ಪ್ರಧಾನಿಯಾಗಿ ದೇವೇಗೌಡರ ಸಾಧನೆ ಇಲ್ಲಿದೆ ನೋಡಿ: ನೀವು ಭಾವುಕರಾಗೋದು ಗ್ಯಾರಂಟಿ
ಕನ್ನಡ ನಾಡಲ್ಲಿ ಹುಟ್ಟಿ ದೇಶದ ಏಳಿಗೆಗಾಗಿ ಸಣ್ಣ ದೀಪವನ್ನು ಹಚ್ಚಿದ್ದೇನೆ
ಮಕ್ಕಳು, ಮೊಮ್ಮಕ್ಕಳಿಗೂ ಜನರಿಗೋಸ್ಕರ ದುಡಿಯುವಂತೆ ಸಲಹೆ
ಪಂಜಾಬಿನ ಭತ್ತದ ತಳಿಗೆ ದೇವೇಗೌಡರ ಹೆಸರು ನಾಮಕರಣ
ಮೈಸೂರು (ಮಾ.26): ಮೈಸೂರಿನ ಕೃಷ್ಣರಾಜೇಂದ್ರ ಒಡೆಯರು, ಸರ್.ಎಂ. ವಿಶ್ವೇಶ್ವರಯ್ಯ, ಟಿಪ್ಪು ಸುಲ್ತಾನ್, ಕುವೆಂಪು ಅವರಂತಹ ವಿಶ್ವಮಾನ್ಯ ನಾಯಕರು ಹುಟ್ಟಿದ ಕನ್ನಡ ನಾಡಿನಲ್ಲಿ ಜನಿಸಿದ ಹೆಮ್ಮೆ ನನಗಿದೆ. ನಾನೊಬ್ಬ ಕನ್ನಡಿಗನಾಗಿ ದೇಶದ ಅಭಿವೃದ್ಧಿಗೆ ಪ್ರಧಾನಮಂತ್ರಿಯಾಗಿ ಮಾಡಿದ ಕೆಲಸವು ಇಂದಿಗೂ ಮಾತನಾಡುತ್ತಿದೆ. ನಾಡಿನಲ್ಲಿ ಜಗತ್ತಿನ ಏಳಿಗೆಗಾಗಿ ಒಂದು ಸಣ್ಣ ದೀಪವನ್ನು ಹಚ್ಚಿದ್ದೇನೆ ಎಂಬ ತೃಪ್ತಿಯಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹೇಳುತ್ತಾ ಜನಸಂದಣಿ ನೋಡಿ ಗದ್ಗದಿತರಾದರು.
ಮೈಸೂರಿನಲ್ಲಿ ಇಂದು ನಡೆದ ಜೆಡಿಎಸ್ ಪಂಚರತ್ನಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾವು ಪ್ರಧಾನಮಂತ್ರಿ ಆಗಿದ್ದಾಗ, ರೈತನ ಮಗನಾಗಿ ರೈತರ ಹಕ್ಕುಗಳ ರಕ್ಷಣೆಗೆ ಮಾಡಿದ ಕಾರ್ಯಗಳನ್ನು ಬಿಚ್ಚಿಟ್ಟರು. ಪಂಜಾಬಿನ ರೈತರು ಒಂದು ಭತ್ತದ ತಳಿಗೆ ದೇವೇಗೌಡರ ಹೆಸರನ್ನು ಇಟ್ಟಿರುವ ಬಗ್ಗೆ ನನೆಪಿಸಿಕೊಂಡರು. ಇನ್ನು ಪ್ರಧಾನಮಂತ್ರಿಯಾಗಿ ಆಡಳಿತ ನಡೆಸಿದ ಇಷ್ಟು ವರ್ಷಗಳ ನಂತರವೂ ದೇಶ, ವಿದೇಶದ ಜನರು ಸ್ಮರಿಸುತ್ತಾರೆ. ಹಲವು ಮಹನೀಯರು ಹುಟ್ಟಿದ ನಾಡಿನಲ್ಲಿ ಜಗತ್ತಿನ ಏಳಿಗೆಗಾಗಿ ಒಂದು ಸಣ್ಣ ದೀಪವನ್ನು ಹಚ್ಚಿದ್ದೇನೆ ಎಂಬ ತೃಪ್ತಿಯಿದೆ ಎಂದು ಭಾವುಕರಾದರು.
ನಿಮ್ಮ ಭೇಟಿಗಾಗಿ ದೇವರಲ್ಲಿ ಬೇಡಿಕೊಂಡಿದ್ದ ಕ್ಷಣ ಈಡೇರಿದೆ: ಕಣ್ಣೀರು ಹಾಕಿದ ದೇವೇಗೌಡರು
ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಜಾತಿ, ಮತ ಆಧಾರದ ಮೇಲೆ ಅಧಿಕಾರ ಹಿಡಿಯುವುದು ನಿಂತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಹಾಗೂ ರೈತರ ಹಕ್ಕುಗಳಿಗೆ ನ್ಯಾಯ ಒದಗಿಸಿದ್ದೇನೆ. ರೈತರ ಹಕ್ಕಿಗಾಗಿ, ಕಾವೇರಿ, ಗಂಗೆ, ಕೃಷ್ಣೆ ಸೇರಿ ಹಲವು ನೀರಾವರಿ ಯೋಜನೆಗಳಿಗೆ ಮಾಡಿದ್ದೇನೆ. ನಾನು ಮಹಿಳೆಯರಿಗೆ ರಾಜಕೀಯ ಮೀಸಲಾತಿ ನಿಡಲು ಶ್ರಮಿಸಿದ್ದೇನೆ. ನಾನು ಪ್ರಧಾನಮಂತ್ರಿ ಆಗಿದ್ದಾಗ ಕಾನೂನು ರೂಪಿಸಲು ಮುಂದಾದಾಗ ಅಧಿಕಾರ ಕಳೆದುಕೊಂಡೆನು. ನಂತರ ಅಧಿಕಾರಕ್ಕೆ ಬಂದವರು ಕಾನೂನು ರೂಪಿಸಿದರೂ, ಅದಕ್ಕೆ ಯೋಜನೆ ಹಾಕಿದ್ದ ನನ್ನ ಹೆಸರು ಹೇಳುವುದನ್ನೇ ಮರೆತುಬಿಟ್ಟರು ಎಂದು ಹೇಳಿದರು.
