ಮಾರುಕಟ್ಟೆಗೆ ಬೀನ್ಸ್‌, ಟೊಮೆಟೋ ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಇವೆರಡರ ದರ ಗಣನೀಯವಾಗಿ ಇಳಿಕೆಯಾಗಿದ್ದು, ಗ್ರಾಹಕರು ಖುಷಿಯಾಗಿದ್ದರೆ, ರೈತರು ಆತಂಕದಲ್ಲಿದ್ದಾರೆ.

ಬೆಂಗಳೂರು (ಡಿ.5) : ಮಾರುಕಟ್ಟೆಗೆ ಬೀನ್ಸ್‌, ಟೊಮೆಟೋ ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಇವೆರಡರ ದರ ಗಣನೀಯವಾಗಿ ಇಳಿಕೆಯಾಗಿದ್ದು, ಗ್ರಾಹಕರು ಖುಷಿಯಾಗಿದ್ದರೆ, ರೈತರು ಆತಂಕದಲ್ಲಿದ್ದಾರೆ.

ಟೊಮೆಟೋ, ಬೀನ್ಸ್‌ ಬೆಲೆ ಗ್ರಾಹಕರಿಗೆ ಕಳೆದ ವಾರಕ್ಕಿಂತ ಅಗ್ಗದ ದರದಲ್ಲಿ ಲಭ್ಯವಾಗುತ್ತಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಳೆದ ವಾರ ಕೇಜಿಗೆ .40 ಇದ್ದ ಬೀನ್ಸ್‌ ಈ ವಾರ .20 ಸಿಗುತ್ತಿದೆ. ಟೊಮೆಟೋ ಕೇಜಿ .30 ಇದ್ದುದು ಭಾನುವಾರ ಕೇಜಿಗೆ .20 ರಂತೆ ಮಾರಾಟವಾಗಿದೆ ಎಂದು ವ್ಯಾಪಾರಿ ವೇಲು ತಿಳಿಸಿದರು.

ಮಳೆ ಅವಾಂತರಕ್ಕೆ ತರಕಾರಿ ಬೆಲೆ ಏರಿಳಿತ..!

ಕಳೆದ ವರ್ಷ ಈ ವೇಳೆಗೆ ಒಂದು ಟೊಮೆಟೋ ಕ್ರೇಟ್‌ .2 ಸಾವಿರದವರೆಗೆ ಏರಿಕೆಯಾಗಿತ್ತು. ಆದರೆ, ಸದ್ಯ ಗರಿಷ್ಠವೆಂದರೆ .100 ಇದೆ. ಬೀನ್ಸ್‌ಗೂ ದಲ್ಲಾಳಿಗಳು, ವ್ಯಾಪಾರಿಗಳಿಂದ ಸಮರ್ಪಕ ಬೆಲೆ ಸಿಗುತ್ತಿಲ್ಲ. ಸಾಮಾನ್ಯವಾಗಿ ರೈತರಿಗೆ ಕೇಜಿಗೆ .35​- 40ಕ್ಕೆ ಸಿಗುತ್ತಿತ್ತು. ಆದರೆ ಈಗ .5-8 ಮಾತ್ರ ಸಿಗುತ್ತಿದೆ. ಬೆಲೆ ತೀರಾ ಇಳಿಮುಖವಾಗಿರುವ ಕಾರಣ ಬೆಂಗಳೂರು ಸುತ್ತಮುತ್ತಲ ರೈತರು ಬೆಳೆಯನ್ನು ತೆಗೆಯದೆ ಬಳ್ಳಿಯಲ್ಲೇ ಬಿಟ್ಟಿದ್ದಾಗಿ ಹೇಳುತ್ತಾರೆ.

ರೈತ ದೊಡ್ಡ ಬಳ್ಳಾಪುರದ ಚಿಕ್ಕಮದಿರೆ ರೈತ ಮಧುಸೂದನ್‌ ಈ ಬಗ್ಗೆ ಮಾತನಾಡಿ, ಒಂದು ತಿಂಗಳಿಂದ ತರಕಾರಿ ಬೆಲೆಗಳು ಕುಸಿತದಲ್ಲೇ ಇವೆ. ವೈಟ್‌ ಬೀನ್ಸ್‌, ಪೆನ್ಸಿಲ್‌ ಬೀನ್ಸ್‌ಗಳ ನಡುವೆ ಸಾಮಾನ್ಯವಾಗಿ ಐದಾರು ರು. ಅಂತರ ಇರುತ್ತಿತ್ತು. ಆದರೆ ಈಗ .2 ಮಾತ್ರ ವ್ಯತ್ಯಾಸ ಇದೆ. ಬೆಲೆ ಕಡಿಮೆ ಕಾರಣಕ್ಕೆ ಬೀನ್ಸನ್ನು ಮಾರುಕಟ್ಟೆಗೆ ತರುತ್ತಲೇ ಇಲ್ಲ. ಒಂದು ಎಕರೆ ಬೀನ್ಸನ್ನು ಕೊಯ್ಯದೆ ಹಾಗೆಯೆ ಬಿಟ್ಟಿದ್ದೇವೆ ಎಂದರು.

ಟೊಮ್ಯಾಟೊ ಬೆಲೆ ಕುಸಿತ, ಬೇಸತ್ತು ರಸ್ತೆಗೆ ಸುರಿದ ಕೋಟೆನಾಡಿನ ಅನ್ನದಾತ

ಹಿಂದೆ ಮಳೆಯಿಂದಾಗಿ ಬೆಳೆ ನಾಶವಾಗಿತ್ತು. ಕೋಲಾರ ಮಾರುಕಟ್ಟೆಗೂ ಹೆಚ್ಚಿನ ಪ್ರಮಾಣದ ಟೊಮೆಟೋ ಬರುತ್ತಿದೆ. ತುಮಕೂರಿನ ಎಪಿಎಂಸಿಯಲ್ಲಿ ಹೆಚ್ಚಾದ ಬೀನ್ಸ್‌ ಕೂಡ ಸಿಟಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಹೆಚ್ಚಿನ ತರಕಾರಿಗಳು ಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ಕುಸಿದಿದೆ. ಟೊಮೆಟೋ ಬೆಲೆ ಹೆಚ್ಚಾದರೆ ಉಳಿದ ತರಕಾರಿಗಳ ಬೆಲೆಯೂ ಹೆಚ್ಚುತ್ತಿದೆ. ಆದರೆ ಬೆಲೆ ಇಳಿಕೆಯ ಹಾದಿಯಲ್ಲೇ ಇದೆ. ಬಿಗ್‌ ಬಾಸ್ಕೆಟ್‌, ರಿಲಯನ್ಸ್‌ ಫ್ರೆಶ್‌ ಸೇರಿ ಇತರೆ ದಿನಸಿ ಮಳಿಗೆಗಳಲ್ಲೂ ಬೆಲೆ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.