Asianet Suvarna News Asianet Suvarna News

‘ಮೋದಿ ಸಂಚರಿಸಿದ ಹಾದಿ’ಗೆ ಟಾರು ಹಾಕಲು 23 ಕೋಟಿ ರು. ವ್ಯಯಿಸಿದ ಬಿಬಿಎಂಪಿ

ನರೇಂದ್ರ ಮೋದಿ ಅವರು ಸಂಚರಿಸುವ ಬೆಂಗಳೂರು ರಸ್ತೆಗಳ ಡಾಂಬರೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ 23 ಕೋಟಿ ರು.ಗಳನ್ನು ಬಿಬಿಎಂಪಿಯಿಂದ ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ  ಹೇಳಿದೆ. ಬೆಂಗಳೂರಿನಲ್ಲಿ 14 ಕಿ.ಮೀ ರಸ್ತೆ ಅಭಿವೃದ್ಧಿ .

BBMP spent  23 crore for roads ahead of PM Modi's visit Karnataka gow
Author
Bengaluru, First Published Jun 22, 2022, 5:21 AM IST

ಬೆಂಗಳೂರು (ಜೂ.22): ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಚರಿಸುವ ಬೆಂಗಳೂರು ರಸ್ತೆಗಳ ಡಾಂಬರೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ 23 ಕೋಟಿ ರು.ಗಳನ್ನು ಬಿಬಿಎಂಪಿಯಿಂದ ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕೊಮ್ಮಘಟ್ಟರಸ್ತೆ, ಬೆಂಗಳೂರು ವಿವಿ ರಸ್ತೆ ಹಾಗೂ ಮೈಸೂರು ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಒಟ್ಟು 14 ಕಿ.ಮೀ ಉದ್ದದ ರಸ್ತೆಯ ಡಾಂಬರೀಕರಣ, ಚರಂಡಿ ಸ್ವಚ್ಛಗೊಳಿಸುವುದು, ಬೀದಿ ದೀಪ ಅಳವಡಿಕೆ ಸೇರಿ ಇನ್ನಿತರ ಕೆಲವನ್ನೂ ಮಾಡಲು 23 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

NATIONAL HERALD CASE; ರಾಹುಲ್‌ ಆಯ್ತು, ನಾಳೆ ಸೋನಿಯಾಗೆ ಇ.ಡಿ ಡ್ರಿಲ್‌?

ರಸ್ತೆ ಗುಂಡಿ ಸಂಖ್ಯೆ 15 ಸಾವಿರಕ್ಕೆ ಏರಿಕೆ: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಸಂಖ್ಯೆ 15,676 ಹೆಚ್ಚಾಗಿದೆ. ಈ ಪೈಕಿ 14,263 ಗುಂಡಿ ಮುಚ್ಚಲಾಗಿದೆ. ಇನ್ನೂ 1,416 ಗುಂಡಿಗಳನ್ನು ಮುಚ್ಚುವುದು ಬಾಕಿ ಉಳಿದಿದೆ. ಮಳೆಯಿಂದ ನಗರದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಪ್ರಧಾನ ಮಂತ್ರಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಕ್ರಮಗಳ ತಯಾರಿಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವುದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಗಳು

ರಸ್ತೆ ಉದ್ದ(ಕಿ.ಮೀ) ವೆಚ್ಚ(ಕೋಟಿ ರು.)

ಬಳ್ಳಾರಿ ರಸ್ತೆ 2.4,  4.6 ಕೋಟಿ

ಮೈಸೂರು ರಸ್ತೆ 0.10,  0.35 ಕೋಟಿ

ಬೆಂಗಳೂರು ವಿವಿ ರಸ್ತೆ 3.60 , 6.5 ಕೋಟಿ

ತುಮಕೂರು ರಸ್ತೆ 0.90,  1.5 ಕೋಟಿ 

ಕೊಮ್ಮಘಟ್ಟರಸ್ತೆ 7,  11.5 ಕೋಟಿ

Assam Floods; ಆಸ್ಸಾಂನ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೇರಿಕೆ 

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಅವರು ಮಂಗಳವಾರ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಸಹಸ್ರಾರು ಯೋಗಪಟುಗಳ ನಡುವೆ ಯೋಗ ಪ್ರದರ್ಶನ ನೀಡಿದರು.

