ಡಿ.ಕೆ.ಶಿವಕುಮಾರ್ ನೀಡಿದ ರಾಜಕೀಯದ ಆಫರ್ ತಿರಸ್ಕರಿಸಿದ ನಟ ಶಿವ ರಾಜ್‌ಕುಮಾರ್: ಆದ್ರೆ ಒಬ್ಬರ ಹೆಸರು ಸೂಚಿಸಿದ್ರು!
ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮಪ್ಪ ನಮಗೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕಲಿಸಿದ್ದು, ಅದನ್ನೇ ನಾನು ಮುಂದುವರೆಸುತ್ತೇನೆ ಎಂದು ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರು (ಡಿ.10): ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯಕ್ಕೆ ಬರುವುದಕ್ಕೆ ಆಫರ್ ನೀಡಿದ್ದಾರೆ. ಆದರೆ, ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮಪ್ಪ ನಮಗೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕಲಿಸಿದ್ದು, ಅದನ್ನೇ ನಾನು ಮುಂದುವರೆಸುತ್ತೇನೆ ಎಂದು ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಈಡಿಗ ಸಮುದಾಯದ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಎಂದಿಗೂ ಪಾಲಿಟಿಕ್ಸ್ ಗೆ ಬರೋಲ್ಲ. ನಮ್ಮ ತಂದೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕೇಳಿ ಕೊಟ್ಟಿದ್ದಾರೆ. ಅದೇ ಸಾಕು ನಮಗೆ. ಈ ಪಾಲಿಟಿಕ್ಸ್ ನಮಗೆ ಬೇಡ. ಆದರೆ ರಾಜ್ಯ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಅವರು ಅಥವಾ ಅವರ ಮನೆಯವರು ಎಂದಿಗೂ ನಮ್ಮನ್ನು ರಾಜಕಾರಣಕ್ಕೆ ಬರುವಂತೆ ಕೇಳಿಲ್ಲ. ಗೀತಾ ಬೇಕಾದ್ರೆ ಪಾಲಿಟಿಕ್ಸ್ ಹೋಗ್ಲಿ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ಅವರ ಹಿಂದೆ ನಾನು ನಿಂತು ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.
ರಕ್ತದಾನ ಮಾಡಿ ಮನುಷ್ಯನಿಗೆ ಮಾದರಿಯಾದ ಶ್ವಾನ: ಇಲ್ಲಿದೆ ನೋಡಿ ರಾಜ್ಯದ ಮೊದಲ ರಕ್ತದಾನಿ ನಾಯಿ ಸಿರಿ
ನನಗೆ ಈಗ 61 ವರ್ಷವಾಗಿದೆ. ರಾಜ್ಯದಲ್ಲಿ ನಮ್ಮ ಈಡಿಗರ ಸಂಘ ಸ್ಥಾಪನೆ ಆಗಿ 75 ವರ್ಷ ಆಗಿದೆ. ಶಾಸಕರು, ನಮ್ಮ ಸಮುದಾಯದ ನಾಯಕರು ಹಲವು ಮನವಿ ಮಾಡಿದ್ದಾರೆ. ಅದನ್ನ ಖಂಡಿತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಈಡೆರಿಸುತ್ತಾರೆ ಎಂಬ ಭರವಸೆಯಿದೆ. ಯಾವುದೇ ಒಂದು ಕಾರ್ಯಕ್ರಮ ಅಂದಾಗ ಭಿನ್ನಾಭಿಪ್ರಾಯ ಬರುತ್ತದೆ. ಆದರೆ, ಕಾರ್ಯಕ್ರಮ ಯಾರು ಮಾಡಿದ್ರು ,ಹೇಗ್ ಮಾಡಿದ್ರು ಅನ್ನೋದು ಮುಖ್ಯವಲ್ಲ. ಯಾರಿಗಾಗಿ ಕಾರ್ಯಕ್ರಮ ಮಾಡಲಾಗ್ತಿದೆ ಅನ್ನೋದು ಮುಖ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಮ್ಮ ಸಮುದಾಯದವರಿಗೆ ಭರವಸೆಯ ಮಾತು ಬರಬೇಕು. ಡಾ.ಲೀಲಾವತಿ ಅಮ್ಮ ನಿನ್ನೆ ಅಗಲಿದ್ದಾರೆ. ಅವರಿಗಾಗಿ ಎರಡು ನಿಮಿಷ ಮೌನಚಾರಣೆ ಮಾಡೋಣ ಎಂದು ಎಲ್ಲರಿಂದಲೂ ಮೌನಾಚರಣೆ ಮಾಡಿಸುವ ಮೂಲಕ ಈಡಿಗ ಸಮಾವೇಶದಲ್ಲಿ ಹಿರಿಯ ನಟಿಗೆ ಗೌರವ ಸಮರ್ಪಣೆ ಮಾಡಿದರು.
ನಾಳೆಯಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ: ಪ್ಲಾಸ್ಟಿಕ್ ಮುಕ್ತ ಪರಿಷೆಗೆ ಆದ್ಯತೆ
ಮಧು ಬಂಗಾರಪ್ಪಗೆ ಗಾಳ ಹಾಕಿ ಕರೆತಂದು ಮಂತ್ರಿ ಮಾಡಿದ್ದೇವೆ: ಈಡಿಗ ಸಮಾವೇಶದಲ್ಲಿ ಮಾತನಾಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಾರಾಯಣ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ನನ್ನ ರಾಜಕೀಯ ಜೀವನ ಆರಂಭ ಬಂಗಾರಪ್ಪ ಅವರ ಜೊತೆಯಲ್ಲಿ ಆಗಿದೆ. ನಿಮ್ಮ ಉತ್ಸಾಹ, ಪ್ರೀತಿ ಅಭಿಮಾನ ನೋಡಿದರೆ ಮತ್ತೊಂದು ದೊಡ್ಡ ಶಕ್ತಿ ಬಂದಿದೆ. ಕರಾವಳಿ ಜನ ನಮ್ಮ ಮೇಲೆ ಅಷ್ಟಾಗಿ ಕೃಪೆ ತೋರಲಿಲ್ಲ. ಈಡಿಗ ಸಮಾಜ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. ನಿಮಗೆಲ್ಲ ಒಳ್ಳೇದು ಆಯ್ತು ಅಂದರೆ ನಮಗೂ ಒಳ್ಳೆಯದು ಆಗುತ್ತದೆ. ನಾವು ಸಿದ್ದರಾಮಯ್ಯ ಅವರ ಜೊತೆ ಇದ್ದೇವೆ ಅಂತ ಸಂದೇಶ ಕೊಟ್ಟಿದ್ದೀರಿ. ನಿಮ್ಮ ಚಪ್ಪಾಳೆಗಾಗಿ ನಾವು ಇಲ್ಲಿಗೆ ಬಂದಿಲ್ಲ, ನಿಮ್ಮ ಕಷ್ಟಕ್ಕೆ ನಾವೂ ಇದ್ದೇವೆ ಅಂತ ಹೇಳೋದಕ್ಕೆ ಬಂದಿದ್ದೇವೆ. 500 ಕೋಟಿ ರೂ. ನೀಡಿ, ನಿಗಮ ಕೊಡಿ ಅಂತ ನೀವು ಕೇಳಿದ್ದೀರಿ. ನೀವೇನು ಚಿಂತೆ ಮಾಡಬೇಡಿ, ಸದನ ನಡೆಯುತ್ತಿದೆ. ಸದನ ಮುಗಿದ ಮೇಲೆ ಎಲ್ಲರನ್ನೂ ಕರೆದು ಸೂಕ್ತ ನಿರ್ಧಾರ ಮಾಡುತ್ತೇವೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಮಧು ಬೇರೆ ಕಡೆ ಕಾಲು ಇಟ್ಟಿದ್ದ, ನಾನು ಗಾಳ ಹಾಕಿ ಇಲ್ಲಿಗೆ ಕರೆದು ತಂದಿದ್ದೇನೆ. ಈಗ ನೋಡಿ ಮಂತ್ರಿ ಆಗಿ ಮಾತನಾಡುತ್ತಿದ್ದಾನೆ ಎಂದರು.
ಪಾರ್ಲಿಮೆಂಟಿಗೆ ರೆಡಿಯಾಲು ಶಿವಣ್ಣಗೆ ಹೇಳಿದ ಡಿಕೆಶಿ: ಮುಂದೆ ಲೋಕಸಭೆಯಲ್ಲಿ ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ. ಶಿವಣ್ಣಗೆ ಸಹ ಹೇಳಿದ್ದೇನೆ, ಪಾರ್ಲಿಮೆಂಟ್ ಗೆ ರೆಡಿ ಆಗಿ ಅಂತ. ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಎಂದರು. ಆದರೆ, ಚಿತ್ರ ಯವಾಗದರೂ ಮಾಡಬಹುದು, ಆದರೆ ಪಾರ್ಲಿಮೆಂಟ್ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದೇನೆ. ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು.