Asianet Suvarna News Asianet Suvarna News

National Herald Case; ರಾಹುಲ್‌ ಆಯ್ತು, ನಾಳೆ ಸೋನಿಯಾಗೆ ಇ.ಡಿ ಡ್ರಿಲ್‌?

  •  ವಿಚಾರಣೆಗೆ ಹೋಗ್ತಾರಾ ಕಾಂಗ್ರೆಸ್‌ ಅಧ್ಯಕ್ಷೆ 
  •  ನಿನ್ನೆ ತಡರಾತ್ರಿವರೆಗೂ ರಾಹುಲ್‌ ವಿಚಾರಣೆ
  • ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವ ಅನಿವಾರ್ಯತೆ
national herald case ED likely to inquire Sonia gandhi gow
Author
Bengaluru, First Published Jun 22, 2022, 4:15 AM IST

ನವದೆಹಲಿ (ಜೂನ್ 22): ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನ್ಯಾಷನಲ್‌ ಹೆರಾಲ್ಡ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಹಾಜರಾಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಆದರೆ ಕೋವಿಡೋತ್ತರ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಗುರುವಾರದ ವಿಚಾರಣೆಗೆ ಹಾಜರಾಗುವ ಬಗ್ಗೆ ಅನುಮಾನಗಳಿವೆ. ವಿಶ್ರಾಂತಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸೋನಿಯಾ ಇನ್ನಷ್ಟುಸಮಯ ಕೋರಬಹುದು ಎನ್ನಲಾಗಿದೆ. ಈ ಮೊದಲು ಜೂ.2ರಂದು ಹಾಜರಾಗಲು ಸೋನಿಯಾಗೆ ಸೂಚಿಸಲಾಗಿತ್ತು. ಅದರೆ ಕೋವಿಡ್‌ ಹಿನ್ನೆಲೆಯಲ್ಲಿ ಅವರು ಹೊಸ ದಿನಾಂಕ ಕೋರಿದ್ದರು. ಹೀಗಾಗಿ ಜೂ.23ರ ದಿನಾಂಕ ನೀಡಲಾಗಿತ್ತು.

ರಾಹುಲ್‌ ವಿಚಾರಣೆ: ಈ ನಡುವೆ ಇದೇ ಪ್ರಕರಣ ಸಂಬಂಧ ರಾಹುಲ್‌ ಗಾಂಧಿ ಮಂಗಳವಾರ ಇ.ಡಿ. ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ಆಗಮಿಸಿದ ರಾಹುಲ್‌ ರಾತ್ರಿ 8 ಗಂಟೆಯವರೆಗೆ ಅಂದರೆ ಸತತ 9 ತಾಸುಗಳ ಕಾಲ ವಿಚಾರಣೆಗೆ ಒಳಪಟ್ಟರು. ಬಳಿಕ 9 ಗಂಟೆ ವೇಳೆಗೆ ಮತ್ತೆ ಇ.ಡಿ. ಕಚೇರಿಗೆ ಆಗಮಿಸಿದ ರಾಹುಲ್‌ ಅವರನ್ನು ಅಧಿಕಾರಿಗಳು ತಡರಾತ್ರಿಯವರೆಗೂ ವಿಚಾರಣೆಗೆ ಒಳಪಡಿಸಿದರು. ಇದರೊಂದಿಗೆ 5 ದಿನಗಳಲ್ಲಿ 50 ಗಂಟೆಗೂ ಹೆಚ್ಚು ಸಮಯ ರಾಹುಲ್‌ ಅವರನ್ನು ಪ್ರಶ್ನೋತ್ತರಕ್ಕೆ ಒಳಪಡಿಸಿದಂತಾಗಿದೆ.

