MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಡಿಕೆ ಶಿವಕುಮಾರ್ ಫೋನ್ ಕಾಲ್ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, 3 ದಿನಗಳ ಗೊಂದಲಕ್ಕೆ ತೆರೆ

ಡಿಕೆ ಶಿವಕುಮಾರ್ ಫೋನ್ ಕಾಲ್ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, 3 ದಿನಗಳ ಗೊಂದಲಕ್ಕೆ ತೆರೆ

ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಈ ಮೂಲಕ ಕಳೆದೆರಡು ದಿನದಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇದೇ ವೇಳೆ ಮತ್ತೊಂದು ಗೂಗ್ಲಿ ಹಾಕಿದ್ದಾರೆ.

1 Min read
Author : Chethan Kumar
Published : Jun 06 2026, 06:42 PM IST
Share this Photo Gallery
  • FB
  • TW
  • Linkdin
  • Whatsapp
16
ರಾಜೀನಾಮೆ ವಾಪಸ್
Image Credit : X

ರಾಜೀನಾಮೆ ವಾಪಸ್

ರಾಮಲಿಂಗಾ ರೆಡ್ಡಿ ರಾಜೀನಾಮೆ ಹೈಡ್ರಾಮ ಅಂತ್ಯಗೊಂಡಿದೆ. ಕಳೆದೆರಡು ಡಿಕೆ ಶಿವಕುಮಾರ್ ಸರ್ಕಾರಕ್ಕೆ, ಹೈಕಮಾಂಡ್‌ಗೆ ತೀವ್ರ ತಲೆನೋವಾಗಿದ್ದ ರಾಜೀನಾಮೆ ಪ್ರಹಸನ ಅಂತ್ಯಗೊಂಡಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ ಎಂದು ಕೊನೆಗೆ ಜಲಸಂಪನ್ಮೂಲ ಖಾತೆ ನೀಡಿದ ಕಾರಣಕ್ಕೆ ಗರಂ ಆಗಿದ್ದ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಇದೀಗ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ರಾಮಲಿಂಗಾ ರೆಡ್ಡಿ ಸ್ಪಷ್ಟನೆ
Image Credit : X

ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಚರ್ಚಿಸಿದ್ದೇನೆ. ಅವರು ರಾಜೀನಾಮೆ ಸ್ವೀಕರಿಸಲ್ಲ ಎಂದಿದ್ದಾರೆ. ಹೀಗಾಗಿ ಸ್ವೀಕರಿಸಿಲ್ಲ ಎಂದರೆ ವಾಪಸ್ ಎಂದರ್ಥ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Related Articles

Related image1
ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ
Related image2
ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, ಉಸ್ತುವಾರಿ ನಾಯಕ ಸುರ್ಜೆವಾಲ ಘೋಷಣೆಯಲ್ಲೇ ಗೊಂದಲ
36
ಮುಂದೆ ಅವಕಾಶ ಮಾಡಿಕೊಡುತ್ತಾರೆ
Image Credit : Asianet News

ಮುಂದೆ ಅವಕಾಶ ಮಾಡಿಕೊಡುತ್ತಾರೆ

ನಾನಾಗಿ ಯಾವ ಖಾತೆಯನ್ನು ಕೇಳಿಲ್ಲ. ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ. ನೋಡೋಣ ಯಾವ ಖಾತೆ ಕೊಡುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮುಂದೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆ ಅಥವಾ ಖಾತೆ ಬದಲಾವಣೆ ಸಾಧ್ಯತೆಯನ್ನು ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.

46
ರಾಮಲಿಂಗಾ ರೆಡ್ಡಿಗೂ ಮೊದಲು ಸುರ್ಜೆವಾಲ ಸುದ್ದಿಗೋಷ್ಠಿ
Image Credit : Asianet News

ರಾಮಲಿಂಗಾ ರೆಡ್ಡಿಗೂ ಮೊದಲು ಸುರ್ಜೆವಾಲ ಸುದ್ದಿಗೋಷ್ಠಿ

ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡುವ ಮೊದಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಸುದ್ದಿಗೋಷ್ಠಿ ಮೂಲಕ ರಾಜೀನಾಮೆ ವಾಪಸ್ ಎಂದಿದ್ದರು. ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಜೊತೆ ಮಾತನಾಡಿದ್ದೇವೆ. ಅವರು ರಾಜೀನಾಮೆ ವಾಪಸ್ ಪಡೆದು ಸಚಿವರಾಗಿ ಮುಂದುವರಿಯುತ್ತಾರೆ ಎಂದಿದ್ದರು.

