Asianet Suvarna News Asianet Suvarna News

ಬೆಳಗಾವಿ ಅಧಿವೇಶನದಲ್ಲಿ ಮೈ ಚಳಿ ಬಿಡಿಸುತ್ತೇವೆ: ರಾಜ್ಯ ಸರ್ಕಾರದ ವಿರುದ್ಧ ಆರ್‌ ಅಶೋಕ್ ಗುಡುಗು!

ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆಯೇ ಆರ್‌. ಅಶೋಕ ರಾಜ್ಯವನ್ನು ಕಾಡುತ್ತಿರುವ ಬರಗಾಲ ಅಧ್ಯಯನವನ್ನು ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಿಂದಲೇ ಶುರು ಮಾಡುವ ಮೂಲಕ ಆಳುವ ಪಕ್ಷದ ಕಿವಿ ಹಿಂಡೋದಾಗಿ ಗುಡುಗಿದ್ದಾರೆ.

Belagavi assembly session opposition leader r ashok statement at kalaburagi rav
Author
First Published Nov 22, 2023, 7:42 AM IST

ಕಲಬುರಗಿ (ನ.22):  ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆಯೇ ಆರ್‌. ಅಶೋಕ ರಾಜ್ಯವನ್ನು ಕಾಡುತ್ತಿರುವ ಬರಗಾಲ ಅಧ್ಯಯನವನ್ನು ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಿಂದಲೇ ಶುರು ಮಾಡುವ ಮೂಲಕ ಆಳುವ ಪಕ್ಷದ ಕಿವಿ ಹಿಂಡೋದಾಗಿ ಗುಡುಗಿದ್ದಾರೆ.

ಬೆಳೆ ಹಾನಿ ಸಮೀಕ್ಷೆ ಸರಿಯಾಗಿ ಆಗಿಲ್ಲ, ಅದರಲ್ಲಿ ನಿಖರತೆ ಇಲ್ಲ, ಈ ವಿಚಾರದಲ್ಲಿ ಅಧಿಕಾರಿಗಳ ನಾಟಕ ನಡೆದಿದೆ, ಪಂಚ ಗ್ಯಾರಂಟಿಯಲ್ಲಿನ ಉಚಿತಗಳಿಗಿಂತ ಬೆಳೆಹಾನಿ ಪರಿಹಾರ ಕೊಡಿರೆಂದು ರೈತರು ಕೇಳುತ್ತಿದ್ದಾರೆ, ಸರಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು, ನಾವು (ಬಿಜೆಪಿ ಸರಕಾರದಲ್ಲಿ) ನೀಡಿದಂತೆ ಡಬ್ಬಲ್‌ ಬೆಳೆಹಾನಿ ಪರಿಹಾರ ಘೋಷಣೆ ಮಾಡಬೇಕು, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಮಾಡುತ್ತೆವೆ, ಸರ್ಕಾರದ ಕಿವಿ ಹಿಂಡುತ್ತೇವೆಂದು ಅಶೋಕ ಹೇಳಿದ್ದಾರೆ.

ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದರ ನಡುವೇ ರೈತರ ವೇಷದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ವೈರಲ್ ವಿಡಿಯೋ!

ಬರಗಾಲ ಅಧ್ಯಯನ ಪ್ರವಾಸದಲ್ಲಿರುವ ಅವರು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಬೆಳಗಾವಿ ಅಧಿವೇಶನದಲ್ಲಿ ಬರ ಪರಿಸ್ಥಿತಿ, ರೈತರ ಸಂಕಷ್ಟ, ಬಿಡಿಗಾಸೂ ರೈತರಿಗೆ ಕೈ ಸೇರದೆ ಇರೋ ವಿಚಾರಗಳನ್ನೇ ಪ್ರದಾನವಾಗಿ ಪ್ರಸ್ತಾಪಿಸುತ್ತೇವೆ, ಜೊತೆಗೇ ಹಲ್ಲೋ ಅಪ್ಪಾ ಅನ್ನೋ ಯತೀಂದ್ರ ಆಡಿಯೋ, ಜಮೀರ್ ಹಿಂದು ವಿರೋಧಿ ಹೇಳಿಕೆ, ಕೆಇಎ ಪರೀಕ್ಷಾ ಹಗರಣ, ಸದನದಲ್ಲಿನ ವೀರ ಸಾವರ್ಕರ್‌ ಫೋಟೋ ವಿಚಾರ ಸೇರಿದಂತೆ ಇನ್ನೂ ಹಲವು ಅಸ್ತ್ರಗಳನ್ನು ಕಾಂಗ್ರೆಸ್ಸಿಗರೇ ಬಿಜೆಪಿ ಕೈಗಿತ್ತಿದ್ದು ಅವನ್ನೆಲ್ಲ ಒಂದೊಂದಾಗಿ ಝಳುಪಿಸುತ್ತೇವೆಂದರು.