VIJAYANAGARA; ಕೆಲಸಕ್ಕೂ ಮುನ್ನ ಯೋಗ ಮಾಡಿದ ನರೇಗಾ ಕಾರ್ಮಿಕರು

ನ್ಯಾಷನಲ್ ಹೆರಾಲ್ಡ್ ಪ್ರಕರಣ ಎಂದಾಗ (National Herald Case) ಕಾಂಗ್ರೆಸ್ ಪಕ್ಷದ (Congress) ಹೆಸರೂ ಅದರೊಂದಿಗೆ ಸೇರಿಕೊಂಡು ಬಿಡುತ್ತದೆ. 2012ರಲ್ಲಿ ಮೊದಲ ಬಾರಿಗೆ ಮುನ್ನೆಲೆಗೆ ಬಂದಿದ್ದ ಈ ಪ್ರಕರಣದ ಇತಿಹಾಸವೇನು? ಅಷ್ಟಕ್ಕೂ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಅವರ ಪಾತ್ರವೇನು. ಎನ್ನುವುದರ ವಿವರ ಇಲ್ಲಿದೆ. 

ಮಾಜಿ ಪ್ರಧಾನಿ ಜವಹರಲಾಲ್ ನೆಹರು (jawaharlal nehru) ಸ್ಥಾಪನೆ ಮಾಡಿದ್ದ ಪತ್ರಿಕೆ: ಜವಾಹರಲಾಲ್ ನೆಹರು ಮತ್ತು ಇತರೆ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ (National Herald) ಪತ್ರಿಕೆಯನ್ನು ಹುಟ್ಟುಹಾಕಿದ್ದರು. ದೇಶದ ಸ್ವಾತಂತ್ರ್ಯ ಚಳುವಳಿಗೆ ಬೆನ್ನೆಲುಬಾಗಿ ನಿಲ್ಲುವುದು ಈ ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (Associated Journals Limited) (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಲುವು, ಅಭಿಪ್ರಾಯಗಳನ್ನು ಇದರಲ್ಲಿ ಪ್ರಕಟ ಮಾಡಲಾಗುತ್ತಿತ್ತು. 1938ರ ಸೆಪ್ಟೆಂಬರ್ 9 ರಂದು ಲಖನೌದಲ್ಲಿ ಇಂಗ್ಲೀಷ್ ಭಾಷೆಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣೆ ಆರಂಭವಾಗಿತ್ತು. ಬಳಿಕ ಹಿಂದಿ ಭಾಷೆಯ ನವಜೀವನ್ ಮತ್ತು ಉರ್ದು ಭಾಷೆಯ ಕ್ವಾಮಿ ಆವಾಜ್ ಪತ್ರಿಕೆಯನ್ನೂ ಆರಂಭ ಮಾಡಿತ್ತು. ಈ ಮೂರೂ ಪತ್ರಿಕೆಗಳ ಒಡೆತನ ಎಜಿಎಲ್ ಹೆಸರಲ್ಲಿತ್ತು.

ನೆಹರು ಅವರು ಕಟ್ಟಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL), 1937ರಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿ ನಿರ್ಮಾಣ ಮಾಡಿದ್ದ ಕಂಪನಿ. ಈ ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರುವುದಿಲ್ಲ. 2010ರ ವೇಳೆಗ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು.

ನೆಹರು ಅವರು ಪ್ರಧಾನಿಯಾಗಿದ್ದಾಗ ಎಜಿಎಲ್ ಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿತ್ತು. ಪ್ರಧಾನಿಯ ಅಧಿಕಾರ ಬಳಸಿಕೊಂಡು ದೇಶದ ವಿವಿದೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು.  ಎಜಿಎಲ್ ಆರ್ಥಿಕ ಸಂಕಷ್ಟದಲ್ಲಿದ್ದರೂ, ಈ ಕಂಪನಿ ಹೊಂದಿದ್ದ ಆಸ್ತಿಯ ಮೌಲ್ಯ  ಅಂದಾಜು 2 ರಿಂದ 5 ಸಾವಿರ ಕೋಟಿ ಎಂದು ಹೇಳಲಾಗಿದೆ.