56
ರಾಮಲಿಂಗಾ ರೆಡ್ಡಿ ರಾಜಿನಾಮೆ ತಿರಸ್ಕೃತ
Image Credit : Asianet News

ರಾಮಲಿಂಗಾ ರೆಡ್ಡಿ ರಾಜಿನಾಮೆ ತಿರಸ್ಕೃತ

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರವನ್ನು ತಿರಸ್ಕರಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿಕ ಕರೆ ಮಾಡಿ ಮಾತನಾಡಿದ್ದಾರೆ. ನಿಮ್ಮ ರಾಜೀನಾಮೆ ಪತ್ರವನ್ನು ತಿರಸ್ಕರಿಸಿದ್ದೇನೆ. ನಿಮ್ಮ ಸೇವೆ ಪಕ್ಷಕ್ಕೆ ಅಗತ್ಯವಿದೆ. ನೀವು ಕ್ಯಾಬಿನೆಟ್‌ನಲ್ಲಿ ಮುಂದುವರಿಯಬೇಕು ಎಂದು ದೂರಾವಣಿ ಮೂಲಕ ರಾಮಲಿಂಗಾ ರೆಡ್ಡಿಗೆ ಹೇಳಿದ್ದರು.

66
ಡಿಕೆ ಶಿವಕುಮಾರ್ ಮೊದಲ ಟಾಸ್ಕ್ ಯಶಸ್ವಿ
Image Credit : Asianet News

ಡಿಕೆ ಶಿವಕುಮಾರ್ ಮೊದಲ ಟಾಸ್ಕ್ ಯಶಸ್ವಿ

ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬೆನ್ನಲ್ಲೇ ಉದ್ಭವಗೊಂಡ ಅಸಮಾಧಾನವನ್ನು ಡಿಕೆ ಶಿವಕುಮಾರ್ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಇದರಿಂದ ಇತರ ಅಸಮಾಧಾನಿತರು ಸೈಲೆಂಟ್ ಆಗುವ ಸಾಧ್ಯತೆ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಡಿ.ಕೆ. ಶಿವಕುಮಾರ್
ರಾಮಲಿಂಗ ರೆಡ್ಡಿ
ಕಾಂಗ್ರೆಸ್
ಕರ್ನಾಟಕ ಸುದ್ದಿ
Latest Videos
Recommended Stories
Recommended image1
ಭಟ್ಕಳ: ಕಳಿನಡ ದುರಂತದಲ್ಲಿ ಸಾವು ಕಂಡ ಕುಟುಂಬದ ಸದಸ್ಯನಿಗೆ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸಿದ ಶಾಸಕ ಮಂಕಾಳ ವೈದ್ಯ
Recommended image2
ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, ಉಸ್ತುವಾರಿ ನಾಯಕ ಸುರ್ಜೆವಾಲ ಘೋಷಣೆಯಲ್ಲೇ ಗೊಂದಲ
Recommended image3
Now Playing
ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Related Stories
Recommended image1
ಖಾತೆ ಅಲ್ಲ ತೀವ್ರ ನೋವು, ಸಚಿವ ಸ್ಥಾನಕ್ಕೆ ರಾಜೀನಾಮೆ ಹಿಂದಿನ ಕಾರಣ ಬಹಿರಂಗಪಡಿಸಿದ ರಾಮಲಿಂಗಾ ರೆಡ್ಡಿ
Recommended image2
ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, ಉಸ್ತುವಾರಿ ನಾಯಕ ಸುರ್ಜೆವಾಲ ಘೋಷಣೆಯಲ್ಲೇ ಗೊಂದಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved