Asianet Suvarna News Asianet Suvarna News

Assam Floods; ಆಸ್ಸಾಂನ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೇರಿಕೆ

  • 47 ಲಕ್ಷ ಜನರು ಬಾಧಿತ
  • ಕಳೆದ 24 ಗಂಟೆಯಲ್ಲಿ 11 ಜನರು ಬಲಿ
  • ಗೃಹ ಸಚಿವ ಅಮಿತ್‌ ಶಾ ಸಿಎಂಗೆ ಕರೆ
Assam floods destroy millions of homes gow
Author
Bengaluru, First Published Jun 22, 2022, 3:40 AM IST | Last Updated Jun 22, 2022, 3:40 AM IST

ಗುವಾಹಟಿ (ಜೂನ್ 22): ಆಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿಯು ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 11 ಮಂದಿ ಪ್ರವಾಹದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆಯು 82ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಪ್ರವಾಹದ ಸ್ಥಿತಿಗತಿ ಕುರಿತು ವಿಚಾರಿಸಿದ್ದಾರೆ.

ಕಳೆದ 1 ವಾರದಿಂದಲೂ ಆಸ್ಸಾಂನಲ್ಲಿ ಭೀಕರ ಪ್ರವಾಹದಿಂದ ತತ್ತರಿಸುತ್ತಿದ್ದು, 32 ಜಿಲ್ಲೆಗಳ ಸುಮಾರು 47 ಲಕ್ಷ ಜನರು ಪ್ರವಾಹದಿಂದಾಗಿ ಬಾಧಿತರಾಗಿದ್ದಾರೆ ಎಂದು ಆಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ನೌಗಾಂವ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಪೊಲೀಸರು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯು ವರದಿಯಾಗಿದೆ. 7ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

Chamarajnagara; ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆ್ಯಪ್

ಕೊಪಿಲಿ, ಪುಥಿಮಾರಿ, ಪಗ್ಲಾಡಿಯಾ, ಬೆಕಿ ಬರಾಕ್‌, ಕುಶಿಯಾರಾ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹರಿಯುತ್ತಿದ್ದು, ಕಾಮರೂಪ ಹಾಗೂ ಕರೀಂಗಂಜ್‌ನಲ್ಲಿ ಭೂಕುಸಿತ ಸಂಭವಿಸಿದೆ. 1.13 ಲಕ್ಷ ಹೆಕ್ಟೇರ್‌ ಕೃಷಿಭೂಮಿ ಮುಳುಗಡೆಯಾಗಿದ್ದು, 5,232 ಪ್ರಾಣಿಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿವೆ.

ಅಮಿತ್‌ ಶಾ ಕರೆ: ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಖ್ಯಮಂತ್ರಿ ಶರ್ಮಾ ಅವರಿಗೆ ಮುಂಜಾನೆಯಿಂದ 2 ಬಾರಿ ಕರೆಮಾಡಿ ರಾಜ್ಯದ ಪ್ರವಾಹದ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ‘ಗೃಹ ಸಚಿವಾಲಯದಿಂದ ಅಧಿಕಾರಿಗಳ ತಂಡವು ಶೀಘ್ರವೇ ರಾಜ್ಯಕ್ಕೆ ಆಗಮಿಸಿ ನೈಸರ್ಗಿಕ ವಿಕೋಪದಿಂದಾದ ಹಾನಿಯ ಮೌಲ್ಯಮಾಪನ ನಡೆಸಲಿದೆ ಎಂದು ಅಮಿತ್‌ ಶಾ ಭರವಸೆ ನೀಡಿದ್ದಾರೆ’ ಎಂದು ಶರ್ಮಾ ಟ್ವೀಟ್‌ ಮಾಡಿದ್ದಾರೆ.

ಪಾಕ್‌ ಗುಪ್ತಚರರಿಂದ ಕರ್ನಾಟಕಕ್ಕೆ ಫೋನ್‌ ಸಂಪರ್ಕ!

