ರುದ್ರಗೌಡ ಪಾಟೀಲ್‌ ಅಕ್ರಮಕ್ಕೆ ನೆರವು ನೀಡಿದ್ದಿರಂದ ತನ್ನ ಜೇಬು ಸೇರುತ್ತಿದ್ದ ಹಣವೆನ್ನಲ್ಲ ನೀರಿನಂತೆ ಆನ್‌ಲೈನ್‌ ಜೂಜಿಗೆ ಚೆಲ್ಲಿರೋ ಅಚ್ಚರಿ ಸಂಗತಿ ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ.

ಶೇಷಮೂರ್ತಿ ಅವಧಾನಿ

ಕಲಬುರಗಿ(ನ.23): ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ಗೆ ಸಾಥ್‌ ಕೊಡೋದು, ಅದರಿಂದ ಜೇಬು ಸೇರಿದ್ದ ಹಣವನ್ನೆಲ್ಲ ಆನ್‌ಲೈನ್‌ ಜೂಜಿಗೆ ಹಾಕಿ ಮಜಾ ಮಾಡೋದು, ಇದು ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್‌ ರುದ್ರಗೌಡ ಪಾಟೀಲನ ಹವ್ಯಾಸ. ಈತ ತನ್ನ ಬಂಧನಕ್ಕೂ ಮುನ್ನ ನಾಲ್ಕು ದಿನದಲ್ಲೇ 30 ಲಕ್ಷ ಹಣ ಆನ್‌ಲೈನ್‌ ಪಾವತಿಸಿ ಕ್ಯಾಸಿನೋ ಆಟವಾಡಿದ್ದನಂತೆ!

ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಆರ್‌ಡಿಪಿ ಅಕ್ರಮಗಳಿಗೆ ಸಾಥ್‌ ನೀಡಿದ್ದಾನೆಂಬ ಆರೋಪದ ಮೇಲೆ ಬಂಧಿತನಾಗಿರುವ ಜೇವರ್ಗಿ ತಾಲೂಕಿನ ನೆಲೋಗಿ ಮೂಲದ , ಅಥಣಿ ಜಲಸಂಪನ್ಮೂಲ ಇಲಾಖೆ ಸಹಾಯಕ ಇಂಜಿನಿಯರ್‌ ರುದ್ರಗೌಡ ಪಾಟೀಲ್‌ ಕಥೆ.

ಸಿಐಡಿ ಮುಂದೆ ಸ್ಫೋಟಕ ಮಾಹಿತಿ ಬಾಯಿಬಿಟ್ಟ ಆರ್‌.ಡಿ. ಪಾಟೀಲ್‌ ಬಲಗೈ ಬಂಟರು..!

ಈತ ಅಕ್ರಮಕ್ಕೆ ನೆರವು ನೀಡಿದ್ದಿರಂದ ತನ್ನ ಜೇಬು ಸೇರುತ್ತಿದ್ದ ಹಣವೆನ್ನಲ್ಲ ನೀರಿನಂತೆ ಆನ್‌ಲೈನ್‌ ಜೂಜಿಗೆ ಚೆಲ್ಲಿರೋ ಅಚ್ಚರಿ ಸಂಗತಿ ಸಿಐಡಿ ವಿಚಾರಣೆಯಲ್ಲಿ ಬಯಲಾಗಿದೆ. ಆರ್‌ಡಿ ಪಾಟೀಲನ ಬಲಗೈ ಬಂಟರಲ್ಲಿ ಪ್ರಮುಖನಾಗಿದ್ದ ರುದ್ರಗೌಡ ನೆಲೋಗಿ ಮೂಲದವನು. ಕಲಬುರಗಿಯಂದ ಆರ್‌ಡಿಪಿ ತಪ್ಪಿಸಕೊಂಡಾಗ ಈತನೆ ಬಚ್ಚಿಟ್ಟುಕೊಳ್ಳಲು ನೆಲೋಗಿಯಲ್ಲಿ ಸಹಕರಿಸಿದ್ದನೆಂಬ ವಿಷಯ ಬಯಲಾಗಿದೆ. ಹೀಗೆ ಆರ್‌ಡಿಪಿ ನಗರದಲ್ಲಿನ ಮನೆಯೊಂದರಿಂದ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾಗ ಅದೇ ಮನೆಯಲ್ಲಿ ರುದ್ರಗೌಡನಿಗೆ ಸೇರಿರುವ ಮೊಬೈಲ್‌ ದೊರಕಿದೆ. ಈ ಮೊಬೈಲ್‌ ದತ್ತಾಂಶ ಪರಿಶೀಲಿಸಿದಾಗ ಕ್ಯಾಸಿನೋ ಜಗ್ತತ್ತಿನ ಅಚ್ಚರಿ ಬಯಲಾಗಿವೆ. ಆರೋಪಿಗಳ ಕ್ಯಾಸಿನೋ ಹುಚ್ಚು, ಲಕ್ಷಾಂತರ ಹಣ ಕ್ಯಾಸಿನೋದಲ್ಲಿ ತೊಡಗಿಸಿರೋದು ಕಂಡು ಸಿಐಡಿ ದಂಗಾಗಿದೆ.

