮ ದೇವಿ ಜಾತ್ರೆಗೆ ಬಲಿಕೊಡಲು ಬಿಟ್ಟಿದ್ದಾರೆ. ಎಲ್ಲಾ ಗ್ರಾಮಸ್ಥರು ಈ ಕೋಣಗೆ ಆಹಾರ ನೀರು ನೀಡುತ್ತಿದ್ದರು. ಆದರೆ ಇದಕ್ಕಿದ್ದಂತೆ ಕೋಣ ಕಾಣೆಯಾಗಿದೆ. ದೇವಿಗೆ ಬಿಟ್ಟಿರುವ ಕೋಣ, ಹೀಗಾಗಿ ಗ್ರಾಮಸ್ಥರು ತಲೆಕೆಡಿಸಿಕೊಂಡಿದ್ದಾರೆ. ದೇವಿ ಮುನಿಸಿಕೊಂಡರೆ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇಡೀ ಗ್ರಾಮಸ್ಥರು ಹುಡುಕಾಟ ಶುರುಮಾಡಿದ್ದಾರೆ. ಸತತ ಹುಡುಕಾಟದ ಬಳಿಕ ಕೋಣ 20 ಕಿಲೋಮೀಟರ್ ದೂರದ ಮೆದೆಹಾಳದಲ್ಲಿ ಪತ್ತೆಯಾಗಿದೆ ಅನ್ನೋದು ಬೊಮ್ಮನಹಾಳ ಗ್ರಾಮಸ್ಥರ ವಾದ.
ಮೆದೆಹಾಳ ಗ್ರಾಮ ಆಂಧ್ರ ಪ್ರದೇಶಕ್ಕೆ ಸೇರಿದ ಗ್ರಾಮವಾಗಿದೆ. ಕೋಣಯನ್ನು ಕರೆತರಲು ಬೊಮ್ಮನಹಾಳದ ಗ್ರಾಮಸ್ಥರು ಮೆದೆಹಾಳಕ್ಕೆ ತೆರಳಿದ್ದಾರೆ. ಈ ವೇಳೆ ಇದು ಮೆದೆಹಾಳದ ಕೋಣ ಎಂದು ಅಲ್ಲಿನ ಗ್ರಾಮಸ್ಥರು ವಾದಿಸಿದ್ದಾರೆ. ಮೆದೆಹಾಳದ ಕೋಣಯನ್ನು ನೀವು ಹೇಗೆ ಕೊಂಡೊಯ್ಯಲು ಸಾಧ್ಯ ಎಂದು ಜಗಳ ಶುರುವಾಗಿದೆ. ದಷ್ಟಪುಷ್ಠವಾಗಿ ಬೆಳೆಸಿದ್ದ ಕೋಣಗಾಗಿ ಭಾರಿ ಕಿತ್ತಾಟ ಆರಂಭಗೊಂಡಿದೆ. ಎರಡು ಗ್ರಾಮಸ್ಥರ ನಡುವೆ ಮಾರಾಮಾರಿ ನಡುದು ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಾಲೀಕನ ಪತ್ತೆಗೆ ಡಿಎನ್ಎ ಪರೀಕ್ಷೆ
ಮೋಕಾ ಪೊಲೀಸ್ ಠಾಣೆಯಲ್ಲಿ ಬೊಮ್ಮನಹಾಳ ಗ್ರಾಮಸ್ಥರು ನಡೆದ ಘಟನೆ ವಿವರಿಸಿ ದೂರು ನೀಡಿದ್ದಾರೆ. ಇತ್ತ ಮೆದೆಹಾಳ ಗ್ರಾಮಸ್ಥರು ಇದು ತಮ್ಮ ಕೋಣ ಎಂದು ದೂರು ನೀಡಿದ್ದಾರೆ. ಇದು ಬೊಮ್ಮನಹಾಳ ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದೆ. ಇದು ಯಾರ ಕೋಣ ಅನ್ನೋದು ಪತ್ತೆ ಹಚ್ಚಲು ಬೊಮ್ಮನಹಾಳ ಗ್ರಾಮಸ್ಥರು ಪೊಲೀಸರ ಬಳಿ ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿದ್ದಾರೆ. ಈ ಕೋಣದ ತಾಯಿ ಬೊಮ್ಮನಹಾಳ ಗ್ರಾಮದಲ್ಲಿದೆ. 5 ವರ್ಷದ ಕೋಣ ಹಾಗೂ ಅದರ ತಾಯಿ ಡಿಎನ್‌ಎ ಪರೀಕ್ಷೆ ಮಾಡಿ ಫಲಿತಾಂಶ ನೀಡಲಿದೆ. ಇದರಿಂದ ಮಾಲೀಕತ್ವ ಯಾರದ್ದು ಅನ್ನೋದು ಗೊತ್ತಾಗಲಿದೆ ಎಂದು ಬೊಮ್ಮನಹಾಳ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಬೊಮ್ಮನಹಾಳದಲ್ಲಿ ವರ್ಷಕ್ಕೊಮ್ಮೆ ಈ ಜಾತ್ರೆ ನಡೆದರೆ, ಮೆದೆಹಾಳದಲ್ಲಿ ಮೂರು ವರ್ಷಕ್ಕೊಮ್ಮೆ ಈ ರೀತಿಯ ಜಾತ್ರೆ ನಡೆಯುತ್ತದೆ. ಮೆದೆಹಾಲ ಗ್ರಾಮಸ್ಥರು ಇದು ದೇವರಿಗೆ ಬಿಟ್ಟ ಕೋಣ ಎಂದಿದ್ದಾರೆ. ಹೀಗಾಗಿ ಎರಡೂ ಗ್ರಾಮಸ್ಥರ ನಡುವೆ ಕೋಣ ಬಡಿದಾಟ ಜೋರಾಗಿದೆ. ಇದೀಗ ಪೊಲೀಸ್ ಠಾಣೆ ಅಂಗಳದಲ್ಲಿ ಪ್ರಕರಣ ನಿಂತಿದೆ.
ಹೆಲ್ಮೆಟ್ ಧರಿಸಿದ ಎಮ್ಮೆ ಮೇಲೆ ಕುಳಿತು ಪ್ರಯಾಣಿಸಿದ ಕೋಣ..! ನೆಟ್ಟಿಗರ ತೀವ್ರ ಆಕ್ರೋಶ!