ರಸ್ತೆ ಬದಿ, ಖಾಲಿ ಜಾಗ ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಬಿಬಿಎಂಪಿ ಸಿಬ್ಬಂದಿ ಏನೆಲ್ಲ ಹರಸಾಹಸ ಮಾಡಿದರೂ ಹೆಚ್ಚು ಪ್ರಯೋಜನ ಆಗುತ್ತಿಲ್ಲ. ಹಾಗಂತ ಬಿಬಿಎಂಪಿ ಸಿಬ್ಬಂದಿ ತಮ್ಮ ಪ್ರಯತ್ನವನ್ನೇನೂ ಕೈಬಿಟ್ಟಿಲ್ಲ.

ಬೆಂಗಳೂರು (ಆ.7) :  ರಸ್ತೆ ಬದಿ, ಖಾಲಿ ಜಾಗ ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಬಿಬಿಎಂಪಿ ಸಿಬ್ಬಂದಿ ಏನೆಲ್ಲ ಹರಸಾಹಸ ಮಾಡಿದರೂ ಹೆಚ್ಚು ಪ್ರಯೋಜನ ಆಗುತ್ತಿಲ್ಲ. ಹಾಗಂತ ಬಿಬಿಎಂಪಿ ಸಿಬ್ಬಂದಿ ತಮ್ಮ ಪ್ರಯತ್ನವನ್ನೇನೂ ಕೈಬಿಟ್ಟಿಲ್ಲ.

ಕಸ ಎಸೆಯುವ ಜಾಗಗಳನ್ನು ಗುರುತಿಸಿ ಅಲ್ಲಿ ದೊಡ್ಡದಾದ ಅಕ್ಷರಗಳಲ್ಲಿ ಇಲ್ಲಿ ಕಸ ಹಾಕಬಾರದು ಎಂದು ಬರೆದರೂ ಸಾರ್ವಜನಿಕರು ಕಸ ಎಸೆಯುವುದನ್ನು ನಿಲ್ಲಿಸಿಲ್ಲ. ದಂಡ ವಿಧಿಸುವ ಎಚ್ಚರಿಕೆ ನೀಡಿದರೂ ಉಪಯೋಗ ಇಲ್ಲದಂತಾಗಿದೆ. ಹೀಗಾಗಿ, ಕಸ ಹಾಕುವ ಜಾಗಗಳನ್ನು ಸ್ವಚ್ಛಗೊಳಿಸಿ ಅಲ್ಲಿ ರಂಗೋಲಿ ಹಾಕುವ ಪ್ರಯೋಗವನ್ನೂ ಬಿಬಿಎಂಪಿ ಸಿಬ್ಬಂದಿ ಮಾಡುತ್ತಿದ್ದಾರೆ.

ನಗರದ ಜ್ಞಾನಭಾರತಿ ಆವರಣಕ್ಕೆ ಸಮೀಪದಲ್ಲಿರುವ ಮರಿಯಪ್ಪನಪಾಳ್ಯಕ್ಕೆ ಹೊಂದಿಕೊಂಡಿರುವ ರಿಂಗ್‌ ರಸ್ತೆ ಬಳಿ ಬಿಬಿಎಂಪಿ ಪೌರಕಾರ್ಮಿಕರು ಸ್ವತಃ ತಾವೇ ಸಾಲು ಸಾಲಾಗಿ ಸುಂದರವಾದ ರಂಗೋಲಿ ಬಿಡಿಸುವ ಮೂಲಕ ಕಸ ಎಸೆಯುವುದನ್ನು ತಪ್ಪಿಸುವ ಪ್ರಯತ್ನ ನಡೆಸಿತ್ತಿರುವುದು ಕಂಡು ಬಂತು.

ಬಿಬಿಎಂಪಿ ವಾರ್ಡ್‌ ವಿಂಗಡಣೆ ಹಿಂದೆ ಅಡಗಿದೆ ‘9’ರ ರಹಸ್ಯ!

ಲಂಚ ಸ್ವೀಕಾರ : ಆರೋಪಿ ಸೆರೆ

ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಬಿಬಿಎಂಪಿ ಕಂದಾಯ ಕಚೇರಿಗಳಲ್ಲಿನ ಶೋಧ ಕಾರ್ಯ ನಡುವೆಯೂ ಬಿಬಿಎಂಪಿ ಅಧಿಕಾರಿಯೊಬ್ಬರು ಮತ್ತು ಮಧ್ಯವರ್ತಿಯೊಬ್ಬ ಖಾತಾ ನೀಡಲು ಐದು ಲಕ್ಷ ರು. ಲಂಚ ಸ್ವೀಕಾರ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದೇ ವೇಳೆ ಅವರ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, 900 ಗ್ರಾಂ ಚಿನ್ನ ಮತ್ತು ಏಳು ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.

ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್‌ ಮತ್ತು ಆತನ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಪವನ್‌ನನ್ನು ಬಂಧಿಸಲಾಗಿದೆ.

ನಗರದಲ್ಲಿ ಮತ್ತೆ ಫ್ಲೆಕ್ಸ್‌, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?

ಮನೆಯಲ್ಲಿಯೂ ಶೋಧ: ದೊಡ್ಡ ಮೊತ್ತದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕ ಬಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಟರಾಜ್‌ ನಿವಾಸದಲ್ಲಿಯೂ ಶೋಧ ಕಾರ್ಯ ನಡೆಸಿದರು. ಈ ವೇಳೆ 900 ಗ್ರಾಂ ಚಿನ್ನ ಮತ್ತು ಏಳು ಕೆಜಿ ಬೆಳ್ಳಿ ವಸ್ತು ಗಳು ಪತ್ತೆಯಾಗಿದೆ. ಇದಲ್ಲದೇ ಇನ್ನೋವಾ ಕ್ರಿಸ್ಟಾ, ಕಿಯಾ ಸೋನೆಟ್‌, ಹುಂಡೈ ವರುಣಾ ಮತ್ತು ಟಿ ಕ್ಯೂ ಕಾರುಗಳು ಸಿಕ್ಕಿದೆ. ಎಂಟು ಸಾವಿರ ರು. ನಗದು ಮತ್ತು ಆವಲಹಳ್ಳಿಯ ಗಿರಿನಗರದಲ್ಲಿ 30*30 ನಿವೇಶದಲ್ಲಿ ಮನೆ ನಿರ್ಮಾಣ, ಕೊಡಿಗೆಹಳ್ಳಿಯಲ್ಲಿ ಪತ್ನಿ ಹೆಸರಲ್ಲಿ 40*60 ನಿವೇಶನದ ದಾಖಲೆಗಳು ಲಭ್ಯವಾಗಿವೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.