ರಕ್ತದಾನ ಮಾಡಿ ಮನುಷ್ಯನಿಗೆ ಮಾದರಿಯಾದ ಶ್ವಾನ: ಇಲ್ಲಿದೆ ನೋಡಿ ರಾಜ್ಯದ ಮೊದಲ ರಕ್ತದಾನಿ ನಾಯಿ ಸಿರಿ
ಹಾವೇರಿಯಲ್ಲಿ ನಾಯಿಯೊಂದು ತನ್ನ ರಕ್ತದಾನವನ್ನು ಮಾಡಿ ಮನುಷ್ಯರಿಗೇ ಮಾದರಿಯಾಗಿದೆ. ಇಷ್ಟು ದಿನ ನಿಯತ್ತಿಗೆ ಮಾತ್ರ ನಾಯಿ ಹೆಸರೇಳುತ್ತಿದ್ದವರು, ರಕ್ತದಾನ ಬಗ್ಗೆಯೂ ಮಾತನಾಡಬಹುದು.
ಹಾವೇರಿ (ಡಿ.10): ಯಾರಿಗಾದರೂ ಅನಾರೋಗ್ಯವಿದೆ ಅಥವಾ ಅಪಘಾತವಾಗಿದೆ ರಕ್ತದಾನ ಮಾಡಿ ಎಂದು ಕೇಳಿದರೂ ಒಪ್ಪದ ಅನೇಕರಿದ್ದಾರೆ. ಆದರೆ, ಇಲ್ಲಿ ನಾಯಿಯೊಂದು ತನ್ನ ರಕ್ತದಾನವನ್ನು ಮಾಡಿ ಮನುಷ್ಯರಿಗೇ ಮಾದರಿಯಾಗಿದೆ. ಇಷ್ಟು ದಿನ ನಿಯತ್ತಿಗೆ ಮಾತ್ರ ನಾಯಿ ಹೆಸರೇಳುತ್ತಿದ್ದವರು, ರಕ್ತದಾನ ಬಗ್ಗೆಯೂ ಮಾತನಾಡಬಹುದು.
ಹೌದು, ಹಾವೇರಿ ಜಿಲ್ಲೆಯ ಹುಲ್ಲತ್ತಿ ಗ್ರಾಮದ ನಾಗರಾಜ್ ಗೊಲ್ಲರ ಸಾಕಿದ ರಾಕಿ ಶ್ವಾನಕ್ಕೆ ರಕ್ತ ಅವಶ್ಯಕತೆ ಇತ್ತು. ಆಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ರಕ್ತವನ್ನು ನೀಡಿದಲ್ಲಿ ಮಾತ್ರ ಬದುಕುಳಿಸಬಹುದು ಎಂದು ಹೇಳಲಾಗಿತ್ತು. ಆದರೆ, ಹಲವು ನಾಯಿಗಳಿಂದ ಪರೀಕ್ಷೆ ಮಾಡಿಸಲಾಯಿತಾದರೂ ರಕ್ತದ ಹೊಂದಾಣಿಕೆ ಆಗಲಿಲ್ಲ. ಆದ್ದರಿಂದ ನಾಯಿಗೆ ರಕ್ತದಾನ ಮಾಡಿಸಲು ಸಾಕು ನಾಯಿಗಳ ಮಾಲೀಕರು ಇಚ್ಛೆ ತೋರಿಸದಲ್ಲಿ ತಮ್ಮನ್ನು ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು.
ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ನಮ್ಮ ನಾಯಿಯಿಂದ ರಕ್ತದಾನ ಮಾಡಿಸಲು ಸಿದ್ಧವಿದ್ದೇವೆ ಎಂದು ಬೊಮ್ಮನಹಳ್ಳಿ ಗ್ರಾಮದ ರಂಜಿತ ಅವರು ಹೇಳಿದ್ದಾರೆ. ನಂತರ, ಅವರನ್ನು ನಿರಂತರ ಸಂಪರ್ಕಿಸಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಆಸ್ಪತ್ರೆಗೆ ಕರೆತರುವಂತೆ ಹೇಳಿದ್ದಾರೆ. ನಂತರ ರಂಜಿತಾ ಅವರ ನಾಯಿ ಸಿರಿಯನ್ನು ಸ್ಥಳಕ್ಕೆ ಕರೆತಂದು ರಕ್ತ ಪರೀಕ್ಷೆ ಮಾಡಿದಾಗ ಎರಡೂ ನಾಯಿಗಳ ರಕ್ತಗಳು ಹೊಂದಾಣಿಕೆ ಆಗಿರುವುದು ಕಂಡುಬಂದಿದೆ. ನಂತರ, ಸಿರಿ ನಾಯಿಯಿಂದ ರಕ್ತವನ್ನು ಸಂಗ್ರಹ ಮಾಡಿ ನಂತರ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ಹಾಕಲಾಗಿದೆ.