ಕೇಂದ್ರ ಸರಕಾರ ರಾಜ್ಯದ ಸಚಿವರ ಭೇಟಿಗೆ ಸಮಯ ಕೊಟ್ಟಿಲ್ಲ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಆರ್.ಅಶೋಕ್, ರಾಜ್ಯದ ಸಚಿವರೆಲ್ಲಾ ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಬಿಜಿ ಆಗಿದ್ದಾರೆ, ಇಡಿ ದಾಳಿ ವೇಳೆ ಯಾರ ಮನೆಯಲ್ಲಿ ಎಷ್ಟೆಲ್ಲಾ ದುಡ್ಡು ಸಿಕ್ಕಿದೆ ಗೊತ್ತಲ್ವಾ? ಪಂಚ ರಾಜ್ಯ ಚುನಾವಣೆಗೆ ರಾಜ್ಯ ಸರಕಾರ ಕಾಂಗ್ರೆಸ್ ಎಟಿಎಂ ಆಗಿದೆ. ಬೆಳೆಹಾನಿಗೆ ರೈತರಿಗೆ ಪರಿಹಾರ ನೀಡೋ ಬದಲು ರೈತರನ್ನೇ ಸುಲಿಗೆ ಮಾಡಿ ಆ ಹಣವನ್ನೆಲ್ಲ ಚುನಾವಣೆಗೆ ಕಾಂಗ್ರೆಸ್‌ ಬಳಸುತ್ತಿದೆ ಎಂದು ದೂರಿದರು.

ಪಹಣಿ ಪತ್ರ ಕ್ಕೆ 25 ರು. ಶುಲ್ಕ ನಿಗದಿ ಮಾಡಲಾಗಿದೆ. ಇದ್ಯಾವ ನ್ಯಾಯ, ನಮ್ಮ ಸರಕಾರದಲ್ಲಿ ಇದನ್ನ ರೈತರ ಮನೆಗೇ ಉಚಿತವಾಗಿ ನೀಡದ್ದೇವೆ. ರೈತರ ಪಂಪ್‌ಸೆಟ್‌ಗೆ ಕರೆಂಟ್‌ ಸಂಪರ್ಕ ಬೇಕಾದಲ್ಲಿ 1 ಲಕ್ಷ ರು ಠೇವಣಿ ಇಡಬೇಕಂತೆ, ಕಂಬ ಬಿದ್ದರೆ, ಹಾಳಾದರೆ ಹಾಕಿಸಲು ರೈತರೆ ಹಣ ಕೊಡಬೇಕಂತೆ, ಟೀಸಿ ಸುಟ್ಟಲ್ಲಿ, ಕೆಟ್ಟು ನಿಂತಲ್ಲಿ ರಿಪೇರಗೂ ರೈತರೇ ವಾಹನ ಕೋಡಬೇಕಂತೆ. ಹೀಗೆ ರೈತರನ್ನ ಲೂಟಿ ಮಾಡಿ ಹಣ ಉಳಿಸಿ ಪಂಚ ರಾಜ್ಯಗಲಿಗೆ ರವಾನಿಸಲಾಗುತ್ತಿದೆಯೆ? ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಇ‍ವರಿಗೇನಾಗಿದೆ ಧಾಡಿ?:

ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ರಾಜ್ಯ ಸರಕಾರ ನೆರವಿಗೆ ಧಾವಿಸಬೇಕು. ನಂತರ ಎನ್‌ಡಿಆರ್‌ಎಫ್‌ ನಿಯಮದಂತೆ ಕೇಂದ್ರದ ಹಣ ಬಂದೇ ಬರುತ್ತದೆ. ಇದನ್ನು ಬಿಟ್ಟು ತಾವೇ ಹಣ ವೆಚ್ಚಕ್ಕೆ ಮುಂದಾಗದೆ ಕೇಂದ್ರದತ್ತ ಬೆರಳು ತೋರಿಸೋದು ಸರಿಯೆ? ಮೊದಲು ಹಣ ವೆಚ್ಚ ಮಾಡಲು ಇ‍ರಿಗೇನಾಗಿದೆ ದಾಡಿ? ಎಂದು ಪ್ರಶ್ನಿಸಿದರು.

ಹಿಂದೆ ನಮ್ಮ ಸರ್ಕಾರವಿದ್ದಾಗ ನೆರೆ ಬಂದು ರೈತರ ಹಾಳಾದ ಹೊಲಗಳಿಗೆ ಹೆಕ್ಟರ್‌ಗೆ ಡಬ್ಬಲ್‌ ಪರಿಹಾರ ಘೋಷಿಸಿದ್ದೇವು. ಇವರೂ ಹಾಗೇ ಮಾಡ ತೋರಿಸಲಿ ನೋಡೋಣ, ಉಚಿತ ಗ್ಯಾರಂಟಿಗಳಿಗೇ ಹಣವಿಲ್ಲದಂತಾಗಿದೆ. ಖಜಾನೆ ಖಾಲಿಯಾಗಿದೆ. ಹೀಗಾಗಿ ಇವರಿಗೆ ಏನೂ ಮಾಡಲಾಗುತ್ತಿಲ್ಲವೆಂದು ಜರಿದರು. 

ಕನ್ನಡದ ಬಗ್ಗೆ ಅಭಿಮಾನ ಇರಲಿ ದುರಭಿಮಾನ ಬೇಡ: ಸಿಎಂ ಸಿದ್ದರಾಮಯ್ಯ

ವಿಪಕ್ಷ ನಾಯಕನ ಸ್ಥಾನದ ವಿಚಾರದಲ್ಲಿ ಬಸವನಗೌಡ ಪಾಟೀಲ್‌ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ ಇದೆಲ್ಲ ಸ್ವಲ್ಪ ದಿನದಲ್ಲಿ ಸರಿ ಹೋಗುತ್ತದೆ. ಅದಾಗಲೇ ಸಿಟಿ ರವಿಯವರೊಂದಗೆ ಮಾತನಾಡಿರುವೆ. ಇನ್ನಿಬ್ಬರೊಂದಿಗೆ ಮಾತನಾಡೋದಿದೆ, ಮಾತುಕತೆ ಪ್ರಕ್ರಿಯೆ ಶುರು ಮಾಡಿದ್ದೇನೆಂದರಲ್ಲದೆ ಆ ನಾಯಕರಿಬ್ಬರ ಹೆಸರಿನ ಗುಟ್ಟು ಬಿಟ್ಟುಕೊಡಲಿಲ್ಲ.

ಕಲಬುರಗಿಯಂದ ಶುರುವಾಗಿರುವ ಬರ ಅಧ್ಯಯನ ಮುಂದುವರಿಯಲಿದೆ, ಬೀದರ್‌ಗೆ ಬುಧವಾರ ಬೇಟಿ ನೀಡುವೆ, ನಂತರ ಕೋಲಾರ, ಚಿಕ್ಕಬಳ್ಳಾಪುರ, ಗದಗ ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಎಲ್ಲಾಕಡೆ ಬರಗಾಲ ಅಧ್ಯಯನ, ರೈತರ ಸಂಕಷ್ಟ ತಿಳಿದು ಬೆಳಗಾವಿ ಅಧಿವೇಶನದಲ್ಲಿ ಸರಕಾರದ ಚಳಿ ಬಿಡಿಸೋದಾಗಿ ಅಶೋಕ ಪುನರುಚ್ಚರಿಸಿದರು.

Follow Us:
Download App:
  • android
  • ios