ಹೆಚ್ಚಿದ ಟೊಮೆಟೋ, ಬೀಟ್‌ರೂಟ್‌ ದರ, ಇಳಿದ ಹೂಕೋಸು ಬೆಲೆ, 100ರ ಗಡಿಯಲ್ಲಿದ್ದ ಕೊತ್ತಂಬರಿ 50ಕ್ಕೆ ಇಳಿಕೆ

ಬೆಂಗಳೂರು(ಅ.12): ರಾಜ್ಯದ ಹಲವೆಡೆ ಮಳೆ ಕಾರಣಕ್ಕಾಗಿ ತರಕಾರಿ ದರ ಏರಿಳಿತದ ಹಾದಿಯಲ್ಲಿದೆ. ವಿಶೇಷವಾಗಿ ಟೊಮೆಟೋ, ಬೀಟ್‌ರೂಟ್‌ ದರ ಹೆಚ್ಚುತ್ತಿದ್ದು, ಹೂಕೋಸು, ಕೊತ್ತಂಬರಿ ಹಾಗೂ ಇತರೆ ಸೊಪ್ಪುಗಳ ಬೆಲೆ ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ಕೇಜಿಗೆ .45-47ರ ಆಸುಪಾಸಲ್ಲಿದ್ದ ಟೊಮೆಟೋ ಮಂಗಳವಾರ .52ಕ್ಕೆ ಏರಿಕೆಯಾಗಿದೆ. ಇನ್ನು, ಸಾಮಾನ್ಯವಾಗಿ .30-40ಕ್ಕೆ ಲಭ್ಯವಾಗುತ್ತಿದ್ದ ಬೀಟ್‌ರೂಟ್‌ .64 ತಲುಪಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ .40-45ರವರೆಗೆ ಬೆಲೆ ಇದ್ದರೆ, ಬಿಟ್‌ರೂಟ್‌ .60ಕ್ಕೆ ಮಾರಾಟವಾಗುತ್ತಿದೆ.

ಏಕಾಏಕಿ ಹೆಚ್ಚಳವಾಗಿದ್ದ ಕೊತ್ತಂಬರಿ, ಸಬ್ಬಕ್ಕಿ ಹಾಗೂ ಮೆಂತ್ಯ ಸೊಪ್ಪಿನ ಬೆಲೆ ಕೂಡ ಇಳಿಕೆಯಾಗಿದೆ. ಕಳೆದ ವಾರವರೆಗೆ .100 (ಕೆಜಿ) ಆಸುಪಾಸಿದ್ದ ಕೊತ್ತಂಬರಿ ಸೊಪ್ಪು ಈಗ .50 (ನಾಟಿ .80) ಇಳಿಕೆಯಾಗಿದೆ. ಕೆ.ಆರ್‌.ಮಾರುಕಟ್ಟೆಸೇರಿ ಇತರೆಡೆ ಚಿಲ್ಲರೆ ಮಾರುಟ್ಟೆಯಲ್ಲಿ ಕಂತೆಗೆ .5-10ಕ್ಕೆ ಸಿಗುತ್ತಿದೆ. ಸಬ್ಬಕ್ಕಿ ಹಾಗೂ ಮೆಂತ್ಯ ಸೊಪ್ಪು .10 ಇಳಿಕೆ ಕಂಡಿದ್ದು ಕಂತೆಗೆ .30ಕ್ಕೆ ಸಿಗುತ್ತಿದೆ. ಬೀನ್ಸ್‌ 60 ಕೇಜಿ ಇದ್ದರೆ, ಡಬಲ್‌ ಬೀನ್ಸ್‌ .125 ತಲುಪಿದೆ.
ಹಾಪ್‌ಕಾಮ್ಸ್‌ನಲ್ಲಿ ತಿಂಗಳವರೆಗೆ .100 ಇದ್ದ ಕ್ಯಾರೆಟ್‌ (ಊಟಿ) .92ಕ್ಕೆ ಇಳಿಕೆಯಾಗಿದೆ. ಆದರೆ, ಮಳೆ ಕಾರಣಕ್ಕೆ ಚಿಲ್ಲರೆ ಮಾರುಕಟ್ಟೆಯಲ್ಲಿ ಊಟಿ ಕ್ಯಾರೆಟ್‌ ದರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ. ಕೆ.ಆರ್‌.ಮಾರುಕಟ್ಟೆಯಲ್ಲಿ ಇದು ಕೇಜಿಗೆ .50 ಇದೆ. ಹಾಗಲಕಾಯಿ ಕೇಜಿಗೆ .48, ಬಿಳಿ ಬದನೆಕಾಯಿ .43, ಗುಂಡು ಬದನೆ .28 ಹಾಗೂ ಗೋರಿಕಾಯಿ ಬೆಲೆ ಇಳಿಕೆಯಾಗಿದೆ. ಜತೆಗೆ, ಹೂ ಕೋಸು, ದಪ್ಪ ಮೆಣಸಿನಕಾಯಿ ಬೆಲೆ ಕಡಿಮೆಯಾಗಿದೆ.