ಕೋವಿಡ್‌ ಬಳಿಕ ನಡೆಯುತ್ತಿರುವ 8ನೇ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯೋಗ ಪ್ರದರ್ಶಿಸಿ ಇತಿಹಾಸದ ಪುಟಗಳಲ್ಲಿ ಈ ಅವಿಸ್ಮರಣೀಯ ದಿನವನ್ನು ದಾಖಲಿಸಿದರು.

ಬೆಳಗ್ಗೆ 6.30ಕ್ಕೆ ಅರಮನೆ ಆವರಣ ಪ್ರವೇಶಿಸಿದ ಪ್ರಧಾನಿ ನರೇಂದ್ರಮೋದಿ 6.34ಕ್ಕೆ ವೇದಿಕೆಯನ್ನೇರಿದರು. 7 ಗಂಟೆ ಸುಮಾರಿಗೆ ಆರಂಭವಾದ ಯೋಗ ಪ್ರದರ್ಶನವು 8.15ಕ್ಕೆ ಕೊನೆಗೊಂಡಿತು. ಅಂದರೆ ಸುಮಾರು 1 ಗಂಟೆ 15 ನಿಮಿಷಗಳವರೆಗೆ ಪ್ರಧಾನಿಗಳು ಯೋಗ ಪ್ರದರ್ಶನ ನೀಡಿದರು.

ವೇದಿಕೆ ಕಾರ್ಯಕ್ರಮ ಮುಗಿಯುತ್ತಲೇ ಕೆಳಗಿಳಿದು ಬಂದ ಮೋದಿ ಅವರು ಸಾರ್ವಜನಿಕರ ನಡುವೆ ಕುಳಿತು ಯೋಗ ಪ್ರದರ್ಶಿಸಿದರು. ಪ್ರಧಾನಿ ಸಾರ್ವಜನಿಕರತ್ತ ಆಗಮಿಸುತ್ತಲೇ ಎಲ್ಲರೂ ಎದ್ದು ನಿಂತು ಮೋದಿ ‘ಮೋದಿ ಮೋದಿ...’ ಎಂದು ಕೂಗತೊಡಗಿದರು. ಎಲ್ಲರತ್ತ ಕೈಬಿಸಿ ಯೋಗ ಪ್ರದರ್ಶನಕ್ಕೆ ಅಣಿಯಾದರು.

ಮೊದಲಿಗೆ ಪ್ರಾರ್ಥನೆ, ನಂತರ ಚಲನಕ್ರಿಯೆ, ಭುಜದ ವ್ಯಾಯಾಮ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ಕಿರೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾ್ರಸನ, ಉಷ್ಟಾ್ರಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಕಪಾಲಭೂತಿ, ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನದ ಬಳಿಕ ಶಾಂತಿಮಂತ್ರ ಪಠಿಸಿ ಯೋಗ ಪ್ರದರ್ಶನಕ್ಕೆ ತೆರೆ ಎಳೆಯಲಾಯಿತು.

ಯೋಗ ಪ್ರದರ್ಶನದ ಬಳಿಕ ಸಾರ್ವಜನಿಕರಿಗೆ ಹಸ್ತಲಾಘವ ನೀಡಿದ ಪ್ರಧಾನಿಗಳು ಎಲ್ಲರತ್ತ ಕೈಬೀಸಿ, ಅರಮನೆ ಎದುರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಿದ್ದ ಯೋಗ ಕುರಿತಾದ ಡಿಜಿಟಲ್‌ ವಸ್ತುಪ್ರದರ್ಶನ ವೀಕ್ಷಿಸಿದರು.

ಬಳಿಕ ಅರಮನೆಗೆ ಹಿಂದಿರುಗಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರೊಂದಿಗೆ ಉಪಾಹಾರ ಸೇವಿಸಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಹಿಂದಿರುಗಿದರು.

ಈ ವೇಳೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್‌ ಸಚಿವ ಸಬರವಾಲ್‌ ಸೋನಾವಾಲ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಸಂಸದ ಪ್ರತಾಪ ಸಿಂಹ ಇದ್ದರು.

Follow Us:
Download App:
  • android
  • ios