ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದರ ನಡುವೇ ರೈತರ ವೇಷದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ವೈರಲ್ ವಿಡಿಯೋ!
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದರ ನಡುವೆ ಕೃಷಿ ಮೂಲಕವೇ ಮದುವೆ ಕರೆಯೋಲೆ ಕೊಟ್ಟಿರುವ ವಿಶೇಷ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿಯಲ್ಲಿ ನಡೆದಿದೆ.
ದೇವರಾಜು ಕಪ್ಪಸೋಗೆ
ಚಾಮರಾಜನಗರ (ನ.22): ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದರ ನಡುವೆ ಕೃಷಿ ಮೂಲಕವೇ ಮದುವೆ ಕರೆಯೋಲೆ ಕೊಟ್ಟಿರುವ ವಿಶೇಷ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಸಾಮಾನ್ಯವಾಗುತ್ತಿದೆ. ಅದರಂತೆ, ಈ ರೈತ ಕೃಷಿ ಜೀವನವದ ಮೂಲಕವೇ ಮದುವೆ ಕರೆಯೋಲೆ ನೀಡಿರುವುದು ಸದ್ಯ ಮೆಚ್ಚುಗೆಗೆ ಕಾರಣವಾಗಿದೆ.
ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬುವರೊಟ್ಟಿಗೆ ನ. 22ರಂದು ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದು ಇವರು ನಡೆಸಿರುವ ಪ್ರೀ ವೆಡ್ಡಿಂಗ್ ಶೂಟ್ ವೀಡಿಯೋ ಸದ್ಯ ವೈರಲ್ಲಾಗುತ್ತಿದೆ.
ಗೋವಾದಲ್ಲಿ ರೊಮ್ಯಾಂಟಿಕ್ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿದ ಕಿರುತೆರೆ ಜೋಡಿ ಪ್ರಿಯಾ- ಸಿದ್ದು
ರೈತರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹಲವರು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದರು. ಈ ನಡುವೆ, ಯುವ ರೈತ ಅಭಿಲಾಷ್ ಕೃಷಿ ಮೂಲಕ ಮದುವೆಗೆ ಕರೆಯೋಲೆ ಕೊಟ್ಟಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಕೃಷಿ ಮೇಲಿನ ಅಕ್ಕರೆ
ಡ್ರೋಣ್ ಮೂಲಕ, ಜಲಪಾತ, ಸೇತುವೆ, ನದಿ, ಪಾರಂಪರಿಕ ತಾಣಗಳ ಮುಂದೆ ಪ್ರೀ ವೆಡ್ಡಿಂಗ್ ಶೂಟ್ ನಡೆಸುವವರೇ ಬಹಳ. ಆದರೆ, ಅಭಿಲಾಷ್ ತಾವು ಪ್ರೀತಿಸುವ ಕೃಷಿ ಕಾಯಕವನ್ನೇ ತೋರಿದ್ದಾರೆ. ನೊಗ ಕಟ್ಟಿ ಉಳುಮೆ ಮಾಡುವುದು, ಮಧ್ಯಾಹ್ನದ ಊಟ ಮುದ್ದೆ-ಉಪ್ಸಾರು, ರಾಗಿ ತೂರುವುದು, ಎತ್ತಿನಗಾಡಿಯಲ್ಲಿ ಭಾವಿ ಪತ್ನಿ ಜೊತೆ ಸವಾರಿ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ಇವರ ಮದುವೆ ದಿನ ಕೃಷಿ ಸಂಬಂಧದ ಉಪನ್ಯಾಸವೂ ಇರಲಿದೆ ಎಂದು ತಿಳಿದು ಬಂದಿದೆ.
ಆಕರ್ಷಕವಾಗಿ ಕಾಣುವ ಪ್ರಿ-ವೆಡ್ಡಿಂಗ್ ಶೂಟ್‌ಗೆ ಪರ್ಫೆಕ್ಟ್ ಡ್ರೆಸ್ ಆಯ್ಕೆ ಹೀಗಿರಲಿ
ಅಭಿಲಾಷ್ ರೈತ ಚಳುವಳಿಯಲ್ಲಿ ಬೆಳೆದ ರೇಚಣ್ಣ ಅವರ ಮಗ, ಅಭಿಲಾಷ್‌ಗೆ ಸಣ್ಣವರಿಂದಲೂ ಚಳವಳಿಯ ವಿಚಾರ ಪ್ರಭಾವ ಬೀರಿದೆ, ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅವರ ಜೀವನ ಸುಖಕರವಾಗಿರಲಿ. ರೈತರ ಮಕ್ಕಳಿಗೆ 45 ವರ್ಷವಾದರೂ ಹೆಣ್ಣು ಕೊಡುತ್ತಿಲ್ಲ. ಅಂತಹದ್ದರಲ್ಲಿ ತುಂಬಾ ಸಾಂಸ್ಕೃತಿಕವಾಗಿ ಮದುವೆ ಆಗುತ್ತಿದ್ದು ಇದು ಒಳ್ಳೆಯ ಮಾದರಿಯಾಗಿದೆ. ಕೃಷಿ ಲಾಭದಾಯಕವಾಗುವ ತನಕ ಈ ವಿವಾಹ ಸಮಸ್ಯೆ ಇದ್ದೇ ಇರಲಿದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ನಿರಾಶರಾದವರಿಗೆ ಅಭಿಲಾಷ್ ಪಾಸಿಟಿವ್ ಮೈಂಡ್ ಕೊಟ್ಟಿದ್ದಾರೆ, ಧೃತಿ ಗೆಡಬೇಡಿ ಎಂದು ಸಾರಿದ್ದಾರೆ.
ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.