ಮಾರ್ಕೆಟ್‌ಗೆ ಸ್ವತಃ ತೆರಳಿ ತರಕಾರಿ ಖರೀದಿಸಿದ ಕೇಂದ್ರ ಹಣಕಾಸು ಸಚಿವೆ

ಈರುಳ್ಳಿ, ಆಲೂಗಡ್ಡೆ ಹಾನಿ

ಯಶವಂತಪುರ, ದಾಸನಪುರ ಎಪಿಎಂಸಿಗೆ ಮಳೆಯಿಂದ ಕೊಳೆತಿರುವ, ತೇವಾಂಶವಿರುವ ಈರುಳ್ಳಿ ಹೆಚ್ಚು ಆವಕ ಆಗುತ್ತಿವೆ. ಸದ್ಯ ಪೂನಾ, ಮಧ್ಯಪ್ರದೇಶದ ಈರುಳ್ಳಿ ಲಭ್ಯವಿದೆ. ಸ್ಥಳೀಯ ಈರುಳ್ಳಿಯನ್ನು ಮೂರ್ನಾಲ್ಕು ದಿನವೂ ದಾಸ್ತಾನು ಇಟ್ಟುಕೊಳ್ಳಲಾಗುತ್ತಿಲ್ಲ. ಇದರ ದಾಸ್ತಾನು ಕುಸಿದರೆ ಮಧ್ಯಂತರದಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ಎಪಿಎಂಸಿ ವ್ಯಾಪಾರಿ ಉದಯಶಂಕರ್‌ ಹೇಳಿದರು. ಆಲೂಗಡ್ಡೆ ಕೂಡ ಇದೇ ಸ್ವರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ ಎಂದು ವ್ಯಾಪಾರಿ ಎನ್‌.ಎಚ್‌.ಕುಮಾರ್‌ ತಿಳಿಸಿದರು.

ದರ (ಹಾಪ್‌ಕಾಮ್ಸ್‌)

ತರಕಾರಿ ದರ
ಬೀಟ್‌ರೂಟ್‌ .64
ಗೋರಿಕಾಯಿ .54
ಬೀನ್ಸ್‌ .60
ಕ್ಯಾರೆಟ್‌ .92
ಕ್ಯಾಪ್ಸಿಕಾಂ .66
ಈರುಳ್ಳಿ .30
ಹೂಕೋಸು .54
ಆಲೂಗಡ್ಡೆ .42
ನವಿಲುಕೋಸು .40
ಎಲೆಕೋಸು .48
ಬ್ರುಕೋಲಿ .160
ಹಣ್ಣು ಹುರುಳಿಕಾಯಿ .147
ಚಪ್ಪರದ ಅವರೇಕಾಯಿ .78
ಬೆಂಡೇಕಾಯಿ .40
ಹಸಿಮೆಣಸಿನ ಕಾಯಿ .68
ಟೊಮೆಟೋ .52
ಸಬ್ಬಕ್ಕಿ ಸೊಪ್ಪು .80
ಮೆಂತೆ ಸೊಪ್ಪು .82
ಅರಿವೆ ಸೊಪ್ಪು .50
ಕೊತ್ತಂಬರಿ ಸೊಪ್ಪು (ನಾಟಿ) .50
ಕೊತ್ತಂಬರಿ ನಾಟಿ (ಫಾರಂ) .80