ವಿಧಾನಸಭೆಗೆ ಬರೋರಿಗೆ ಬಸವಣ್ಣ, ಕೆಂಪೇಗೌಡರು ಮಾದರಿ ಆಗಿರಲಿಜಾಗತಿಕವಾಗಿ ಭಾರತದಲ್ಲೇ ಲೋಕತಂತ್ರ ವ್ಯವಸ್ಥೆಯ ಜನನ ಆಗಿದೆಕೆಂಪೇಗೌಡರು ಅದ್ಭುತ ನಗರ, ಸಾವಿರಾರು ಕೆರೆ, ಕಟ್ಟೆ ನಿರ್ಮಾತೃ

ಬೆಂಗಳೂರು (ಮಾ.26): ರಾಜ್ಯದಲ್ಲಿ ಕರ್ನಾಟಕ ವಿಕಾಸಕ್ಕೆ ಜಗಳ ಗಂಟ ಪಕ್ಷ ಬೇಕಾಗಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಜಗಳ ಆಡೋರು ಬೆಂಗಳೂರು ಉದ್ಧಾರ ಮಾಡಲ್ಲ. ಮೋದಿ ನೇತೃತ್ವದಲ್ಲೇ ಕರ್ನಾಟಕ ವಿಕಾಸವಾಗಲಿದ್ದು, ಈ ಬಾರಿ ಸ್ಪಷ್ಟ ಬಹುಮತ ನೀಡುವಂತೆ ಮನವಿ ಮಾಡಿದ ಕೇಂದ್ರ ಗೃಹಸಚಿವ ಅಮಿತ್‌ ಶಾ, ಇದೇ ಮೊದಲ ಬಾರಿಗೆ ವೇದಿಕೆ ಮೇಲಿದ್ದ ಸ್ವಾಮೀಜಿಗಳ ಕಾಲು ಮುಟ್ಟಿ ನಮಸ್ಕರಿಸಿದ್ದರು.

ಬೆಂಗಳೂರಿನ ವಿಧಾನಸೌಧದ ಮುಂಭಾಗ ನಿರ್ಮಿಸಲಾದ ವಿಧಾನಸೌಧದ ಮುಂದೆ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೊಳಿಸಿದರು. ನಂತರ ತಮ್ಮ ಭಾಷಣದ ಕೊನೆಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಮಿತ್‌ ಶಾ ಅವರು ವೇದಿಕೆ ಮೇಲೆ ಆಸೀನರಾಗಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರಿನ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವತೀರ್ಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ, ನಂಜಾವಧೂತ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗರ ಪೀಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಕಾಲು ಮುಟ್ಟಿ ನಮಸ್ಕರಿಸಿದರು. 

ಪ್ರಧಾನಿಯಾಗಿ ದೇವೇಗೌಡರ ಸಾಧನೆ ಇಲ್ಲಿದೆ ನೋಡಿ: ನೀವು ಭಾವುಕರಾಗೋದು ಗ್ಯಾರಂಟಿ

ಅನುದಾನದ ಬಗ್ಗೆ ಮಾಹಿತಿ ಕೊಡಲಿ: ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಕಡಿಮೆ ಅನುದಾನ ಬರ್ತಿತ್ತು. ನಾವು ಬಂದ ಮೇಲೆ ರಾಜ್ಯದ ಪಾಲಿನ ಅನುದಾನ ಹೆಚ್ಚಾಗಿದೆ. ವಿವಿಧ ಯೋಜನೆಗಳಿಗೆ ಅನುದಾನ ಮೊದಲಿಗಿಂತ ಹೆಚ್ಚಾಗಿ ಬರ್ತಿದೆ. ಸೋನಿಯಾಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಬಂದು ತಾವು ಕೊಟ್ಟ ಅನುದಾನ ಎಷ್ಟು ಎಂದು ಲೆಕ್ಕವನ್ನು ಹೇಳಲಿ. ನಾವು ಕೊಟ್ಟ ಅನುದಾನದ ಬಗ್ಗೆ ನಮ್ಮ ಕಾರ್ಯಕರ್ತರು ಲೆಕ್ಕ ಹೇಳ್ತಾರೆ. ಕರ್ನಾಟಕ ವಿಕಾಸಕ್ಕೆ ಜಗಳ ಗಂಟ ಪಕ್ಷ ಬೇಕಾಗಿಲ್ಲ. ಸಿಎಂ ಹುದ್ದೆಗೆ ಜಗಳ ಆಡೋರು ಬೆಂಗಳೂರು ಉದ್ಧಾರ ಮಾಡಲ್ಲ. ಈ ಬಾರಿ ನೀವು ಪೂರ್ಣ ಬಹುಮತ ನೀಡಬೇಕು. ಕಳೆದ ಸಲ 104 ಸೀಟ್ ಬಿಜೆಪಿ ಗೆ ಬಂತು. ಆದರೆ ಬಹುಮತ ಸ್ವಲ್ಪ ಕಡಿಮೆ ಬಂತು. ಈ ಬಾರಿ ಇಲ್ಲಿನ ಜನ ನಮಗೆ ಬಹುಮತ ಕೊಡುವಂತೆ ಮನವಿ ಮಾಡಿದರು.

