ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಬಿಬಿಎಂಪಿ ಅಧಿಸೂಚನೆ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಲಾದ ‘ಬಿಬಿಎಂಪಿ ಜಾಹೀರಾತು ಉಪ ವಿಧಿ-2024’ರ ಕರಡು ಅಧಿಸೂಚನೆಯನ್ನು ರಾಜ್ಯಪತ್ರದ ಮೂಲಕ ಶನಿವಾರ ಪ್ರಕಟಿಸಲಾಗಿದೆ.

BBMP notification for outdoor advertisement display again in Bangalore rav

ಬೆಂಗಳೂರು (ಜು.21) :  ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಲಾದ ‘ಬಿಬಿಎಂಪಿ ಜಾಹೀರಾತು ಉಪ ವಿಧಿ-2024’ರ ಕರಡು ಅಧಿಸೂಚನೆಯನ್ನು ರಾಜ್ಯಪತ್ರದ ಮೂಲಕ ಶನಿವಾರ ಪ್ರಕಟಿಸಲಾಗಿದೆ.

ಜಾಹೀರಾತು ಉಪ ವಿಧಿಗೆ ಸಂಬಂಧಿಸಿದ ಆಕ್ಷೇಪಣೆ ಸಲ್ಲಿಸುವುದಕ್ಕೆ 30 ದಿನ ಕಾಲಾವಕಾಶ ನೀಡಲಾಗಿದ್ದು, ಆಕ್ಷೇಪಣೆಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಆಯುಕ್ತರ ಕಚೇರಿಗೆ ಸಲ್ಲಿಸವಂತೆ ತಿಳಿಸಲಾಗಿದೆ.

ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ, ರಸ್ತೆ, ಸರ್ಕಲ್‌ ಮತ್ತು ವಲಯವಾರು ಟೆಂಡರ್‌ ಮೂಲಕ ಜಾಹಿರಾತು ಪ್ರದರ್ಶನಕ್ಕೆ ಅವಕಾಶ, ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ ₹5 ಲಕ್ಷ ಶುಲ್ಕ ಪಾವತಿಸಿ ನೋಂದಣಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಬಿಬಿಎಂಪಿಯು ‘ಜಾಹೀರಾತು ಉಪ ವಿಧಿ-2024’ ರೂಪಿಸಿದೆ. ಮುಖ್ಯವಾಗಿ ಪರಿಸರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು.

ದುಪಟ್ಟು ದಂಡ:

ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ರಸ್ತೆ, ವೃತ್ತದಲ್ಲಿ ಗುತ್ತಿಗೆ ಪಡೆದ ದರದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ. ಅನಧಿಕೃತ ಜಾಹೀರಾತು ತೆರವು ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ ಅಂಗಡಿ- ಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಫಲಕ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಫಲಕ ಅಳವಡಿಕೆ ಮಾಡಿದರೆ ಶುಲ್ಕ ಪಾವತಿಸಿ ಕ್ರಮಬದ್ಧಗೊಳಿಸಬಹುದು. ಇಲ್ಲವಾದರೆ ಪಾಲಿಕೆ ತೆರವುಗೊಳಿಸಲಿದೆ.

ಬಸ್‌, ಆಟೋಗೂ ಶುಲ್ಕ:

ಬಿಎಂಟಿಸಿ ಹಾಗೂ ಖಾಸಗಿ ಬಸ್‌, ಆಟೋ ಸೇರಿದಂತೆ ಇತರೆ ವಾಹನಗಳ ಮೇಲೆ ಪ್ರದರ್ಶಿಸುವ ಜಾಹೀರಾತುಗಳಿಗೆ ಬಿಬಿಎಂಪಿ(BBMP)ಯಿಂದ ಅನುಮೋದನೆ ಪಡೆಯುವುದರೊಂದಿಗೆ ಶುಲ್ಕ ಪಾವತಿಸಬೇಕಿದೆ. ನಗರದಲ್ಲಿ ಜಾಹೀರಾತು ನಿಯಂತ್ರಣಕ್ಕೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.

ಜಾಹೀರಾತು ನಿಷೇಧಿತ ಪ್ರದೇಶಗಳು

ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ಇಲ್ಲ. ಕುಮಾರ ಕೃಪಾ ರಸ್ತೆ (ವಿಂಡ್ಸರ್ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ), ರಾಜಭವನ ರಸ್ತೆಯಲ್ಲಿ (ಹೈಗ್ರೌಂಡ್ಸ್‌ನಿಂದ ಮಿನ್ಸ್‌ ಸ್ಕ್ಯಾರ್‌ವರೆಗೆ), ಸ್ಯಾಂಕಿ ರಸ್ತೆಯಲ್ಲಿ (ಹೈ ಗ್ರೌಂಡ್ಸ್‌ನಿಂದ ವಿಂಡ್ಸರ್ ಸಿಗ್ನಲ್‌ವರೆಗೆ), ಅಂಬೇಡ್ಕರ್ ವೀಧಿ (ಕೆಆರ್ ವೃತ್ತದಿಂದ ಇನ್‌ಫೆಂಟ್ರಿ ರಸ್ತೆವರೆಗೆ), ಪೋಸ್ಟ್‌ ಆಪೀಸ್‌ ರಸ್ತೆ (ಕೆಆರ್‌ ಜಂಕ್ಷನ್‌ನಿಂದ ಎಸ್‌ಬಿಐ ಜಂಕ್ಷನ್‌), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ (ಶೇಷಾದ್ರಿ ರಸ್ತೆ), ಕೆಆರ್ ವೃತ್ತ, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಆವರಣ, ನೃಪತುಂಗ ರಸ್ತೆ (ಕೆಆರ್ ವೃತ್ತದಿಂದ ಹಡ್ಸನ್ ವೃತ್ತ) ಮತ್ತು ಅರಮನೆ ರಸ್ತೆ (ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ)ದ ವರೆಗೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚು, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.

ಯಾವ ರಸ್ತೆಯಲ್ಲಿ ಎಷ್ಟು ಅಡಿ ಪ್ರದರ್ಶನಕ್ಕೆ ಅವಕಾಶ?

ರಸ್ತೆಪ್ರದರ್ಶನ ವಿಸ್ತೀರ್ಣ (ಚದರಡಿ)

60 ಅಡಿ800

80 ಅಡಿ1000

100 ಅಡಿ1100

200 ಅಡಿ1200

1 ಲಕ್ಷ (ಚದರಡಿ ವೃತ್ತ)3000--ಬಾಕ್ಸ್‌---

ಪ್ರತಿ ಚದರಡಿ ಮಾರ್ಗಸೂಚಿಸದರ ಆಧಾರಿಸಿದ ದರ ಪಟ್ಟಿ

ಮಾರ್ಗಸೂಚಿದರದ ರಸ್ತೆ/ವೃತ್ತಪ್ರತಿ ಚದರಡಿ ಜಾಹೀರಾತು ದರ (ತಿಂಗಳಿಗೆ)

ಚದರಡಿಗೆ ₹3,000ಕ್ಕಿಂತ ಕಡಿಮೆ₹40

ಚದರಡಿಗೆ ₹3,000 ರಿಂದ ₹5,000ಕ್ಕಿಂತ ಕಡಿಮೆ₹50

ಚದರಡಿಗೆ ₹5,000 ₹10,000 ಕ್ಕಿಂತ ಕಡಿಮೆ₹60

ಚದರಡಿಗೆ ₹10,000 ರಿಂದ ₹20000 ಕ್ಕಿಂತ ಕಡಿಮೆ ₹70

ಚದರಡಿಗೆ ₹20,000 ರಿಂದ ₹50,000 ಸಾವಿರಕ್ಕಿಂತ ಕಡಿಮೆ ₹80

ಚದರಡಿಗೆ ₹50,000 ದಿಂದ ₹1 ಲಕ್ಷಕ್ಕಿಂತ ಕಡಿಮೆ ₹90

ಚದರಡಿಗೆ ₹1 ಲಕ್ಷ ದಿಂದ ₹2 ಲಕ್ಷ ಕ್ಕಿಂತ ಕಡಿಮೆ ₹100

ಚದರಡಿಗೆ ₹2 ಲಕ್ಷಕ್ಕಿಂತ ಹೆಚ್ಚಿರುವ ₹110

ವಿವಿಧ ಬಗೆಯ ಬಾಹೀರಾತು ಪ್ರದರ್ಶನದ ದರ

*ಖಾಸಗಿ ಮತ್ತು ಸಾರ್ವಜನಿಕ ಬಸ್‌ 10 ಅಡಿ ಪ್ರರ್ದಶಿಸಬಹುದು. ಪ್ರತಿ ಚದರಡಿಗೆ ₹50 ಅಥವಾ ಮಾಸಿಕ ₹500

*ಮೆಟ್ರೋ ರೈಲು ಜಾಹೀರಾತಿನ ಪ್ರತಿ ಚದರಡಿಗೆ ₹50 ಅಥವಾ ಇಡೀ ಬೋಗಿಗೆ ಮಾಸಿಕ ₹750

*ವಿತರಣಾ ವಾಹನ ಮತ್ತು ಸೇವಾ ವಾಹನ 6 ಅಡಿ ಪ್ರರ್ದಶಿಸಬಹುದು. ಪ್ರತಿ ಚದರಡಿಗೆ ₹75 ಅಥವಾ ಮಾಸಿಕ ₹750

*ಟ್ಯಾಕ್ಸಿ, ಆಟೋ, ಸಾರ್ವಜನಿಕ ಸಂಚಾರಿ ವಾಹನದಲ್ಲಿ 6 ಅಡಿ ಪ್ರರ್ದಶಿಸಬಹುದು. ಪ್ರತಿ ಚದರಡಿಗೆ ಮಾಸಿಕ ₹50 ಅಥವಾ ಮಾಸಿಕ ₹500

Latest Videos
Follow Us:
Download App:
  • android
  • ios