Asianet Suvarna News Asianet Suvarna News

ನಾಡಗೀತೆಗೆ ಸಿ.ಅಶ್ವತ್ಥ್ ಧಾಟಿ ಬಳಸಿ : ಕಿಕ್ಕೇರಿ ಆಗ್ರಹ

  • ಕುವೆಂಪು ಅವರ ಮೊದಲ ಕವನ ಸಂಕಲನ ‘ಕೊಳಲು’ನಲ್ಲಿ ಪ್ರಕಟವಾಗಿದ್ದ ‘ಜಯ ಭಾರತ ಜನನಿಯ ತನುಜಾತೆ’ ಕವಿತೆ
  • ನಾಡಗೀತೆಯಾಗಿ ಯಾವ ಧಾಟಿಯಲ್ಲಿ ಹಾಡಬೇಕೆಂದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು 
  • ಸುಗಮ ಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯ
Kikkeri Krishnamurthy Demands For use ashwath style To State anthem snr
Author
Bengaluru, First Published Oct 19, 2021, 9:03 AM IST

ಬೆಂಗಳೂರು (ಅ.19):  ಕುವೆಂಪು (Kuvempu) ಅವರ ಮೊದಲ ಕವನ ಸಂಕಲನ ‘ಕೊಳಲು’ನಲ್ಲಿ (Kolalu) ಪ್ರಕಟವಾಗಿದ್ದ ‘ಜಯ ಭಾರತ ಜನನಿಯ ತನುಜಾತೆ’ (State anthem) ಕವಿತೆಯನ್ನು (Poem) ನಾಡಗೀತೆಯಾಗಿ ಯಾವ ಧಾಟಿಯಲ್ಲಿ ಹಾಡಬೇಕೆಂದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ಸುಗಮ ಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ (Kikkeri KrishnaMurthy) ರಾಜ್ಯ ಸರ್ಕಾರವನ್ನು (State govt) ಒತ್ತಾಯಿಸಿದ್ದಾರೆ.

ನಾಡಗೀತೆಗೆ ಮೈಸೂರು ಅನಂತಸ್ವಾಮಿ (Mysuru Ananthaswamy) ಅವರ ಸ್ವರ ಸಂಯೋಜನೆಯ ಧಾಟಿ ಅಳವಡಿಸಿಕೊಳ್ಳುವಂತೆ ಇತ್ತೀಚೆಗೆ ಸಾಹಿತಿ, ಗಾಯಕ ಮತ್ತು ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ (Karnataka Govt) ಶಿಫಾರಸು ಮಾಡಿತ್ತು. ಈ ನಿರ್ಧಾರವನ್ನು ಖಂಡಿಸಿರುವ ಕಿಕ್ಕೇರಿ ಕೃಷ್ಣಮೂರ್ತಿ, ರಾಜ್ಯ ಸರ್ಕಾರ ಒಂದು ಪಲ್ಲವಿ, ಎರಡು ಚರಣವನ್ನು ಮಾತ್ರ ನಾಡಗೀತೆಯಾಗಿ ಹಾಡುವುದಾದರೆ ಅನಂತಸ್ವಾಮಿ ಅವರ ಧಾಟಿಯನ್ನು ಬಳಸಬಹುದು. ಕುವೆಂಪು ಅವರ ಕವಿತೆಯ ಪೂರ್ಣ ಪಾಠವಾದರೆ ಸಿ.ಅಶ್ವತ್ಥ್ (C Ashwath) ಅವರ ಧಾಟಿಯಲ್ಲಿ ಹಾಡಬೇಕು ಎಂದು ಆಗ್ರಹಿಸಿದ್ದಾರೆ.

2.5 ನಿಮಿಷದಲ್ಲಿ ನಾಡಗೀತೆ ಕಡಿತಕ್ಕೆ ಕಸಾಪ ನಿರ್ಣಯ

2013ರ ಜೂನ್‌ನಲ್ಲಿ (June) ವಸಂತ ಕನಕಾಪುರ (vasanth Kanakapura) ಅವರ ಅಧ್ಯಕ್ಷತೆಯಲ್ಲಿ ನಡೆದ ನಾಡಗೀತೆಯ ನಿರ್ದಿಷ್ಟಧಾಟಿ ಕುರಿತ ಸಭೆಯಲ್ಲಿ ನಿರ್ಧರಿಸಿರುವಂತೆ ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಪಲ್ಲವಿ, ಎರಡು ಚರಣಗಳಿಗೆ ಮಾತ್ರ ಸ್ವರ ಸಂಯೋಜನೆ ಮಾಡಿದ್ದು, ಪೂರ್ಣ ಪಾಠಕ್ಕೆ ಮಾಡಿಲ್ಲ. ಅವರ ಪಾಠದಲ್ಲಿ ಭೂದೇವಿಯ ಮಕುಟದ, ಜನನಿಯ ಜೋಗುಳ, ತೈಲಪ ಹೊಯ್ಸಳ ಇವುಗಳನ್ನು ಸೇರಿಸಿಲ್ಲ. ಸ್ವರ ಸಂಯೋಜನೆ ಸುಶ್ರಾವ್ಯವಾಗಿದೆ. ಆದರೆ, ಸಿ.ಅಶ್ವತ್ಥ್ ಅವರು ಪೂರ್ಣ ಪಾಠಕ್ಕೆ ಸ್ವರ ಸಂಯೋಜನೆ ಮಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ (State Govt) ಒಂದು ಪಲ್ಲವಿ ಮತ್ತು ಎರಡು ಚರಣವನ್ನು ನಾಡಗೀತೆಯಾಗಿ ಅಂಗೀಕರಿಸಿದರೆ, ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯಲ್ಲಿ ಅಥವಾ ಪೂರ್ಣ ಪಾಠವನ್ನು ನಾಡಗೀತೆಯಾಗಿ ಮಾಡಿಕೊಂಡರೆ ಸಿ.ಅಶ್ವತ್‌ ಅವರ ಧಾಟಿಯಲ್ಲಿ ಹಾಡಬೇಕೆಂದು ಒತ್ತಾಯಿಸಿದ್ದಾರೆ.

