Asianet Suvarna News Asianet Suvarna News

ಪರೀಕ್ಷೆ ಅಕ್ರಮಗಳಲ್ಲಿ ಭಾಗಿಯಾದಲ್ಲಿ ಇನ್ನು ಬೇಲ್‌ ಸಿಗೋದಿಲ್ಲ!

ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2023ರ ಕರ್ನಾಟಕ ಪರೀಕ್ಷಾ ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

Belagavi Assembly Session government Passes Karnataka Examination Bill san
Author
First Published Dec 13, 2023, 8:17 PM IST

ಬೆಳಗಾವಿ (ಡಿ.13): ಕೆಪಿಎಸ್‌ಸಿ ಸೇರಿದಂತೆ ಸಾರ್ವಜನಿಕ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ. ಇನ್ನು ಮುಂದೆ ಇಂಥ ಅಪರಾಧಗಳಲ್ಲಿ ಭಾಗಿಯಾದವರಿಗೆ ಬೇಲ್‌ ಸಿಗೋದಿಲ್ಲ. ಈ ಕುರಿತಾದ 2023ರ ಕರ್ನಾಟಕ ಪರೀಕ್ಷಾ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ.  ಸಾರ್ವಜನಿಕ ಪರಿಕ್ಷೆ ನೇಮಕಾತಿ ವಿಧೇಯಕದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ವಿವರಣೆ ನೀಡಿದರು. ಕಳೆದ ಕೆಲವು ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ಬ್ಲೂಟೂತ್ ಸೇರಿ ಹಲವು ಸಾಧನಗಳ ಮೂಲಕ ಅಕ್ರಮ ನಡೆಸಲಾಗಿತ್ತು. ಪರೀಕ್ಷಾ ಅಕ್ರಮಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಮಾಡಲಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾನೂನನ್ನು ತರುತ್ತಿದೆ. ಪರೀಕ್ಷಾ ಅಕ್ರಮಗಳಲ್ಲಿ ಸಿಕ್ಕಿಕೊಂಡರೆ ಇನ್ನು ಮುಂದೆ ಬೇಲ್‌ ಸಿಗೋದಿಲ್ಲ ಎಂದು ತಿಳಿಸಿದರು.

ಕರ್ನಾಟಕದ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆಯು ಮಿತಿ ಮೀರುತ್ತಿದೆ. ಇದು ರಾಜ್ಯದ ಯುವ ಜನತೆಯ ಪ್ರಗತಿಗೆ ಅವಕಾಶ ಕುಂಠಿತಗೊಳಿಸುತ್ತಿದೆ.  ಈ ಅಕ್ರಮ ಜಾಲವು ನ್ಯಾಯ ಸಮ್ಮತ ರೀತಿಯಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ವಿಫಲಗೊಳಿಸಲು ಹೊಸ ಹೊಸ ಭ್ರಷ್ಟ ಮತ್ತು ಅನುಚಿತ ವಿಧಾನ ಬಳಸುವ ಮೂಲಕ ಕಠಿಣ ಪರಿಶ್ರಮಿಗಳಿಗೆ ಅವಕಾಶ ಇಲ್ಲವಾಗಿಸುತ್ತಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಜನಸಾಮಾನ್ಯರಲ್ಲಿ ನಂಬಿಕೆ ದ್ರೋಹಕ್ಕೆ ಕಾರಣವಾಗುವುದಲ್ಲದೇ ರಾಜ್ಯವು ಗಣನೀಯ ಆಡಳಿತಾತ್ಮಕ ವೆಚ್ಚ ಅನುಭವಿಸಬೇಕಿದೆ. ಉದ್ದೇಶಿತ ಕಾನೂನಿನ ಅಡಿ ಅಪರಾಧದಲ್ಲಿ ಭಾಗಿಯಾದವರಿಗೆ ಹತ್ತು ವರ್ಷ ಜೈಲು ಮತ್ತು ಹತ್ತು ಕೋಟಿ ರೂಪಾಯಿವರೆಗೆ ದಂಡ, ಸ್ವತ್ತುಗಳ ಜಪ್ತಿ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂಥ ಕಠಿಣ ಉಪಬಂಧಗಳನ್ನು ಇರಿಸಲಾಗಿದೆ. ಅಂಥ ಅಪರಾಧಗಳ ವಿಚಾರಣೆಗಾಗಿ ನ್ಯಾಯಾಲಯಗಳನ್ನು ಗೊತ್ತುಪಡಿಸುವುದಕ್ಕಾಗಿ ಕಾನೂನಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪರೀಕ್ಷಾ ಅಕ್ರಮಕ್ಕೆ 10 ಕೋಟಿ ದಂಡ, 12 ವರ್ಷ ಜೈಲು, ಮಸೂದೆ ಮಂಡನೆ!

ಈ ಅಪರಾಧಗಳ ತನಿಖೆಗಳನ್ನು ಕನಿಷ್ಠ ಡಿವೈಎಸ್ ಪಿ ಮಟ್ಟದ ಅಧಿಕಾರಿಗಳಿಂದ ಮಾಡಿಸಬೇಕು. ಐದು - ಹತ್ತು ವರ್ಷ ಶಿಕ್ಷೆ, ಹದಿನೈದು ಲಕ್ಷ‌ ದಿಂದ ಹತ್ತು ಕೋಟಿವರೆಗೆ ದಂಡ ಕಟ್ಟುವ ಅವಕಾಶ ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಪದೇಪದೇ ಪರೀಕ್ಷಾ ಅಕ್ರಮ ಮಾಡುತ್ತಿದ್ದರೆ ಅಂಥವರ ಆಸ್ತಿ ವಶ ಮಾಡಿಕೊಳ್ಳಲು ಅವಕಾಶ ಇದೆ. ಸದನದಲ್ಲಿ ವಿಧೇಯಕ ಅಂಗೀಕಾರ ಪಡೆದುಕೊಳ್ಳಲಾಗಿದೆ.

ಪರೀಕ್ಷಾ ಅಕ್ರಮ ಆರೋಪಿಗೆ ಕ್ಯಾಸಿನೋ ಗೀಳು..!

Follow Us:
Download App:
  • android
  • ios