2008ರ ವರೆಗೂ ಎಜಿಎಲ್ ಈ ಮೂರೂ ಪತ್ರಿಕೆಗಳನ್ನು ಪ್ರಕಟ ಮಾಡುತ್ತಿತ್ತು. ಅದಕ್ಕೂ ಮುನ್ನ 2007ರ ಏಪ್ರಿಲ್ 1 ರಂದು ತಾತ್ಕಾಲಿಕವಾಗಿ ಪ್ರಕಟಣೆಯನ್ನೂ ಸ್ಥಗಿತ ಮಾಡಿತ್ತು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿಫಲ, ಜಾಹೀರಾತು ಆದಾಯದ ಕೊರತೆಯಿಂದಾಗಿ 2008ರಲ್ಲಿ ಎಜಿಎಲ್ ಅನ್ನು ಮುಚ್ಚಲಾಗಿತ್ತು. ಬಳಿಕ 2016ರ ಜನವರಿ 21 ರಿಂದ ಮತ್ತೊಮ್ಮೆ ಮುದ್ರಣ ಆರಂಭವಾಗಿದೆ.

Uttara Kannadaದಲ್ಲಿ ನಿಲ್ಲದ ಮಳೆಯ ಅಬ್ಬರ

ಯಾವುದಿದು ಯಂಗ್ ಇಂಡಿಯಾ ಲಿಮಿಟೆಡ್‌: ಯಂಗ್ ಇಂಡಿಯಾ ಲಿಮಿಟೆಡ್ ( young india ltd) ಅಥವಾ ವೈಐಎಲ್ (YIL) ಎಂದು ಕರೆಯಲ್ಪಡುವ ಈ ಕಂಪನಿಯನ್ನು 2010ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಸ್ಥಾಪನೆ ಮಾಡಿದ್ದಲ್ಲದೆ, ಅದರ ನಿರ್ದೇಶಕರೂ ಆಗಿದ್ದರು.  ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಕಂಪೆನಿಯ ತಲಾ ಶೇ. 38ರಷ್ಟು ಷೇರುಗಳನ್ನು ಹೊಂದಿದ್ದಾರೆ. ಉಳಿದ ಶೇ 24ರಷ್ಟು ಷೇರುಗಳು ಕಾಂಗ್ರೆಸ್ ನಾಯಕರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಹೆಸರಲ್ಲಿದೆ. ಯಾವುದೇ ವಾಣಿಜ್ಯಾತ್ಮಕ ವ್ಯವಹಾರದಲ್ಲಿ ತಾನು ಭಾಗಿಯಾಗಿಲ್ಲ ಎಂದು ಕಂಪನಿ ಹೇಳುತ್ತದೆ.

ನಷ್ಟದಲ್ಲಿದ್ದ ಎಜಿಎಲ್ ಅನ್ನು90.21 ಕೋಟಿ ರೂಪಾಯಿಗೆ ಯಂಗ್ ಇಂಡಿಯಾ ಲಿಮಿಟೆಡ್ ಖರೀದಿ ಮಾಡಿತ್ತು. ಇದರಲ್ಲಿ 50 ಲಕ್ಷ ಮೊತ್ತವನ್ನು ಕಾಂಗ್ರೆಸ್ ಪಕ್ಷವು ತನ್ನ ಖಜಾನೆಯಿಂದಲೇ ನೀಡಿದ್ದರೆ, ಎಜಿಎಲ್ ಒಡೆತನದಲ್ಲಿದ್ದ ದೆಹಲಿಯ 5ಎ ಬಹುದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್ ನವೀಕರಣಕ್ಕೆ ಒಂದು ಕೋಟಿ ರೂ. ಸಾಲವನ್ನು ವೈಐಎಲ್ ನೀಡುತ್ತದೆ.

Follow Us:
Download App:
  • android
  • ios