ನಾಡಗೀತೆಗೆ ಕತ್ತರಿ ಹಾಕಬೇಕೇ ಬೇಡವೇ ಎಂಬ 12 ವರ್ಷಗಳ ಸುದೀರ್ಘ ವಾದ-ವಿವಾದಗಳ ನಂತರ ತಜ್ಞರ ವರದಿ, ಕುವೆಂಪು ಅವರ ವಾರಸುದಾರರ ಅಭಿಪ್ರಾಯ ಪಡೆದಿದ್ದ ರಾಜ್ಯ ಸರ್ಕಾರ ನಾಡಗೀತೆಯ ಯಾವುದೇ ಸಾಲಿಗೆ ಕತ್ತರಿ ಹಾಕದೆ ಪೂರ್ಣ ಪಾಠವನ್ನೇ ಹಾಡಲು 2016ರಲ್ಲಿ ಮಾನ್ಯತೆ ನೀಡಿತ್ತು. ಹಾಗಾಗಿ ಸಿ.ಅಶ್ವತ್‌್ಥ ಅವರ ಧಾಟಿಯನ್ನೇ ಬಳಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ನಾಡಗೀತೆ ಕಡಿಮೆ ಅವಧಿಯಲ್ಲಿ ಮುಗಿಸಲು ಚಿಂತನೆ : ಲಿಂಬಾವಳಿ

2014ರಲ್ಲಿ ಚೆನ್ನವೀರ ಕಣವಿ (channaveera kanavi) ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಮಿತಿಯು ನಾಡಗೀತೆಯ ಪಠ್ಯವನ್ನು ಅರ್ಥಪೂರ್ಣವಾಗಿ 21 ಸಾಲುಗಳಿಗೆ ಸೀಮಿತಗೊಳಿಸಿ, ಸಿ.ಅಶ್ವತ್ಥ್ ರಾಗ ಸಂಯೋಜಿಸಿರುವ ಧಾಟಿಯಲ್ಲಿ ಪುನರಾವರ್ತನೆ, ಆಲಾಪನೆ, ಹಿನ್ನೆಲೆ ಸಂಗೀತ ಕೈಬಿಟ್ಟು ಅಳವಡಿಸಬೇಕೆಂದು ತೀರ್ಮಾನಿಸಿ, ಸರ್ಕಾರಕ್ಕೆ(Govt) ವರದಿ ಸಲ್ಲಿಸಿತ್ತು. ಆ ನಂತರವೂ ನಾಡಗೀತೆ ಹಾಡುವ ಕಾಲಾವಧಿಯನ್ನು ನಿಗದಿಪಡಿಸುವ ಬಗ್ಗೆ ಅನೇಕ ಸಭೆಗಳು ನಡೆದಿವೆ. ಹಿರಿಯರು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗದೆ ಇದ್ದುದರಿಂದ 2018ರಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್‌ (Manu Baligar) ಅಧ್ಯಕ್ಷತೆಯಲ್ಲಿ ಸಭೆ ಸೇರಿ, 2.30 ನಿಮಿಷದಲ್ಲಿ ಹಾಡಿ ಮುಗಿಸಲು ಏಕಕಂಠದಿಂದ ಸಹಮತ ಸೂಚಿಸಲಾಗಿತ್ತು. ಅಂದಿನ ಸಭೆಯ ನಡಾವಳಿಯನ್ನು ಆಗಿನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ.

ಇತ್ತೀಚೆಗೆ ಮೈಸೂರಿನ ಸುಗಮ ಸಂಗೀತ ಹಿರಿಯ ಕಲಾವಿದೆ ಎಚ್‌.ಆರ್‌.ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತಿ, ಸಂಗೀತ ಕಲಾವಿದರ ತಜ್ಞರ ಸಮಿತಿ ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯ ಧಾಟಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Follow Us:
Download App:
  • android
  • ios