Asianet Suvarna News Asianet Suvarna News

ಎಣ್ಣೆ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌: ಮದ್ಯದ ಬೆಲೆ ಶೀಘ್ರವೇ ಏರಿಕೆ..!

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್‌ಲ್ಯಾಬ್‌ಗಳ ಬಹಳಷ್ಟು ಮದ್ಯಗಳಬೆಲೆಕಡಿಮೆ ಇದೆ.ಬೇರೆರಾಜ್ಯಗಳಮದ್ಯಗಳ ಸರಾಸರಿ ಬೆಲೆಯನ್ನು ಪರಿಗಣಿಸಿ ನಮ್ಮಲ್ಲಿ ಯಾವ್ಯಾವ ಸ್‌ಲ್ಯಾಬ್‌ಗಳ ಮದ್ಯದ ಬೆಲೆ ಕಡಿಮೆ ಇದೆಯೋ ಅಂತವುಗಳ ಬೆಲೆ ಹೆಚ್ಚಳದ ಸಾಧ್ಯತೆಯಿದೆ 

Alcohol Price will Rise Soon in Karnataka grg
Author
First Published Feb 18, 2024, 7:34 AM IST

ಸಿದ್ದು ಚಿಕ್ಕಬಳ್ಳೇಕೆರೆ 

ಬೆಂಗಳೂರು(ಫೆ.18): ನೆರೆ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ಗಳ ಬೆಲೆಗಳನ್ನು ಪರಿಷ್ಕರಿಸುವುದಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆಮಾಡಿರುವುದರಿಂದಶೀಘ್ರದಲ್ಲೇ 'ಬಡವರು' ಸೇವಿಸುವ ಮದ್ಯಗಳ ಬೆಲೆ ದುಬಾರಿಯಾಗುವ ಸಾಧ್ಯತೆಯಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್‌ಲ್ಯಾಬ್‌ಗಳ ಬಹಳಷ್ಟು ಮದ್ಯಗಳಬೆಲೆಕಡಿಮೆ ಇದೆ.ಬೇರೆರಾಜ್ಯಗಳಮದ್ಯಗಳ ಸರಾಸರಿ ಬೆಲೆಯನ್ನು ಪರಿಗಣಿಸಿ ನಮ್ಮಲ್ಲಿ ಯಾವ್ಯಾವ ಸ್‌ಲ್ಯಾಬ್‌ಗಳ ಮದ್ಯದ ಬೆಲೆ ಕಡಿಮೆ ಇದೆಯೋ ಅಂತವುಗಳ ಬೆಲೆ ಹೆಚ್ಚಳದ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ

ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16ರಂದು ಮಂಡಿಸಿದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಲ್ಲಿ ಕಳೆದ ಸಾಲಿಗಿಂತ 2,525 ಕೋಟಿ ರು. ಅಧಿಕ ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು. 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ರು. ರಾಜಸ್ವ ಸಂಗ್ರಹಗುರಿ ಇದ್ದು, 2024-25ನೇ ಸಾಲಿನಲ್ಲಿ 38,252 ಕೋಟಿ ರು.ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದೆ. ಈ ಹೆಚ್ಚಳವು ಬೆಲೆ ಅಧಿಕವಾಗುವುದರಿಂದಲೇ ಸಂಗ್ರವಾಗಲಿದೆ. 

ಒಟ್ಟಾರೆ, 180 ಎಂಎಲ್‌ ಬಾಟಲ್‌ಗಳನ್ನು ಪರಿಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ಹಾಕುವುದಾದರೆ 63.14 ರುಪಾಯಿಯ ಮೊದಲನೇ ಸ್‌ಲ್ಯಾಬ್‌ನ ಮದ್ಯಗಳ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ತಿಂಗಳಿಗೆ ಸುಮಾರು 4 ಲಕ್ಷ ಕೇಸ್ (ಒಂದು ಕೇಸ್‌ನಲ್ಲಿ 180 ಎಂಎಲ್‌ನ 48 ಬಾಟಲ್) ಮದ್ಯ ಈ ಸ್‌ಲ್ಯಾಬ್ ನಲ್ಲಿ ಮಾರಾಟವಾಗುತ್ತಿದೆ.

ಅಬಕಾರಿ ಸುಂಕ ಏರಿಸಿದ್ದ ಕಾಂಗ್ರೆಸ್‌ ಸರ್ಕಾರಕ್ಕೆ ಶಾಕ್‌ ಕೊಟ್ಟ ಮದ್ಯ ಪ್ರಿಯರು: ಎಣ್ಣೆ ಮಾರಾಟ ಹೆಚ್ಚಳಕ್ಕೆ ಸಿಎಂ ಸೂಚನೆ

ಯಾವ್ಯಾವಸ್‌ ಲ್ಯಾಬ್‌ ಹೆಚ್ಚಳ?: 

ಎರಡನೇ ಸ್‌ಲ್ಯಾಬ್ ನಲ್ಲಿ ಬರುವ 80 ರುಪಾಯಿಯ ಬ್ರಾಂಡ್‌ಗಳ ಮದ್ಯಗಳು ತಿಂಗಳಿಗೆ ಸುಮಾರು 31 ಲ ಕ್ಷಕೇಸ್‌ ಮಾರಾಟವಾಗುತ್ತಿದ್ದು, ತಲಾ 5 ರು. ಹೆಚ್ಚಳವಾಗಲಿದೆ. ಮೂರನೇಸ್‌ ಲ್ಯಾಬ್‌ನ ಮದ್ಯದ ದರ 99.50 ರು. ಇದ್ದು ಇದನ್ನು 105 ರುಪಾಯಿಗೆ ಹೆಚ್ಚಿಸಬಹುದು. ಈ ಸ್‌ಲ್ಯಾಬ್‌ನ ಮದ್ಯ ತಿಂಗಳಿಗೆ ಸರಾಸರಿ 6.5 ಲಕ್ಷ ಕೇಸ್ ಮಾರಾಟವಾಗುತ್ತದೆ. 4ನೇಸ್‌ ಲ್ಯಾಬ್‌ನ ಮದ್ಯವು 122.50 ರು. ಇದ್ದು ಇದನ್ನು 130 ರುಪಾಯಿಗೆ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ.

ಕಡಿಮೆಯಾಗಲಿದೆ ದುಬಾರಿ ಮದ್ಯ: 

ನೆರೆ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳಿಗೆ ಕರ್ನಾಟಕಕ್ಕಿಂತಲೂ ಕಡಿಮೆ ಬೆಲೆ ಇದೆ. ಆದ್ದರಿಂದ ಹಂಡ್ರೆಡ್ ಪೈಪರ್, ಬ್ಲ್ಯಾಕ್ ಲೇಬಲ್, ಚಿವಾಸ್ ರೀಗಲ್, ದಿಗ್ರೆನ್ ಲಿವಿಟ್ ಮತ್ತಿತರ ಮದ್ಯಗಳ ಬೆಲೆ ಸ್ಟಲ್ಪ ಇಳಿಕೆಯಾಗಲಿದೆ. ರಾಜಸ್ವ ಸಂಗ್ರಹದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಆಗಿರುವುದರಿಂದ ನೆರೆರಾಜ್ಯಗಳ ಬೆಲೆ ಪಟ್ಟಿ ತರಿಸಿಕೊಂಡು ಸರಾಸರಿಯಂತೆ ಹೊಸದಾಗಿ ಬೆಲೆ ನಿಗದಿ ಮಾಡಬೇಕಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Follow Us:
Download App:
  • android
  • ios