ಭಾರತದಲ್ಲೇ ಲೋಕತಂತ್ರ ವ್ಯವಸ್ಥೆಯ ಜನನ: ಇವತ್ತು ಕರ್ನಾಟಕದಲ್ಲಿ ಐತಿಹಾಸಿಕ ದಿನ. ಇಬ್ಬರು ಮಹಾತ್ಮರ ಪ್ರತಿಮೆಗಳ ಅನಾವರಣ ಆಗಿದೆ. ಜಗತ್ತಿಗೆ ಕರ್ನಾಟಕದಿಂದ ಸಂದೇಶ ಸಾರಿದ ಮಹಾತ್ಮರು ಆಗಿದ್ದಾರೆ. ವಿಧಾನಸಭೆಗೆ ಮುಂದೆ ಆಯ್ಕೆ ಆಗಿ ಬರೋರಿಗೆ ಬಸವಣ್ಣ, ಕೆಂಪೇಗೌಡರು ಮಾದರಿ, ಆದರ್ಶ ಆಗಿರಲಿ. ನಾನು ಇವತ್ತು ಪ್ರತಿಮೆಗಳ ಅನಾವಣ ಮಾಡಿ ಸೌಭಾಗ್ಯಶಾಲಿ ಆಗಿದ್ದೇನೆ. ಭಾರತದಲ್ಲೇ ಲೋಕತಂತ್ರ ವ್ಯವಸ್ಥೆಯ ಜನನ. ಅನುಭವ ಮಂಟಪದ ಮೂಲಕ ಬಸವಣ್ಣ ಲೋಕತಂತ್ರದ ವ್ಯವಸ್ಥೆ ತಂದವರು. ಬಸವಣ್ಣ ವಚನಗಳ ಮೂಲಕ ಜೀವನಾಮೃತದ‌ ಸಂದೇಶ ಸಾರಿದವರು. ಬಸವಣ್ಣ ಪ್ರತಿಮೆ ಅನಾವರಣ ಮೂಲಕ ಲೋಕತಂತ್ರದ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದರು.

ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಕಾಂಗ್ರೆಸ್‌ ಸಂಚು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಕೆಂಪೇಗೌಡರು ಅದ್ಭುತ ನಗರ ನಿರ್ಮಿಸಿದವರು: ನಾಡಪ್ರಭು ಕೆಂಪೇಗೌಡ ಬೆಂಗಳೂರಿನಂಥ ಅದ್ಭುತ ನಗರ ನಿರ್ಮಿಸಿದವರು. ಸಾವಿರಾರು ಕೆರೆ ಕಟ್ಟೆಗಳ ನಿರ್ಮಾತೃ ಆಗಿದ್ದಾರೆ. ಕೆಂಪೇಗೌಡರ ಪ್ರತಿಮೆ ವಿಧಾನಸೌಧದಲ್ಲಿ ಅವಶ್ಯಕವಾಗಿ ಬೇಕಿತ್ತು. ಬೆಂಗಳೂರು ಹಬ್ಬ ಇಲ್ಲಿನ ಕಲೆ, ಸಂಸ್ಕೃತಿಗಳ ಸಮಾಗಮ ಹಬ್ಬವಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಮೋದಿಯವರು ಕರ್ನಾಟಕದ ವಿಕಾಸಕ್ಕೆ ಸಾಕಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಉತ್ತಮ ನಿರ್ವಹಣೆ ಮಾಡಿದಾರೆ. ಯಡಿಯೂರಪ್ಪ ಕೋವಿಡ್ ನಿರ್ವಹಣಾ ಕೆಲಸಗಳು ಶ್ಲಾಘನೀಯವಾಗಿದೆ. ಬೊಮ್ಮಾಯಿ ಕೂಡ ಕೋವಿಡ್ ನಿಯಂತ್ರಣಾ ಕಾರ್ಯ ಮುಂದುವರೆಸಿದರು ಎಂದರು.

ಧರ್ಮದ ಆಧಾರದಲ್ಲಿದ್ದ ಮೀಸಲಾತಿ ರದ್ದು: ರಾಜ್ಯದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟವರು ಕಾಂಗ್ರೆಸ್ ನಾಯಕರು ಆಗಿದ್ದಾರೆ. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಧರ್ಮದ ಆಧಾರದಲ್ಲಿದ್ದ ಶೇ.4% ಮೀಸಲಾತಿಯನ್ನು ಬೊಮ್ಮಾಯಿ ಸಮಾಪ್ತಿ ಗೊಳಿಸಿದ್ದಾರೆ. ಆ ಶೇ.4% ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಹಂಚಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯ ಕೊಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. 

ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಚಿವರಾದ ಆರ್.ಅಶೋಕ, ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಸಿ.ಎನ್.ಆಶ್ವತ್ಥನಾರಾಯಣ ಉಪಸ್ಥಿತರಿದ್ದರು.