Asianet Suvarna News Asianet Suvarna News

ಜಾತಿ ಗಣತಿ ವರದಿ: ಕರ್ನಾಟಕದಲ್ಲಿ ಅಹಿಂದ ಜನಸಂಖ್ಯೆಯೇ ನಂ.1..!

ಜನಸಂಖ್ಯೆಯಲ್ಲಿ ಅಹಿಂದ ಪಾಲು ಶೇ.60 | 5.98 ಕೋಟಿ ಜನರಲ್ಲಿ 3.96 ಕೋಟಿ ಅಹಿಂದ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಇತರೆ ಸಮುದಾಯಗಳ ಜನರು 1.87 ಕೋಟಿ ಬಹುನಿರೀಕ್ಷಿತ ಜಾತಿ ಗಣತಿ ವರದಿ ಕೊನೆಗೂ ಹಿಂದುಳಿದ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆ

Ahinda Population is no.1 in Karnataka grg
Author
First Published Mar 1, 2024, 6:11 AM IST

ಬೆಂಗಳೂರು(ಮಾ.01): ರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ಟರ, ಕೋಲಾಹಲ ಸೃಷ್ಟಿಸಲಿದೆ ಎನ್ನಲಾಗಿರುವ ಜಾತಿವಾರು ಜನಸಖ್ಯೆಯ ವಿವರಗಳನ್ನೊಳಗೊಂಡ 'ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.

ಈ ವರದಿಯಲ್ಲಿ ಏನಿದೆ ಎಂಬ ಅಂಶ ಅಧಿಕೃತವಾಗಿ ಇನ್ನೂ ಬಹಿರಂಗಗೊಂಡಿಲ್ಲವಾದರೂ ಹೊರ ಬಿದ್ದಿವೆ. ಮೂಲಗಳ ಪ್ರಕಾರ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.60ರಷ್ಟು ಇದೆ. ಅದರಲ್ಲೂ ಅಲ್ಪಸಖ್ಯಾತ ಸಮುದಾಯವು ಇದುವರೆಗೂ ರಾಜ್ಯದ ಅತಿ ದೊಡ್ಡ ಸಮುದಾಯಗಳೆನಿಸಿದ್ದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗಿಂತ ಹೆಚ್ಚಿದೆ. ಬಹಿರಂಗಗೊಂಡಿರುವ ಅಂಕಿ-ಅಂಶ ಪ್ರಕಾರಮುಸ್ಲಿಮರು 70 ಲಕ್ಷ ಲಿಂಗಾಯತರು 65.0, 2. 60 ತನ್ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಪ್ರಬಲ ಸಮುದಾಯಗಳಿಗೆ ಹೋಲಿಸಿದಾಗ ಬಹುಸಂಖ್ಯಾತರಾಗುತ್ತಾರೆ.

ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ; 2 ಮೂಟೆಗಳಲ್ಲಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗಡೆ

ರಾಜ್ಯದಲ್ಲಿರುವ 5.98 ಕೋಟಿ ಜನಸಂಖ್ಯೆಯ ಪೈಕಿ 3.96 ಕೋಟಿ ಜನರು ಅಹಿಂದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1.87 ಕೋಟಿ ಜನ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರಾಗಿದ್ದಾರೆ. ಪರಿಶಿಷ್ಟಜಾತಿಯ 1.08 ಕೋಟಿಜನ, ಪರಿಶಿಷ್ಟ ಪಂಗಡದ40.45 ಲಕ್ಷಜನ ಇದ್ದರೆ, ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಜನರಿದ್ದಾರೆ.

