Asianet Suvarna News Asianet Suvarna News

ಅನಂತಸ್ವಾಮಿ ಸಂಯೋಜನೆಯ ನಾಡಗೀತೆ ಅಂತಿಮಕ್ಕೆ ಮನವಿ

  •  ನಾಡಗೀತೆಯ ಧಾಟಿ ವಿಚಾರದಲ್ಲಿ ಇತ್ತೀಚೆಗೆ ಹಿರಿಯ ತಜ್ಞರ ಸಮಿತಿ ನೀಡಿರುವ ವರದಿ
  • ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯ ನಾಡಿಗೀತೆಯನ್ನು ಅಂತಿಮಗೊಳಿಸಬೇಕು ಎಂದು ‘ಸುಗಮ ಸಂಗೀತ ಕಲಾವಿದರ ಬಳಗ’ ಆಗ್ರಹ
artists Demand For anantaswamy Tune to state Anthem snr
Author
Bengaluru, First Published Oct 27, 2021, 9:43 AM IST

 ಬೆಂಗಳೂರು (ಅ.27):  ನಾಡಗೀತೆಯ (State Anthem) ಧಾಟಿ ವಿಚಾರದಲ್ಲಿ ಇತ್ತೀಚೆಗೆ ಹಿರಿಯ ತಜ್ಞರ ಸಮಿತಿ ನೀಡಿರುವ ವರದಿಯಂತೆ ಮೈಸೂರು (Mysuru Ananthaswamy) ಅನಂತಸ್ವಾಮಿ ಅವರ ಸಂಯೋಜನೆಯ ನಾಡಿಗೀತೆಯನ್ನು ಅಂತಿಮಗೊಳಿಸಬೇಕು ಎಂದು ‘ಸುಗಮ ಸಂಗೀತ ಕಲಾವಿದರ ಬಳಗ’ ಆಗ್ರಹಿಸಿತು.

ಈ ಕುರಿತು ಬಳಗದ ಎಲ್ಲ ಸದಸ್ಯರು ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ (S Rangappa) ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (kannada and Cultural Department) ನಿರ್ದೇಶಕ ಎಸ್‌.ರಂಗಪ್ಪ, ನಾಡಗೀತೆ ಅನುಷ್ಠಾನ ಕುರಿತು ಸರ್ಕಾರ ಅಂತಿಮವಾಗಿ ನಿರ್ಧರಿಸುತ್ತದೆ. ಬಳಗದ ಮನವಿಯನ್ನು ಮುಖ್ಯಮಂತ್ರಿಗಳಿಗೆ (CM) ಗಮನಕ್ಕೆ ತರುತ್ತೇವೆ. ಸದ್ಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಪ ಚುನಾವಣೆ (BY Election) ಮುಗಿದ ನಂತರ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಭರವಸೆ ನೀಡಿದರು.

ನಾಡಗೀತೆಗೆ ಸಿ.ಅಶ್ವತ್ಥ್ ಧಾಟಿ ಬಳಸಿ : ಕಿಕ್ಕೇರಿ ಆಗ್ರಹ

ಮೈಸೂರು ಅನಂತಸ್ವಾಮಿಯವರ (Mysuru ananthaswamy) ಸಂಯೋಜನೆಯ ನಾಡಗೀತೆಯನ್ನು ಅಂತಿಮಗೊಳಿಸಬೇಕು ಎಂದು ಬೆಂಗಳೂರಿನ ‘ಸುಗಮಸಂಗೀತ ಕಲಾವಿದರ ಬಳಗ’ದ ಸದಸ್ಯರು ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದರು. ಬಳಗದ ಶಂಕರ ಶಾನ್‌ಭೋಗ್‌, ಬಿ.ಕೆ.ಸುಮಿತ್ರಾ, ಟಿ.ಆರ್‌.ಲೋಕೇಶ್‌, ಟಿ.ರಾಜಾರಾಮ್‌, ಬಿ.ಎಸ್‌.ಮೀರಾ, ಗೀತಾ ಸತ್ಯಮೂರ್ತಿ, ರೋಹಿಣಿ ಮೋಹನ್‌, ನರಹರಿ ದೀಕ್ಷಿತ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇಲಾಖೆಯಡಿ ರಾಜ್ಯ ಸರ್ಕಾರ (state Govt) ನಾಡಗೀತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಿರಿಯ ಕವಿ-ಕಲಾವಿದರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿಯ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿ ಮೈಸೂರು ಅನಂತಸ್ವಾಮಿಯವರ ಸಂಯೋಜನೆಯ ನಾಡಗೀತೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆ ವರದಿಯನ್ವಯ ಶೀಘ್ರವೇ ನಾಡಗೀತೆ ಅನುಷ್ಠಾನ ಮಾಡಿ ಎಂದು ಬಳಗದ ಸದಸ್ಯರು ಒತ್ತಾಯಿಸಿದರು.

ಅವಧಿ ಕಡಿಮೆ ಚಿಂತನೆ ನಡೆದಿತ್ತು

 ಸದ್ಯ ನಾಡಗೀತೆ ಸುದೀರ್ಘವಾಗಿದ್ದು ಅದರ ಘನತೆಗೆ ಧಕ್ಕೆ ಬಾರದ ಹಾಗೆ ಹಾಡುವ ಅವಧಿ ಕಡಿತಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. 

ಮಕ್ಕಳಿಗೆ ಮಗ್ಗಿ ಕೇಳಿ, ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಸದ್ಯಕ್ಕಿರುವ ನಾಡಗೀತೆ ಅವಧಿ ಸುದೀರ್ಘವಾಗುತ್ತಿದೆ. ನಾಡಗೀತೆಗೆ ಗೌರವ ಸೂಚಕವಾಗಿ ಎಲ್ಲರೂ ಎದ್ದು ನಿಲ್ಲುವುದು ಸಹಜ. ಈ ಗೀತೆ ಸುದೀರ್ಘವಾಗಿರುವುದರಿಂದ ನಿಂತ ವ್ಯಕ್ತಿಗಳು ಕುಸಿದು ಬೀಳುವ ಸಾಧ್ಯತೆಗಳು ಹೆಚ್ಚು.

 ಆದ್ದರಿಂದ ಈ ಗೀತೆಗೆ ಧಕ್ಕೆ ಬರದಹಾಗೆ ಕಡಿಮೆ ಅವಧಿಯಲ್ಲಿ ಮುಗಿಯುವ ಹಾಗೆ ಮಾಡುವ ಚಿಂತನೆ ನಡೆದಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಷ್ಟರಲ್ಲಿ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios