ಗ್ಯಾರಂಟಿ ಸರ್ಕಾರಕ್ಕೆ ಫೈನಾನ್ಸ್ ಬೂಸ್ಟರ್ ಕೊಟ್ಟ ಬಿಯರ್ ಪ್ರಿಯರು: 22,500 ಕೋಟಿ ರೂ. ಆದಾಯ

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ಬಿಯರ್ ಪ್ರಿಯರು ಫೈನಾನ್ಸಿಯಲ್ ಬೂಸ್ಟರ್ ಡೋಸ್ ನೀಡಿದ್ದಾರೆ. 

Karnataka excise department Liquor sales increase on 2023 November month sat

ಬೆಂಗಳೂರು (ಡಿ.05): ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರಕ್ಕೆ ಬಿಯರ್ ಪ್ರಿಯರು ಫೈನಾನ್ಸಿಯಲ್ ಬೂಸ್ಟರ್ ಡೋಸ್ ನೀಡಿದ್ದಾರೆ. 

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಗೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರವನ್ನು ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾಸ್ಕ್‌ ನೀಡಿತ್ತು. ಮೊದಲು ಮದ್ಯದ ದರ ಹೆಚ್ಚಳದಿಂದಾಗಿ ದೂರ ಉಳಿದಿದ್ದ ಮದ್ಯಪ್ರಿಯರು ಚಳಿಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಿನ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಈ ಹಿನ್ನೆಯಲ್ಲಿ ನವೆಂಬರ್‌ನಲ್ಲಿ ಬಿಯರ್ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಮದ್ಯಪ್ರಿಯರು ಆರ್ಥಿಕವಾಗಿ ಕೈ ಜೋಡಿಸಿದ್ದಾರೆ.

ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಹ್ಯಾಕ್: ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು

ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಮದ್ಯದ ದರವನ್ನು ಹೆಚ್ಚಳ ಮಾಡಿದ್ದರಿಂದ ಸರ್ಕಾರದ ತೀರ್ಮಾನ ವಿರೋಧಿಸಿದ ಮಧ್ಯಪ್ರಿಯರು ಮದ್ಯ ಸೇವನೆ ಪ್ರಮಾಣವನ್ನು ತಗ್ಗಿಸಿದ್ದರು. ಆದರೆ, ಈಗ ಚಳಿಗಾಲ ಆರಂಭವಾಗುತ್ತಿದ್ದಂತೆ ದರ ಏರಿಕೆಯನ್ನು ಮರೆತು ಈಗ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಅದರಲ್ಲಿಯೂ ಬಿಯರ್ ಸೇವನೆ ಮಾಡುವವರ ಸಂಖ್ಯೆ ಅತ್ಯಧಿಕವಾಗಿ ಏರಿಕೆ ಆಗುತ್ತಿದೆ. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್‌ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಕಳೆದ ಮೂರು ತಿಂಗಳಿಂದ ಮದ್ಯ ಪ್ರಿಯರು ಪ್ರತಿ ತಿಂಗಳು ಸರ್ಕಾರದ ಖಜಾನೆ ತುಂಬಿಸ್ತಿದಾರೆ. ಬಿಯರ್ ಸೇಲ್‌ನಿಂದ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಮಾರಾಟ ಹೆಚ್ಚಳವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟ ಆಗಿತ್ತ. ಆದರೆ, ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ಮೂಲಕ ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ 6 ಲಕ್ಷ ಬಿಯರ್ ಬಾಕ್ಸ್ ಮಾರಾಟ ಹೆಚ್ಚಳವಾಗಿದೆ. 

ರಾಮನಗರ: ಕನಕಪುರದಲ್ಲಿ ನಾಡಬಾಂಬ್ ಸ್ಫೋಟ, ವ್ಯಕ್ತಿಯ ಕೈ ಛಿದ್ರ ಛಿದ್ರ..!

ದರ ಏರಿಕೆಯ ನಡುವೆಯೂ ಮದ್ಯ ಮಾರಾಟ ಬಲು ಜೋರಾಗಿದೆ. ಬಿಯರ್ ಜೊತೆಗೆ ಇತರೆ ಲಿಕ್ಕರ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಇನ್ನು ಚಳಿಗಾಲ ಆರಂಭವಾಗಿದ್ದರಿಂದ ನವೆಂಬರ್ ನಲ್ಲಿ ಬಿಯರ್ ಸೇರಿ ಎಲ್ಲ ಮಾದರಿಯ ಮದ್ಯ ಮಾರಾಟ ಹೆಚ್ಚಾಗಿದ್ದು, ಒಟ್ಟಾರೆ ಲಿಕ್ಕರ್ ಮಾರಾಟ ಪ್ರಮಾಣ 0.43 ಶೇ. ಹೆಚ್ಚಳ ವಾಗಿದೆ. ಇನ್ನು ರಾಜ್ಯ ಸರ್ಕಾರದಿಂದ 2023-24ರಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಗೆ ಟಾರ್ಗೆಟ್ ನೀಡಲಾಗಿದೆ. ಈಗ ಕಳೆದ ಎಂಟು ತಿಂಗಳಿನಲ್ಲಿ (ಏಪ್ರಿಲ್‌ನಿಂದ ನವೆಂಬರ್‌ ವರೆಗೆ) ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ.

Latest Videos
Follow Us:
Download App:
  • android
  • ios