ವಾಲ್ಮೀಕಿ ಸಮುದಾಯ ಮೀಸಲಾತಿಗೆ ದೊಡ್ಡ ಹೋರಾಟ: ರಾಜ್ಯದಲ್ಲಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ದೊರಕಬೇಕಾದರೆ ನಾನು ಪ್ರಧಾನಮಂತ್ರಿ ಚಂದ್ರಶೇಖರ್ ಅವರೊಂದಿಗೆ ಹೋರಾಟ ಮಾಡಿದ ಪರಿಪಾಟಲು ನನಗೇ ಗೊತ್ತು. ಬೆಂಗಳೂರು ಅಭಿವೃದ್ಧಿಗೆ ಈ ರೈತನ ಮಗನಾಗಿ ದುಡಿದಿದ್ದೇನೆ. ನಾನು ಏನು ಮಾಡಿದ್ದೇನೆ ಎಂಬುದು ಭಗವಂತನಿಗೆ ಮತ್ತು ನಿಮಗೆ ತಿಳಿದಿದೆ. ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾಗ ಬೆಂಗಳೂರು- ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಏನು ತೀರ್ಮಾನ ಕೈಗೊಂಡಿದ್ದೇನೆ ಎಂಬುದು ಗೊತ್ತಿದೆ. ಅದರೆ, ನಾನು ಪ್ರಚಾರವನ್ನು ಪಡೆಯುವುದಿಲ್ಲ ಎಂದರು.
ಜನರಿಗಾಗಿ ದುಡಿಯುವಂತೆ ಮಕ್ಕಳು, ಮೊಮ್ಮಕ್ಕಳಿಗೆ ಸಲಹೆ: ನನ್ನ 70 ವರ್ಷಗಳ ಅಧಿಕಾರದಲ್ಲಿ ಎಂದಿಗೂ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿಲ್ಲ. ಒಂದು ವೇಳೆ ನಾನು ಕೊಟ್ಟ ಭರವಸೆ ಈಡೇರಿಸಲಿದ್ದಾಗ ರಾಜಿನಾಮೆ ಕೊಟ್ಟಿದ್ದೇನೆ. ನಾನು ಎಲ್ಲ ಕಾಲಕ್ಕೂ ಅಭಿವೃದ್ಧಿ ಮಂತ್ರ ಜಪಿಸಿದ್ದೇನೆ. ನಾನು ಬೆರಳೆಣಿಕೆ ವರ್ಷಗಳಷ್ಟು ಮಾತ್ರ ಅಧಿಕಾರದಲ್ಲಿ ಇದ್ದು, ದೇವರಾಣೆಗೂ ನಾನು ಜನರ ಅಭಿವೃದ್ಧಿಗೆ ದುಡಿದಿದ್ದೇನೆ. ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಜನರಿಗೋಸ್ಕರ ದುಡಿಯುವಂತೆ ಹೇಳಿದ್ದೇನೆ. ಅವರೂ ಕೂಡ ನಾನು ಸಾಗಿದ ದುಡಿಮೆ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ ಎಂದರು.
ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಭಗವಂತನಿಗೆ ನನ್ನ ಕೂಗು ಕೇಳಿದೆ: ರಾಜ್ಯದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭವನ್ನು ನೀವು ರೂಪಿಸಿದ್ದೀರಿ. ಕುಮಾರಸ್ವಾಮಿ ತಮ್ಮ ಆರೋಗ್ಯ ಲೆಕ್ಕಿಸದೇ ರಾಜ್ಯ ಸಂಚಾರ ಮಾಡಿದ್ದಾರೆ. ಅವರು ರಾಜ್ಯ ಸುತ್ತಾಡಿದ್ದನ್ನು ನೊಡಿ ಕಣ್ಣು ತುಂಬಿಕೊಂಡಿದ್ದೇನೆ. ನನ್ನ ಆರೋಗ್ಯ ಸರಿಯಾಗಿದ್ದರೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆನು. ಭಗವಂತನು ಈ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗಿಯಾಗುವಂತೆ ಮಾಡಪ್ಪಾ ಎಂದು ಬೇಡಿಕೊಂಡಿದ್ದೆನು. ನನ್ನ ಆಸೆಯನ್ನು ಕೇಳಿಕೊಂಡ ಭಗವಂತ ನನ್ನನ್ನು ನಿಮ್ಮಮುಂದೆ ನಿಲ್ಲಿಸಿದ್ದಾನೆ. ನಾನು ಭಗವಂತನ ಆಶೀರ್ವಾದದ ಭಾಗವಾಗಿದ್ದೇನೆ. ಆದರೆ, ನನ್ನ ಶಕ್ತಿ ನೀವು ಆಗಿದ್ದೀರಿ ಎಂದರು.