ತನ್ನ ವಿವಾದಿತ ಮಾತುಗಳಿಂದಲೇ ಸುದ್ದಿಯಾಗುತ್ತಿದ್ದ ಕನ್ನಡದ ನಟ ಚೇತನ್‌ ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಕೇಂದ್ರ ಗೃಹ ಇಲಾಖೆ ಈ ನಿರ್ಧಾರ ಮಾಡಿದೆ.

ಬೆಂಗಳೂರು (ಏ.15): ಹಿಂದುಗಳನ್ನು ಕೆರಳಿಸುವಂಥ ಹೇಳಿಕೆಗಳನ್ನು ನೀಡುವ ಮೂಲಕವೇ ಸುದ್ದಿಯಾಗುತ್ತಿದ್ದ ನಟ ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾ ಹೊಂದಿದ್ದ ಚೇತನ್‌, ಹೋರಾಟದ ಮೂಲಕವೇ ಇಲ್ಲಿ ಸುದ್ದಿಯಾಗಿದ್ದರು. ಏಪ್ರಿಲ್ 14 ರಂದು, ಚೇತನ್ ಅವರು ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ (FRRO) ಪತ್ರವನ್ನು ಸ್ವೀಕರಿಸಿದ್ಪದಾರೆ. ತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಅವರ OCI ಕಾರ್ಡ್ ಅನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಬಲಪಂಥೀಯ ರಾಜಕೀಯವನ್ನು ಟೀಕೆ ಮಾಡುತ್ತಲೇ, ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಮಾರ್ಚ್ 21 ರಂದು ಅವರನ್ನು ಬಂಧಿಸಿದ್ದರು.

ಈ ಬಗ್ಗೆ ಪ್ರತಿಕಾ ಗೋಷ್ಠಿ ನಡೆಸಿದ ಚೇತನ್ , 23 ವರ್ಷಗಳ ಕಾಲ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತರ, ಸೇವೆ ಸಲ್ಲಿಸಲು ಭಾರತಕ್ಕೆ ಬಂದೆ. ಆದಾದ ನಂತರ ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನು ಕಟ್ಟಿಸಿದ್ದೇನೆ. ನಮ್ಮ ಸಿದ್ದಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ. ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ನನ್ನ ಮೇಲೆ 295A ಕೇಸ್ ಹಾಕಿದರು. ಗನ್ ಮ್ಯಾನ್ ನನ್ನು ಒಂದೂವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಮೂರು ದಿನ ಜೈಲಿಗೆ ಕಳುಹಿಸಿದ್ದರು.

ಓಸಿಐ (ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಅಥವಾ ಸಾಗರೋತ್ತರ ಭಾರತೀಯ ನಾಗರೀಕ ) ವೀಸಾ ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕೋದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡೋದು ಬಿಟ್ಟರೆ ಎಲ್ಲ ಹಕ್ಕು ಸಿಗುತ್ನೀತದೆ. ನೀವು ತುಂಬ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಾ. ಹೀಗಾಗಿ ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಅಂತ 10 ತಿಂಗಳ ಹಿಂದೆ (2022ರ ಜೂನ್ 8) ಶೋಕಾಸ್ ನೋಟೀಸ್ ನೀಡಿದದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದ್ದಿದೆ. ಶುಕ್ರವಾರ ಮತ್ತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಅಂತ ವೀಸಾ ರದ್ದು ನೋಟೀಸ್ ನೀಡಿದ್ದಾರೆ. 

ಒಸಿಐ ಕಾರ್ಡ್‌ ರದ್ದು, ದೇಶದಿಂದ ಗಡಿಪಾರಾಗ್ತಾರಾ ಚೇತನ್‌ ಅಹಿಂಸಾ?

ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು ಹಾಕುವುದಲ್ಲದೇ, ಜೈಲಿಗೆ ಹಾಕಿ ಹಿಂಸೆ ಮಾಡೋದಲ್ಲದೆ, ನಾನು ದೇಶದಲ್ವೀಲಿ ಇರಲೇ ಬಾರದು ಅಂತಾ ವೀಸಾ ರದ್ದು ಮಾಡಿದ್ದಾರೆ. ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ತಡೆಯಾಜ್ಞೆ ತರಲಿದ್ದೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ತಡೆಯಾಜ್ಞೆ ತರುತ್ತೇನೆ ಎಂದು ಚೇತನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕರ್ನಾಟಕ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲಿ; ನಟ ಚೇತನ್ ಮನವಿ

 ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರ ಮೇಲೆ ಸಂಶೋಧನಾ ಪದವಿ ತೆಗೆದುಕೊಂಡು 2005ರಲ್ಲಿ ನಾನು ಭಾರತಕ್ಕೆ ಬಂದಿದ್ದೇನೆ. 2015ರಿಂದ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೇ ಆಗಿದ್ದಾರೆ 2018 ರಲ್ಲಿ ನನಗೆ ಓಸಿಐ ಕೊಟ್ಟಿದ್ದಾರೆ. ಅದರ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ ಎಲ್ಲವೂ ಇದೆ. ನಾನು ಕೂಡ ಇದೇ ದೇಶಕ್ಕೆ ಆದಾಯ ತೆರಿಗೆ ಕಟ್ಟುತ್ತೇನೆ.ಈಗ ತಕ್ಷಣವೇ ಓಸಿಐ ರದ್ದು ಮಾಡಲಾಗಿದೆ ಅಂತ ನೋಟೀಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದು ಚೇತನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.