ಕಾಂಗ್ರೆಸ್ ಮುಖಂಡರೇ ನೆನಪಿಡಿ, ನಾಳೆ ನಿಮ್ಮ ಮನೇಲೂ ಬಲತ್ಕಾರ ನಡೆದ್ರೂ ಪಕ್ಷ ನಿಮ್ಮ ಸಹಾಯಕ್ಕೆ ಬರೋಲ್ಲ: ಆಂದೋಲಾ ಶ್ರೀ ಎಚ್ಚರಿಕೆ

ಕಲಬುರಗಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಿದ ಆಂದೋಲಾ ಸಿದ್ದಲಿಂಗ ಸ್ವಾಮೀಜಿ, ಭಾರತ ಬಾಂಗ್ಲಾ ರೀತಿ ಆದರೆ ನಿಮ್ಮ ಮನೆಗಳೂ ಸುಟ್ಟು ಹೋಗುತ್ತವೆ ಎಂದು ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ, ದಲಿತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.

Andola Siddalinga Swamiji statement against kalaburagi minor girl assault case rav

ಕಲಬುರಗಿ (ಡಿ.9): ಭಾರತವೂ ಬಾಂಗ್ಲಾ, ಪಾಕಿಸ್ತಾನ ಆಗುತ್ತಿದೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಭಾರತ ಬಾಂಗ್ಲಾ ರೀತಿ ಆದ್ರೆ ನಿಮ್ಮ ಮನೆಗಳೂ ಸುಟ್ಟು ಹೋಗ್ತವೆ. ಕಾಂಗ್ರೆಸ್ ನಾಯಕರಿಗೆ ಇದು ಗೊತ್ತಿರಲಿ ಎಂದು ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಎಚ್ಚರಿಕೆ ನೀಡಿದರು.

ಯಡ್ರಾಮಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ಕಾಂಗ್ರೆಸ್ ಮುಖಂಡರೇ ಒಂದು ನೆನಪಿರಲಿ, ನಿಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದ್ರೂ ಕಾಂಗ್ರೆಸ್ ಪಕ್ಷ ನಿಮ್ಮ ನೆರವಿಗೆ ಬರಲ್ಲ. ಹುಬ್ಬಳ್ಳಿ ನೇಹಾ ಹಿರೇಮಠ ಘಟನೆಯೇ ಇದಕ್ಕೆ ಜೀವಂತ ಸಾಕ್ಷಿ. ನೇಹಾ ಹಿರೇಮಠ ತಂದೆ ಕಾಂಗ್ರೆಸ್‌ನಲ್ಲಿದ್ದವರು ಎಂಬುದು ಗೊತ್ತೇ ಇದೆ. ನಾಳೆ ಆ ಪರಿಸ್ಥಿತಿ ನಿಮಗೂ ಬರಬಹುದು. ಕಾಂಗ್ರೆಸ್ ಮತ ಬ್ಯಾಂಕ್ ಗೆ ಆ ಸಮುದಾಯವನ್ನು ಏನು ಮಾಡಿದರೂ ಸಹಿಸಿಕೊಳ್ಳುತ್ತದೆ ಹೊರತು ನೀವು ನಂಬಿದ ಪಕ್ಷ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಕಾಂಗ್ರೆಸ್ ದಲಿತ ಪರ ಅಂತಾ ಮಾತುಮಾತಿಗೆ ಹೇಳ್ತಾರೆ. ನಿಜಕ್ಕೂ ಕಾಂಗ್ರೆಸ್ ದಲಿತ ಪರವಾಗಿ ಯಾವುದೇ ಕಾಳಜಿ ಇಲ್ಲ. ದಲಿತ-ಮುಸ್ಲಿಮ್ ಅಂತಾ ಎರಡು ಆಯ್ಕೆ ಬಂದಾಗ ಕಾಂಗ್ರೆಸ್ ವೋಟ್‌ಬ್ಯಾಂಕ್ ಗಾಗಿ ದಲಿತರನ್ನು ಕೈಬಿಡಲು ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆಯೂ ನೆನಪಿಸಿಕೊಳ್ಳಿ. ಕಾಂಗ್ರೆಸ್ ಶಾಸಕನಾಗಿದ್ದರೂ ಅಖಂಡ ಶ್ರೀನಿವಾಸ ಮನೆ ಸುಟ್ಟರೂ ಕಾಂಗ್ರೆಸ್ ತುಟಿ ಬಿಚ್ಚಲಿಲ್ಲ. ಮುಸ್ಲಿಂ ಓಲೈಕೆಯೊಂದೇ ಕಾಂಗ್ರೆಸ್ ನ ಪರಮ ಧ್ಯೇಯವಾಗಿದೆ. ಹಿಂದೂಗಳಾಗಿ ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿಕೊಂಡು ಹಿಂದೂ ಧರ್ಮಕ್ಕೆ ಮುಳುವು ಆಗುವುದು ನಿಲ್ಲಿಸಿ ಎಂದರು.

ವರದಕ್ಷಿಣೆ ಕೇಸ್‌ಲ್ಲಿ 26 ವರ್ಷ ಜೈಲಿನಲ್ಲಿದ್ದ 93 ವರ್ಷದ ಅಜ್ಜಿ, ಬಿಡುಗಡೆಯಾದ ಒಂದೇ ವಾರಕ್ಕೆ ಸಾವು

 

ಒಂದೂವರೆ ವರ್ಷದಿಂದ ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾಯಿ ಬಾಲ ಅಲ್ಲಾಡಿಸುವುದು ಸಾಮಾನ್ಯ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಬಾಲವೇ ನಾಯಿಯನ್ನು ಅಲುಗಾಡಿಸುತ್ತಿದೆ. ಕೆಲ ಕ್ರಿಮಿನಲ್‌ಗಳ ಮಾತುಗಳು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದರೆ ಯೋಚಿಸಿ ಕಾನೂನು, ಈ ಅಧಿಕಾರಿಗಳು ತಮ್ಮ ಘನತೆ, ಗೌರವ ಮರೆತು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.

ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?

ಇನ್ನು ಪ್ರತಿಭಟನೆ ವೇಳೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಶ್ರೀಗಳು ಕಲ್ಲು, ಬಿಲ್ಲು ಬಾಣ ಏನಿದ್ದರೂ ಪಾಕಿಸ್ತಾನ, ಬಾಂಗ್ಲಾದೇಶದ ವಿರುದ್ಧ ಮಾತ್ರ. ಇಲ್ಲಿ ಯಾರೂ ಕಲ್ಲು ಹೊಡೆಯಬೇಡಿ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮನವಿ ಮಾಡಿದರು. ಇದೇ ವೇಳೆ ಅತ್ಯಾಚಾರಕ್ಕೆ ಒಳಗಾದ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು, ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. 

Latest Videos
Follow Us:
Download App:
  • android
  • ios