ಇಡ್ಲಿ ವಡಾ ಪಾರ್ಸೆಲ್ ತರಲು ಬಂದಿದ್ದ ಶಿಕ್ಷಕನಿಗೆ ಹೋಟೆಲ್ ಮಾಲೀಕ ತರಾತುರಿಯಲ್ಲಿ ಹಣದ ಬ್ಯಾಗ್ ಬಂಡಲ್ ಪಾರ್ಸೆಲ್ ಮಾಡಿ ಕೊಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ಕೊಪ್ಪಳ (ಜು.21) ಇಡ್ಲಿ ವಡಾ ಪಾರ್ಸೆಲ್ ತರಲು ಬಂದಿದ್ದ ಶಿಕ್ಷಕನಿಗೆ ಹೋಟೆಲ್ ಹಣದ ಬ್ಯಾಗ್ ಪಾರ್ಸೆಲ್ ಮಾಡಿ ಕೊಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

ನಗರದ ಶ್ರೀನಿವಾಸ ದೇಸಾಯಿ ಎಂಬ ಶಿಕ್ಷಕ ತಿಂಡಿ ತರಲು ಹೋಗಿದ್ದಾನೆ. ಈ ವೇಳೆ ಗಡಿಬಿಡಿಯಲ್ಲಿ ಇಡ್ಲಿ ವಡಾ ಪಾರ್ಸೆಲ್ ಬ್ಯಾಗ್‌ನಲ್ಲಿ ಹಾಕುವ ಬದಲು ವ್ಯಾಪಾರದಿಂದ ಬಂದಿದ್ದ ಹಣದ ಬಂಡಲ್ ಹಾಕಿ ಪಾರ್ಸೆಲ್ ಮಾಡಿಕೊಟ್ಟಿರುವ ಹೋಟೆಲ್ ಮಾಲೀಕ ರಸೂಲ್ ಸಾಬ ಸೌದಾಗರ್. ಹೋಟೆಲ್‌ನಿಂದ ಮನೆಗೆ ಬಂದ ಶಿಕ್ಷಕ ಪಾರ್ಸೆಲ್ ಬಿಚ್ಚಿ ನೋಡಿದಾಗ ಶಾಕ್ ಆಗಿದ್ದಾರೆ. ಅದರಲ್ಲಿ ಇಡ್ಲಿ ವಡಾ ಬದಲು ಹಣದ ಬಂಡಲ್ಲೇ ಸಿಕ್ಕಿದೆ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಬಿಬಿಎಂಪಿ ಅಧಿಸೂಚನೆ

ಪ್ರಾಮಾಣಿಕತೆ ಮೆರೆದ ಶಿಕ್ಷಕ:

ಯೋಚನೆ ಮಾಡಿ ದಾರಿಯಲ್ಲಿ ಐದು ಸಿಕ್ಕರೂ ಹಣೆ ಹೊತ್ತಿಕೊಂಡು ಜೇಬಿಗೆ ಹಾಕಿಕೊಳ್ಳುವ ಜನರಿರುವ ಈ ಕಲಿಗಾಲದಲ್ಲಿ ತಾನಾಗೇ 50 ಸಾವಿರ ರೂಪಾಯಿ ಹಣದ ಬಂಡಲ್ ಸಿಕ್ಕರೆ ಬಿಟ್ಟರೆಯೇ? ಆದರೆ ಶಿಕ್ಷಕ ಶ್ರೀನಿವಾಸ ದೇಸಾಯಿ ಪ್ರಾಮಾಣಿಕವಾಗಿ ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕ ಮೆರೆದಿದ್ದಾರೆ.

ಕಂಡಕ್ಟರ್‌ಗೆ ಬಸ್‌ನಲ್ಲಿ ಸಿಕ್ತು 3 ಲಕ್ಷ ಮೌಲ್ಯದ ಚಿನ್ನ! ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್‌

ಪಾರ್ಸೆಲ್ ಬ್ಯಾಗ್‌ನಲ್ಲಿ ಹಣದ ಬಂಡಲ್ ಕಾಣುತ್ತಿದ್ದಂತೆ ತಡಮಾಡದೇ ಬ್ಯಾಗ್ ಸಮೇತ ಹೋಟೆಲ್‌ಗೆ ಬಂದು ರಸೂಲ್‌ ಸಾಬ್ ಸೌದಾಗರ್ ಗೆ ಹಣ ಮರಳಿಸಿದ್ದಾರೆ. ವ್ಯಾಪಾರದಿಂದ ಬಂದ ಲಾಭದ ಹಣವನ್ನು ಬ್ಯಾಂಕ್‌ಗೆ ಕಟ್ಟಲು ಕೂಡಿಟ್ಟಿದ್ದರು. ಇದೇ ವೇಳೆ ತಿಂಡಿ ಪಾರ್ಸೆಲ್ ತರಲು ಬಂದಿರುವ ಶಿಕ್ಷಕ. ಹೀಗಾಗಿ ಗಡಿಬಿಡಿಯಲ್ಲಿ ಹಣದ ಬಂಡಲ್ಲನ್ನೇ ಪಾರ್ಸೆಲ್ಲ ಮಾಡಿರುವ ಹೋಟೆಲ್ ಮಾಲೀಕ. 

ಶಿಕ್ಷಕರಿಗೆ ಧನ್ಯವಾದ ಹೇಳಿದ ಹೋಟೆಲ್ ಮಾಲೀಕ. ಇಂತಹ ಶಿಕ್ಷಕನ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.