ಕನ್ನಡ ಭಾಷೆ, ನೆಲ ಜಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಿಗೂ ಅಭಿಮಾನ ಇರಬೇಕು. ಆದರೆ, ದುರಭಿಮಾನ ಬೇಡ. ಅಭಿಮಾನ ಹೆಚ್ಚೆಚ್ಚು ಬೆಳೆದಷ್ಟೂ ಕನ್ನಡವೂ ಎತ್ತರಕ್ಕೆ ಬೆಳೆಯುತ್ತದೆ. ಕರ್ನಾಟಕವೂ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.22):  ಕನ್ನಡ ಭಾಷೆ, ನೆಲ ಜಲದ ಬಗ್ಗೆ ಪ್ರತಿಯೊಬ್ಬ ಕನ್ನಡಿಗರಿಗೂ ಅಭಿಮಾನ ಇರಬೇಕು. ಆದರೆ, ದುರಭಿಮಾನ ಬೇಡ. ಅಭಿಮಾನ ಹೆಚ್ಚೆಚ್ಚು ಬೆಳೆದಷ್ಟೂ ಕನ್ನಡವೂ ಎತ್ತರಕ್ಕೆ ಬೆಳೆಯುತ್ತದೆ. ಕರ್ನಾಟಕವೂ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕನ್ನಡ ಕರ್ನಾಟಕದ ರಾಜ್ಯ ಭಾಷೆ, ಕನ್ನಡಿಗರ ಮಾತೃಭಾಷೆ. ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಆಡಳಿತ ಭಾಷೆಯೂ ಕನ್ನಡ. ಕನ್ನಡದ ಬಗ್ಗೆ ಅಭಿಮಾನದಿಂದ ನಿತ್ಯವೂ ಕನ್ನಡವನ್ನು ಹೆಚ್ಚು ಬಳಕೆ ಮಾಡುವುದರಿಂದ, ಕನ್ನಡದಲ್ಲೇ ವ್ಯವಹರಿಸುವುದರಿಂದ ಕನ್ನಡೇತರರೂ ಕನ್ನಡ ಕಲಿತು ಕನ್ನಡಿಗರಾಗುತ್ತಾರೆ. ಇದರಿಂದ ಭಾಷೆ ಬೆಳೆಯುತ್ತದೆ. ಅನಿವಾರ್ಯವಾದಾಗ ಮಾತ್ರ ಬೇರೆ ಭಾಷೆಯಲ್ಲಿ ವ್ಯವಹರಿಸಬೇಕು ಎಂದರು.

'ಸಿಎಂ ಇಬ್ರಾಹಿಂಗೂ ಹಣ ಕೊಟ್ಟಿದ್ದೆ'; ಎಚ್‌ಡಿಕೆ ಹಣ ಪಡೆದಿದ್ದಾರೆ ಎಂಬ ಇಬ್ರಾಹಿಂ ಆರೋಪಕ್ಕೆ ಶರವಣ ತಿರುಗೇಟು!

ಕನ್ನಡ ಮಾಧ್ಯಮದಲ್ಲಿ ಕಲಿತರೆ ಸಮಾಜದಲ್ಲಿ ಗೌರವ ಇರುವುದಿಲ್ಲ ಎಂಬ ಕೀಳರಿಮೆ ಬೇಡ. ಪ್ರೊ.ಸಿ.ಆರ್‌.ರಾವ್‌ ಸೇರಿದಂತೆ ದೊಡ್ಡ ದೊಡ್ಡ ವಿಜ್ಞಾನಿಗಳು, ಜ್ಞಾನಪೀಠ ಪುರಸ್ಕೃತ ಬಹುತೇಕ ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಾನ್‌ ಸಾಧನೆ ಮಾಡಿರುವ ಬಹುತೇಕ ಮಂದಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವರು. ನಾನು ಕೂಡ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಇಡೀ ಶಾಲೆಗೆ ಉತ್ತಮ ಫಲಿತಾಂಶ ಪಡೆದ ಮೊದಲಿಗನಾಗಿದ್ದೆ. ನಂತರ ಪಿಯುಸಿಗೆ ಸೇರಿದ ಕಾಲೇಜಿನಲ್ಲಿ ಕನ್ನಡ ಮಾಧ್ಯಮ ಇರದ ಕಾರಣಕ್ಕೆ ಇಂಗ್ಲೀಷ್‌ ಮಾಧ್ಯಮ ಆಯ್ಕೆ ಮಾಡಿಕೊಂಡೆ. ಆಗ ನಾನು ದ್ವಿತೀಯ ದರ್ಜೆ ಫಲಿತಾಂಶ ಪಡೆದೆ. ನಂತರ ಕಾನೂನು ಪದವಿಯಲ್ಲಿ ಮೂರನೇ ದರ್ಜೆ ಫಲಿತಾಂಶ ಬಂತು. ಹಾಗಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದೇ ಉತ್ತಮ ಎಂದರು.

ಯಾರೋ ಮಾಡಿದ ತಪ್ಪಿಗೆ ಎಚ್‌ಡಿಕೆ ಕ್ಷಮೆ ಕೇಳಿದ್ದಾರೆ; ಆದ್ರೆ ರೈತರ ಹಣ ತಿಂದು ಟ.ಸಿ ಕೊಡದ ನೀವು ಕಳ್ಳರು; ಪ್ರಜ್ವಲ್ ರೇವಣ್ಣ

ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಇಂದು ದೇಶ, ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಸಮಾಜದ ಸಮಸ್ಯೆಗಳೇನು ಎಂಬುದನ್ನು ಅರಿತು ಆ ಸಮಸ್ಯೆ ಪರಿಹಾರಕ್ಕೆ ಸ್ಪಂಧಿಸುವ ಗುಣ ಬೆಳೆಸಿಕೊಳ್ಳಬೇಕು. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಜಾತ್ಯಾತೀತ ಮನೋಭಾವ, ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ, ವೈಜ್ಞಾನಿಕ ಚಿಂತನೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.