ಖ್ಯಾತ ಸಾಹಿತಿಗಳ ಕೃತಿ ಮುಖಪುಟ ಪ್ರದರ್ಶನ ಅಪರೂಪದ ಪ್ರದರ್ಶನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನಲ್ಲಿ ಆಯೋಜನೆ ನಿರ್ದೇಶಕ ನಾಗಾಭರಣ ಚಾಲನೆ

ಬೆಂಗಳೂರು (ಅ.31) : ನಾಡಿನ ಖ್ಯಾತ ಸಾಹಿತಿಗಳು ಬರೆದ ಕೃತಿಗಳ ವಿವರ, ಆಯ್ದ ಕೃತಿಗಳ ಅಂದವಾದ ಮುಖಪುಟ, ಸಾಹಿತಿಗಳ ಕುರಿತ ಮಾಹಿತಿಗಳನ್ನು ಒಳಗೊಂಡ ವಿಶಿಷ್ಟರೀತಿಯ ಚಿತ್ರ ಪ್ರದರ್ಶನ ನಗರದ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನಲ್ಲಿ ಆರಂಭವಾಗಿದೆ. ಕುವೆಂಪು, ಪುತಿನ, ಜಿ.ಎಸ್‌.ಶಿವರುದ್ರಪ್ಪ, ಚಂದ್ರಶೇಖರ್‌ ಕಂಬಾರ, ಯು.ಆರ್‌.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಜಯಂತ್‌ ಕಾಯ್ಕಿಣಿ, ಸಾಯಿಸುತೆ, ಸುಧಾಮೂರ್ತಿ ಸೇರಿದಂತೆ 61 ಸಾಹಿತಿಗಳ ಕೃತಿಗಳು, ಹಲವು ದಶಕಗಳ ಹಿಂದಿನ ಕೃತಿಗಳ ಬಣ್ಣದ ಮುಖಪುಟಗಳನ್ನು ವೀಕ್ಷಿಸಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಬಲ್ಲವರನ್ನೆಲ್ಲ ಕನ್ನಡಿಗ ಅಂತ ಪರಿಗಣಿಸಿ: ಕಸಾಪ

ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ, ಕಾದಂಬರಿಗಳ ಪರಿಚಯ ನೀಡುವ ವಿಶಿಷ್ಟರೀತಿಯ ಈ ಚಿತ್ರ ಪ್ರದರ್ಶನ ಅಪರೂಪದ್ದಾಗಿದೆ. ಕಾದಂಬರಿ ಮತ್ತು ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಲು ಯುವ ಜನರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ನಾಗಮಂಡಲ, ಚಿಗುರಿದ ಕನಸು, ಜನುಮದ ಜೋಡಿ ಮತ್ತಿತರ ಸಿನಿಮಾಗಳ ಮೂಲ ಕಾದಂಬರಿಗಳ ಮುಖ ಪುಟವನ್ನು ನೋಡಿ ಖುಷಿಯಾಯಿತು. ಇಂತಹ ಒಳ್ಳೆಯ ಕೆಲಸ ಮಾಡಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನ ಕಾರ್ಯ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಸಾಹಿತ್ಯ ಮತ್ತು ಸಾಹಿತಿಗಳನ್ನು ಕಾಣಿಸುವ ಕ್ರಿಯೆಯನ್ನು ಇಲ್ಲಿ ಮಾಡಲಾಗಿದೆ. ಈ ಪ್ರದರ್ಶನವನ್ನು ನೋಡಿ ಸ್ಫೂರ್ತಿಗೊಂಡು ನಾಡಿನ ಹಲವೆಡೆ ಇಂತಹ ಪ್ರದರ್ಶನಗಳು ಆಯೋಜನೆಯಾಗುವ ವಿಶ್ವಾಸವಿದೆ. ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನಗಳಂತಹ ಬೃಹತ್‌ ವೇದಿಕೆಯನ್ನೂ ಇದಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಲೇಖಕಿಯರಾದ ಡಾ ವಿಜಯಲಕ್ಷ್ಮಿ ಬಾಳೇಕುಂದ್ರಿ, ಡಾ ಟಿ.ಎಸ್‌.ಸತ್ಯವತಿ, ಚಿತ್ರ ಕಲಾವಿದ ಪ.ಸ.ಕುಮಾರ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನ ಕಾರ್ಯದರ್ಶಿ ಅರಕಲಿ ವೆಂಕಟೇಶ್‌, ಕಾರ್ಯಕಾರಿ ಸದಸ್ಯ ಕೆ.ಎಸ್‌.ಸತೀಶ್‌ ಹಾಜರಿದ್ದರು.

ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಪ್ರದರ್ಶನದಲ್ಲಿ ಏನಿದೆ

ಕುವೆಂಪು, ಪುತಿನ, ವಿ.ಕೃ.ಗೋಕಾಕ್‌, ಜಿ.ಎಸ್‌.ಶಿವರುದ್ರಪ್ಪ, ಕೆ.ಎಸ್‌.ನರಸಿಂಹಸ್ವಾಮಿ, ತರಾಸು, ಅನಕೃ, ಡಿ.ವಿ.ಗುಂಡಪ್ಪ, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ, ಎಚ್‌.ಎಸ್‌.ವೆಂಕಟೇಶಮೂರ್ತಿ, ಎಸ್‌.ಎಲ್‌.ಭೈರಪ್ಪ, ಸಾಯಿಸುತೆ, ಬೀಚಿ, ಚಂದ್ರಶೇಖರ ಪಾಟೀಲ, ಅನುಪಮಾ ನಿರಂಜನ, ಬರಗೂರು ರಾಮಚಂದ್ರಪ್ಪ, ಯು.ಆರ್‌.ಅನಂತಮೂರ್ತಿ, ಯಶವಂತ ಚಿತ್ತಾಲ, ನಿಸಾರ್‌ ಅಹಮದ್‌, ಜಯಂತ ಕಾಯ್ಕಿಣಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಶತಾವಧಾನಿ ಆರ್‌.ಗಣೇಶ್‌, ಸುಧಾ ಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ಕೃತಿಗಳ ಮುಖಪುಟ, ವಿವರಗಳ ಪ್ರದರ್ಶನವಿದೆ. ನ.10 ರವರೆಗೆ ಬೆಳಗ್ಗೆ 10ರಿಂದ ಸಂಜೆ 7ರವರೆಗೂ ಪ್ರದರ್ಶನ ನಡೆಯಲಿದೆ.