ಪರೀಕ್ಷಾ ಅಕ್ರಮಕ್ಕೆ 10 ಕೋಟಿ ದಂಡ, 12 ವರ್ಷ ಜೈಲು, ಮಸೂದೆ ಮಂಡನೆ!
ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದವರ ಆಸ್ತಿ ಜಪ್ತಿ, ಗರಿಷ್ಠ 10 ಕೋಟಿ ರು. ವರೆಗೆ ದಂಡ ಮತ್ತು 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದಂತಹ ಕಠಿಣ ನಿಯಮಗಳನ್ನು ಒಳಗೊಂಡ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ -2023ಅನ್ನು ಬುಧವಾರ ಸದನದಲ್ಲಿ ಮಂಡಿಸಲಾಯಿತು.
ವಿಧಾನಸಭೆ (ಡಿ.7) : ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿದವರ ಆಸ್ತಿ ಜಪ್ತಿ, ಗರಿಷ್ಠ 10 ಕೋಟಿ ರು. ವರೆಗೆ ದಂಡ ಮತ್ತು 12 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದಂತಹ ಕಠಿಣ ನಿಯಮಗಳನ್ನು ಒಳಗೊಂಡ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ -2023ಅನ್ನು ಬುಧವಾರ ಸದನದಲ್ಲಿ ಮಂಡಿಸಲಾಯಿತು.
ಮುಖ್ಯಮಂತ್ರಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧೇಯಕ ಮಂಡಿಸಿದರು.
ಬಿಜೆಪಿಯಿಂದ ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ: ಸಚಿವ ಪ್ರಿಯಾಂಕ್ ಖರ್ಗೆ
ಪಿಎಸ್‌ಐ ನೇಮಕಾತಿ, ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿ ಸೇರಿದಂತೆ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಬ್ಲೂಟೂತ್ ಬಳಕೆ, ಒಎಂಆರ್ ತಿದ್ದುಪಡಿ ಮೂಲಕ ಪರೀಕ್ಷಾ ಅಕ್ರಮ ನಡೆಸುವುದು, ನೇಮಕಾತಿಗೆ ಲಂಚ ನೀಟಿ ಭ್ರಷ್ಟಾಚಾರ ನಡೆಸುತ್ತಿರುವುದು ಹೊರಬಂದ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿ ಇಂತಹದ್ದೊಂದು ಕಠಿಣ ನಿಯಮಗಳನ್ನು ಒಳಗೊಂಡ ವಿಧೇಯಕವನ್ನು ಮಂಡಿಸಿದೆ.
ವಿಧೇಯಕದಲ್ಲಿ ಪ್ರಮುಖವಾಗಿ ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಲ್ಲಿ ಯಾವುದೇ ಅಭ್ಯರ್ಥಿಯು ಪರೀಕ್ಷಾ ಅಕ್ರಮದಲ್ಲಿ ತೊಡಗಿದರೆ ಅವರಿಗೆ 5ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರು. ದಂಡ ವಿಧಿಸುವ, ದಂಡ ಪಾವತಿಸದ ವರಿಗೆ ಇನ್ನೂ 15 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಬಹುದು. ಅದೇ ರೀತಿ ಪರೀಕ್ಷಾ ಕಾರ್ಯ ಹೊಂದಿರುವ ಅಥವಾ ಹೊಂದಿರದ ಯಾವುದೇ ವ್ಯಕ್ತಿಯು ಪರೀಕ್ಷಾ ಅಕ್ರಮ, ಒಳಸಂಚಿನಲ್ಲಿ ತೊಡಗಿದರೆ ಅವರಿಗೆ ಕನಿಷ್ಠ 8 ವರ್ಷಗಳಿಂದ 12 ವರ್ಷಗಳ ವರೆಗೆ ಜೈಲು ಶಿಕ್ಷೆ, 15 ಲಕ್ಷ ರು.ಗೆ ಕಡಿಮೆ ಇಲ್ಲದಂತೆ ಗರಿಷ್ಠ 2 ಕೋಟಿ ರು. ವರೆಗೆ ದಂಡ ವಿಧಿಸಬಹುದು. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಅವರಿಗೆ ಇನ್ನೂ ಎರಡು ವರ್ಷ ಹೆಚ್ಚುವರಿ ಕಾರಾಗೃಹವಾಸಕ್ಕೆ ಗುರಿಪಸುವಂತಹ ಕಠಿಣ ನಿಯಮಗಳು ಇವೆ.
ತೆಲಂಗಾಣದಲ್ಲಿ ನಮ್ಮ ಗ್ಯಾರಂಟಿ ಫಲ ನೀಡಿದೆ: ಸಚಿವ ಪ್ರಿಯಾಂಕ್ ಖರ್ಗೆ
ಅಷ್ಟೇ ಅಲ್ಲ, ಅಪರಾಧ ಸಾಬೀತಾದ ಅಭ್ಯರ್ಥಿಯನ್ನು ಶಾಶ್ವತವಾಗಿ ಅಥವಾ ನಿರ್ದಿಷ್ಟ ಅವಧಿಯವರೆಗೆ ತಾನು ನಡೆಸುವ ಯಾವುದೇ ಪರೀಕ್ಷೆ ತೆಗೆದುಕೊಳ್ಳದಂತೆ ಸರ್ಕಾರದ ಪರೀಕ್ಷಾ ಪ್ರಾಧಿಕಾರವು ಅನರ್ಹಗೊಳಿಸಲು ಕೂಡ ಅವಕಾಶ ನೀಡಲಾಗಿದೆ. ಪರೀಕ್ಷಾ ಅಕ್ರಮದಿಂದ ಆರೋಪಿಯು ಯಾವುದೇ ಚರ, ಸ್ಥಿರ ಆಸ್ತಿ ಸಂಪಾದಿಸಿರುವುದು ಕಂಡುಬಂದರೆ ಅದನ್ನು ತನಿಖಾಧಿಕಾರಿ ಜಪ್ತಿ ಮಾಡಲು ಕೂಡ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.