ಪ್ರವಾಹ ಪೀಡಿತ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಬನ್ನಿ, ನಡುಗಡ್ಡೆ ಗ್ರಾಮಸ್ಥರೊಂದಿಗೆ ಅಧಿಕಾರಿಗಳ ಸಭೆ: ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿದ್ದರಿಂದ ನಾರಾಯಣಪೂರ ಆಣಿಕಟ್ಟು ಭರ್ತಿಯಾಗಲಿದೆ, ಜುಲೈ-ಅಗಸ್ಟ್‌ ತಿಂಗಳಲ್ಲಿ ಪ್ರವಾಹ ಬರುವ ಸಾಧ್ಯತೆ ಇದ್ದು, ನಡುಗಡ್ಡೆ ಪ್ರದೇಶದ ಜನರು ತೊಂದರೆ ಅನುಭವಿಸುತ್ತಿದ್ದು ಓಂಕಾರಮ್ಮನಗಡ್ಡಿ, ಮಾದರಗಡ್ಡಿ, ಕರಕಲಗಡ್ಡಿ ನಿವಾಸಿಗಳು ಕೂಡಲೇ ಸುರಕ್ಷಿತ ಸ್ಥಳಕ್ಕೆ ಬರಬೇಕು ಎಂದು ಎಸಿ ರಾಹುಲ್‌ ಸಂಕನೂರು ಮನವಿ ಮಾಡಿದರು.

ಕೃಷ್ಣಾ ನದಿ ತೀರದ ಗ್ರಾಮಗಳಾದ ಯಳಗುಂದಿ, ಯರಗೋಡಿ, ಕಡದರಗಡ್ಡಿ, ಮಾದರಗಡ್ಡಿ ಗ್ರಾಮಸ್ಥರೊಂದಿಗೆ ಮುಂಜಾಗೃತ ಕ್ರಮಗಳ ಕುರಿತ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಭಾಗವಹಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

Yoga Hall in chickpet ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ

ಶಾಶ್ವತ ಪರಿಹಾರ ಸಿಕ್ಕರೆ ಸ್ಥಳಾಂತರ: ಮೂರು ನಡುಗಡ್ಡೆಗಳಲ್ಲಿ ಒಟ್ಟು 60 ಎಕರೆ ಭೂಮಿ ಇದೆ. ಸರ್ಕಾರದಿಂದ ಭೂಮಿ ನೀಡಿದರೆ ನಾವು ನಡುಗಡ್ಡೆ ಬಿಟ್ಟು ನೀವು ಸೂಚಿಸಿದ ಕಡೆಗಳಲ್ಲಿ ಬಂದು ವಾಸ ಮಾಡುತ್ತೇವೆ. ಪ್ರತಿ ವರ್ಷ ಪ್ರವಾಹ ಬಂದಾಗ ಮಾತ್ರ ನೀವು ಇಲ್ಲಿಗೆ ಬರುತ್ತೀರಿ, ಆದರೆ ಪ್ರವಾಹ ಇಳಿದ ಮೇಲೆ ನಮ್ಮ ಕಡೆ ತಲೆ ಹಾಕಿ ಮಲಗೋಲ್ಲ, ನಮಗೆ ಶಾಶ್ವತ ಪರಿಹಾರ ಒದಗಿಸಿದರೆ ನಾವು ನಡುಗಡ್ಡೆ ಬಿಟ್ಟು ಬರುತ್ತೀವಿ ಎಂದು ನಡುಗಡ್ಡೆ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

ತಹಸೀಲ್ದಾರ ಬಲರಾಮ್‌ ಕಟ್ಟಿಮನಿ, ತಾಲೂಕು ಪಂಚಾಯಿತಿ ಇಓ ಅಮರೇಶ ಯಾದವ್‌, ಸಮಾಜ ಕಲ್ಯಾಣಾಧಿಕಾರಿ ರಾಜೇಂದ್ರ ದೇವದುರ್ಗ, ಸಿಪಿಐ ಮಹಾಂತೇಶ ಸಜ್ಜನ್‌, ಎನ್‌ಡಿಆರ್‌ಎಫ್‌ ತಂಡದವರು ಇದ್ದರು.

Latest Videos
Follow Us:
Download App:
  • android
  • ios