816 ಒಬಿಸಿ ಜಾತಿ: 

ಒಟ್ಟು 816 ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣ ನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ ಎಂದು ತಿಳಿದು ಬಂದಿದೆ. ಜಾತಿಗಣತಿ ವರದಿಯ ಪ್ರಕಾರ ಒಟ್ಟು 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿ ಸಲಾಗಿದ್ದು, 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

ವರದಿ ಸಲ್ಲಿಕೆ: 

ಆಯೋಗದ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ ಆಗ ಮಿಸಿದ ಮಿಸಿದಹ ಹೆಗ್ಡೆಯವರು, 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳ ದತ್ತಾಂಶ ಇರುವ ಎರಡು ಪೆಟ್ಟಿಗೆಗಳ ವರದಿಯನ್ನು ವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಹಸ್ತಾಂತರಿಸಿದರು. ವರದಿ ಯನ್ನು ಸರ್ಕಾರ ಮುಂದಿನ ಸಚಿವ ಸಂಪುಟ ದಲ್ಲೇ ಮಂಡಿಸುವ ಸಾಧ್ಯತೆ ಇದೆ.

Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

ಉಪ ಸಮಿತಿಯಿಂದ ಅಧ್ಯಯನ: 

ಜಾತಿ ಗಣತಿ ಸಾರ್ವಜನಿಕಗೊಳಿಸಿ, ವರದಿಯಲ್ಲಿನ ದತ್ತಾಂಶಗಳ ಅನುಸಾರ ಸಮುದಾಯಗಳಿಗೆ ಕಾರ್ಯಕ್ರಮಗಳು, ಸೌಲಭ್ಯಗಳನ್ನು ಒದಗಿ ಸುವ ಮೂಲಕ ಸಾಮಾಜಿಕ ನ್ಯಾಯ ಒದಗಿ ಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ದೃಢ ನಿಲುವು ಹೊಂದಿದ್ದಾರೆ. ಆದರೆ, ಲೋಕಸಭೆ ಚುನಾವಣೆ ಹತ್ತಿರ ಇದ್ದು, ವರದಿ ಬಹಿರಂಗಪಡಿಸುವುದರಿಂದ ಎದುರಾಗಬಹುದಾದ ಸಂಭವನೀಯ ವಿರೋಧಗಳು, ರಾಜಕೀಯ ಸ್ಥಿತ್ಯಂತರದಿಂದ
ಪಾರಾಗಲು ವರದಿ ಅಧ್ಯಯನಕ್ಕೆ ಸಂಪುಟ ಉಪ ಸಮಿತಿಯನ್ನು ರಚಿಸಲಾಗುತ್ತದೆ. ಉಪ ಸಮಿತಿಯು ವರದಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಸರ್ಕಾರ ಮಟ್ಟದಲ್ಲಿ ಏನೇ ನುಮಾಡಬೇಕು ಎಂಬ ಬಗ್ಗೆ ವರದಿಸಲ್ಲಿಸಲಿದೆ. ಮತ್ತೊಂದೆಡೆ ವರದಿಯ ಅಂಶಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡುವ ಉದ್ದೇಶವೂ ಇದೆ.

ವರದಿಯನ್ನು ಒಟ್ಟು 13 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ, ಜಾತಿವಾರು ಜನಸಂಖ್ಯೆ, ಜಾತಿ ವರ್ಗಗಳ ಲಕ್ಷಣಗಳು, ವಿಧಾನಸಭಾವಾರು ಜಾತಿಗಳ ಅಂಕಿ-ಅಂಶಗಳು, ತಾಲೂಕುವಾರು ಜಾತಿಯ ಕುಟುಂಬಗಳು, ಜನಸಂಖ್ಯೆಯ ವರದಿ, ಶಿಕ್ಷಣ ಮಾಹಿತಿ, ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ದ್ವಿತೀಯ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅವರ ಅವಧಿಯಲ್ಲಿ ರಾಜ್ಯದಲ್ಲಿ ಮನೆ ಮನೆಗೆ ತೆರಳಿ 54 ಪ್ರಶ್ನಾವಳಿಗಳನ್ನು ಕೇಳಿ ಉತ್ತರ ಪಡೆಯಲಾಗಿತ್ತು ಎಂ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

Follow Us:
Download App:
  • android
  • ios