ಕನ್ನಡ ಬಿಗ್ ಬಾಸ್ ವಿರುದ್ಧ ಪೊಲೀಸ್ ದೂರು ದಾಖಲು, ಶೋನಿಂದ ಹೊರಬರುವಂತೆ ಕಿಚ್ಚನಿಗೆ ಮನವಿ
ಈ ಮೂಲಕ ದೇಶದಲ್ಲಿ ರಕ್ತ ದಾನ ಮಾಡಿದ ಮೊಟ್ಟ ಮೊದಲ ನಾಯಿ ಎಂಬ ಖ್ಯಾತಿಗೆ 'ಸಿರಿ' ಶ್ವಾನ ಪಾತ್ರವಾಗಿದೆ. ಇನ್ನು ಅಕ್ಕಿ ಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ತಂಡದಿಂದ ಶ್ವಾನದಿಂದ ಶ್ವಾನಕ್ಕೆ ರಕ್ತದಾನ ಮಾಡಿಸುವ ಕಾರ್ಯ ಮಾಡಲಾಗಿದೆ. ಇನ್ನು ರಾಜ್ಯದಲ್ಲಿ ನಾಯಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಅಪರೂಪದ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತ ನೀಡಲಾಗಿದ್ದು, ಶೀಘ್ರ ಚೇತರಿಕೆ ಕಾಣಲಿದೆ ಎಂದು ವೈದ್ಯರು ಹೇಳಿದ್ದಾರೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:
ಶಿವಮೊಗ್ಗ (ಡಿ.10) : ಶಿಕಾರಿಪುರ ತಾಲೂಕಿನ ಸೊಪ್ಪಿನಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕಳ ನೀಡಿದ ಆರೋಪದಡಿ ಅದೇ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ.
ಶಾಲೆಯ ಸಹಶಿಕ್ಷಕ ಶಾಂತಕುಮಾರ್ ಅಸಭ್ಯವಾಗಿ ವರ್ತಿಸಿ ಕೆಟ್ಟದಾಗಿ ಸ್ಪರ್ಶ ಮಾಡುತ್ತಾರೆಂದು ವಿದ್ಯಾರ್ಥಿನಿಯರು ಶೀಕ್ಷಕಿಯರಿಗೆ ಹೇಳಿದ್ದಾರೆ. ಈ ಬಗ್ಗೆ ಮುಖ್ಯಶಿಕ್ಷಕರ ಗಮನಕ್ಕೆ ತರಲಾಗಿತ್ತು. ಆದರೂ, ಸಹಾಯಕ ಶಿಕ್ಷಕ ಶಾಂತಕುಮಾರ್ ವಿರುದ್ಧ ಮುಖ್ಯ ಶಿಕ್ಷಕ ನಾಗರಾಜ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮುಖ್ಯ ಶಿಕ್ಷಕರ ವರ್ತನೆ ವಿರುದ್ಧ ಪೋಷಕರು ಅಸಮಾಧಾನ ಹೊರಹಾಕಿದ್ದರು. ಬಳಿಕ ಪೋಷಕರು, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ವಲಯದಲ್ಲಿ ತೀವ್ರ ಚರ್ಚೆ, ಪ್ರತಿರೋಧದ ನಂತರ ಡಿ. 2ರಂದು ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಡಿ. 4ರಂದು ಮುಖ್ಯಶಿಕ್ಷಕರು 29 ಪುಟಗಳ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಿದ್ದರು.
47 ಹಿರಿಯ ಪ್ರಾಥಮಿಕ ಶಾಲೆಗಳ ಉತ್ತತೀಕರಣ: ಸಚಿವ ಮಧು ಬಂಗಾರಪ್ಪ
ಡಿ. 5ರಂದು ಕ್ಷೇತ್ರ ಶಿಕ್ಷಣಾಧಿಕಾರಿ, ವಿವಿಧ ಅಧಿಕಾರಿಗಳ ತಂಡದೊಂದಿಗೆ ತೆರಳಿ ಮಕ್ಕಳಿಂದ, ಶಿಕ್ಷಕರಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದು, 15 ಪುಟಗಳ ವರದಿ ಸಿದ್ಧಪಡಿಸಿದ್ದರು. ಡಿ. 6ರಂದು ಪೊಲೀಸ್ ಅಧಿಕಾರಿಗಳು ಬೆಳಗ್ಗೆ ಶಾಲೆಗೆ ತೆರಳಿ ಘಟನೆ ಕುರಿತು ಶಿಕ್ಷಕರು, ಮುಖ್ಯಶಿಕ್ಷಕರು, ಸಂತ್ರಸ್ತ ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆದು ಜಿಲ್ಲಾಮಟ್ಟದ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದರು. ಡಿ. 8ರಂದು ಶಾಲೆಗೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಈ ಇಬ್ಬರು ಶಿಕ್ಷಕರ ಮೇಲೆ ವಿದ್ಯಾರ್ಥಿನಿಯರಿಗೆ ಲೈಗಿಂಕ ಕಿರುಕುಳ ನೀಡುತ್ತಿರುವ ಬಗ್ಗೆ ಅಪಾದನೆ ಕೇಳಿಬಂದ ಹಿನ್ನೆಲೆ ಬ್ಲಾಕ್ ಶಿಕ್ಷಣಾಧಿಕಾರಿ ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ಉಪನಿರ್ದೇಶಕ ಪರಮೇಶ್ವರಪ್ಪ ಅವರು ಸಂಬಂಧಪಟ್ಟ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ನಾಗರಾಜ್, ಸಹಶಿಕ್ಷಕ ಶಾಂತಕುಮಾರ್ ಸೇರಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.