India

ಇದರ ಬೆಲೆಗೆ 50 ಐಷಾರಾಮಿ ಬಂಗಲೆ ಖರೀದಿಸ್ಬಹುದು

ಪುಷ್ಕರ್ ಕೃಷಿ ಮೇಳದಲ್ಲಿ ಹರಿಯಾಣದಿಂದ ಬಂದ ₹23 ಕೋಟಿ ಬೆಲೆಬಾಳುವ 'ಅನಮೋಲ್' ಎಂಬ ಕೋಣ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

23 ಕೋಟಿ ಬೆಲೆಯ ಕೋಣ ದೇಶದಾದ್ಯಂತ ಸುದ್ದಿ

ಪುಷ್ಕರ್ ಪಶುಮೇಳ ದೇಶಾದ್ಯಂತ ಪ್ರಸಿದ್ಧ. ಕೋಟಿ ಬೆಲೆಬಾಳುವ ಪ್ರಾಣಿಗಳು ಇಲ್ಲಿಗೆ ಬರುವುದೇ  ಇದಕ್ಕೆ ಕಾರಣ. 23 ಕೋಟಿ ಬೆಲೆಯ ಕೋಣ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ..

ಹರಿಯಾಣದ ಕೋಣ 'ಅನಮೋಲ್'

ಪುಷ್ಕರ್ ಪಶುಮೇಳದಲ್ಲಿರುವ ಈ ಕೋಣದ ಹೆಸರು 'ಅನಮೋಲ್'. ಹರಿಯಾಣದ ಮಾಲೀಕರು ಇದನ್ನು ತಂದಿದ್ದಾರೆ. ಇದರ ಬೆಲೆ ಸುಮಾರು ₹23 ಕೋಟಿ. 'ಅನಮೋಲ್ 'ಅನ್ನು ನೋಡಲು ಜನರು ದೂರದೂರುಗಳಿಂದ ಬರುತ್ತಿದ್ದಾರೆ.

ತೂಕ ಸುಮಾರು 1500 ಕೆ.ಜಿ

'ಅನಮೋಲ್' ಕೋಣದ ಬೆಲೆಯಲ್ಲಿ ಲಕ್ನೋ, ಭೋಪಾಲ್, ಇಂದೋರ್ ಮತ್ತು ಪಟ್ನಾ ಮುಂತಾದ ನಗರಗಳಲ್ಲಿ 45ರಿಂದ ರಿಂದ 50 ಲಕ್ಷ ರೂಪಾಯಿಗಳಲ್ಲಿ ಬಂಗಲೆಯನ್ನು ಖರೀದಿಸಬಹುದು. 'ಅನಮೋಲ್'ನ ತೂಕ ಸುಮಾರು 1500 ಕೆ.ಜಿ

ಅನ್ಮೋಲ್ ವೀರ್ಯಕ್ಕೆ ಭಾರಿ ಬೇಡಿಕೆ

ಅನ್ಮೋಲ್ ವಯಸ್ಸು 8 ವರ್ಷಗಳು.ಇದರ ವೀರ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಒಂದು ವಾರದಲ್ಲಿ ಎರಡು ಬಾರಿ ಅದರ ವೀರ್ಯವನ್ನು ತೆಗೆಯಲಾಗುತ್ತದೆ. ಇದು ಸುಮಾರು 300 ರಿಂದ 900 ಎಮ್ಮೆಗಳು ಗರ್ಭ ಧರಿಸಲು ಸಾಧ್ಯವಾಗುತ್ತದೆ.

ದಿನದ ಆಹಾರ ವೆಚ್ಚ ₹1500

ಈ ಕೋಣಕ್ಕೆ ಪ್ರತಿದಿನ ಒಣ ಹಣ್ಣುಗಳನ್ನು ತಿನ್ನಿಸಲಾಗುತ್ತದೆ. ಮೊಟ್ಟೆ, ಸೋಯಾಬೀನ್, ತುಪ್ಪ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಸಹ ನೀಡಲಾಗುತ್ತದೆ. ಒಂದು ದಿನದ ಆಹಾರಕ್ಕೆ ಸಾವಿರದಿಂದ ₹ 1500 ವೆಚ್ಚವಾಗುತ್ತದೆ.

ಅನ್ಮೋಲ್ ಮಾಲೀಕ ಪಲ್ಮಿಂದರ್

ಮಾಲೀಕ ಪಲ್ಮಿಂದರ್ ಹೇಳುವ ಪ್ರಕಾರ ಕಳೆದ ವರ್ಷವೂ 'ಅನಮೋಲ್'ನನ್ನು ಮೇಳಕ್ಕೆ ಕರೆತರಲಾಗಿತ್ತು.. ಆಗ ₹23 ಕೋಟಿ ಬೆಲೆ ನಿಗದಿಪಡಿಸಲಾಗಿತ್ತು. ಆದರೆ ಇದು ಕುಟುಂಬದ ಸದಸ್ಯನಂತಿರುವ ಕಾರಣಕ್ಕೆ ಮಾರಾಟ ಮಾಡಿಲ್ಲ.

ಭಾರತದಲ್ಲಿರುವ ಮುಸ್ಲಿಂ ವಿಶ್ವವಿದ್ಯಾಲಯಗಳು ಇವು

ಭಾರತೀಯ ರೈಲ್ವೆ ಹೊಸ ದಾಖಲೆ: ಒಂದೇ ದಿನದಲ್ಲಿ 3 ಕೋಟಿ ಜನರ ಪ್ರಯಾಣ

ಏಷ್ಯಾದ ಅತಿದೊಡ್ಡ ಶಿವಲಿಂಗ, ಮಹಾಭೈರವ ದೇವಾಲಯ ಇರೋದೆಲ್ಲಿ?

ವಿಮಾನ ನಿಲ್ದಾಣವಿಲ್ಲದ 5 ಜನಪ್ರಿಯ ದೇಶಗಳು, ಜನ ವ್ಯವಹರಿಸೋದು ಹೇಗೆ?