ಆರ್‌ಡಿಪಿಗೆ ಬೆಂಬಲವಾಗಿದ್ದ ಈ ಇಂಜಿನಿಯರ್‌ ಹತ್ತಿರ 17ಕ್ಕೂ ಹೆಚ್ಚು ಹಾಲ್‌ ಟಿಕೆಟ್‌ ಸಿಕ್ಕಿರೋ ಬೆಳವಣಿಗೆಯೇ ತನನ್ನು ಸಿಐಡಿ ವಿಚಾರಣೆವರೆಗೂ ಎಳೆದುಕೊಂಡು ಬಂದಿದೆ. ಇದೀಗ ಈತನ ಮೋಬೈಲ್‌ ದತ್ತಾಂಶ ಪರಿಶೀಲಿಸಿದಾಗ ಅನೇಕ ಅಚ್ಚರಿಗಳು ಹೊರಬಿದ್ದಿವೆ.

ಆನ್‌ಲೈನ್‌ ಹಣ ಪಾವತಿ

ಈ ಇಂಜಿನಿಯರ್‌ಗೆ ಆನ್‌ಲೈನ್‌ನಲ್ಲಿ ಹಣ ಹೂಡಿ ಆಟ ಆಡೋದಂದ್ರೆ ಪಂಚಪ್ರಾಣವಂತೆ, ಅದಕ್ಕೇ ಆನ್ ಲೈನ್ ನಲ್ಲೇ ಹಣ ಪಾವತಿಸಿ ಕ್ಯಾಸಿನೊ ಆಟವಾಡುತ್ತಿದ್ದ, ಇದಕ್ಕಾಗಿಯೇ MPC 91 ಎಂಬ ಕೋಡ್‌ ಪಡೆದುಕೊಂಡಿದ್ದ. ನಿತ್ಯವೂ ಆಟವಾಡುತ್ತಿದ್ದ ರುದ್ರಗೌಡ ಕಿಂಗ್‌ಪಿನ್ ಸಖ್ಯದಿಂದ ಬಂದ ಹಣವನ್ನೆಲ್ಲ ಆಟಕ್ಕೆ ಸುರಿದಿದ್ದ ಎನ್ನಲಾಗಿದೆ.

'ಸುಮ್ಮನೆ ಬೊಗಳಬೇಡ್ರೋ, ದಾಖಲೆ ಇಟ್ಟು ಸುದ್ದಿ ಮಾಡ್ರೋ..' ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್‌ಡಿ ಪಾಟೀಲ!

ಎಇ ರುದ್ರಗೌಡ ಪಾಟೀಲ್‌ ಆನ್‌ಲೈನ್ ಜೂಜಾಟಕ್ಕೆಂದೇ ಮೂರು ಮೊಬೈಲ್ ನಂಬರ್ ಇಟ್ಟುಕೊಂಡಿರೋದೂ ತನಿಖೆಯಲ್ಲಿ ಬಯಲಾಗಿದೆ. ಬಂಧನಕ್ಕೂ ಮುನ್ನ ನಾಲ್ಕೇ ದಿನದಲ್ಲಿ 30 ಲಕ್ಷಕ್ಕೂ ಅಧಿಕ ಹಣ ಎಇ ರುದ್ರಗೌಡ ಆನ್‌ಲೈನ್‌ ಜೂಜಿನಲ್ಲಿ ಹೂಡಿಕೆ ಮಾಡಿದ್ದನೆಂದು ಸಿಐಡಿ ಲೆಕ್ಕ ಹಾಕಿದೆ.

ಈತ ಬ್ಯಾಂಕ್‌ನಲ್ಲಿ ಮೂರು ಅಕೌಂಟ್‌ಗಳನ್ನು ಹೊಂದಿದ್ದ, ಈ ಮೂರು ಅಕೌಂಟ್‌ಳಲ್ಲಿನ ಹಣವನ್ನ ಅಡ್ಡಾದಿಡ್ಡಿಯಾಗಿ‌ ಖರ್ಚು ಮಾಡುತ್ತಿದ್ದ, ಆರ್‌ಡಿಪಿ ಪರಾರಿಯಾಗೋ ದಿನ ಅಪಾರ್ಟ್ಮೆಂಟ್‌ನಲ್ಲಿ‌ ಸಿಕ್ಕ ಮೊಬೈಲ್‌ನಲ್ಲಿ ದಾಖಲಾಗಿದ್ದ ಈ ಅಚ್ಚರಿಯ ಸಂಗತಿಗಳು ತನಿಖೆಯಲ್ಲಿ ಬಯಲಾಗಿವೆ. ಸಿಐಡಿ ನಗರದಲ್ಲಿ ವಿಚಾರಣೆ ಚುರುಕುಗೊಳಿಸಿದೆ, ಬೆಗದಷ್ಟೂ ಇಂತಹ ಹಲವು ಅಚ್ಚರಿಗಳು ಹೊರಬೀಳುತ್ತಿದ್ದು ಕೆಇಎ ಹಗರಣದ ಆಳ- ವ್ಯಾಪ್ತಿಯನ್ನೆಲ್ಲ ಸಿಐಡಿ ಜಾಲಾಡುತ್ತಿದೆ.